ಭೋಪಾಲ್: ದಂಪತಿ ತಮ್ಮ ನವಜಾತ ಗಂಡು ಮಗುವಿಗೆ ಲಾಕ್​ಡೌನ್​ ಎಂಬ ಹೆಸರು ನಾಮಕರಣ ಮಾಡಿ ಕರೊನಾ ವೈರಸ್​ ಸೋಂಕು ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಿದ್ದಾರೆ.
ಶಿಯೋಪೂರ್​ ಜಿಲ್ಲೆಯ ಬಚೇರಿ ಗ್ರಾಮದ ರಘುನಾಥ್​ ಮಾಲಿ ಹಾಗೂ ಅವರ ಪತ್ನಿ ಮಂಜು ತಮ್ಮ ಮಗುವಿಗೆ ಲಾಕ್​ಡೌನ್​ ಈ ಹೆಸರು ನಾಮಕರಣ ಮಾಡಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.
ಮಂಜು ಅವರು ಏ.6ರಂದು ಶಿಯೋಪುರ್​ ನಗರದ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದರು. ಕರೊನಾ ವೈರಸ್​ ಸೋಂಕು ತಡೆಗೆ ರಾಷ್ಟ್ರದಲ್ಲಿ ಲಾಕ್​ಡೌನ್​ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಮಸ್ಯೆ ಆಗಿದೆ. ಹೀಗಾಗಿ ವೈರಸ್​ ಅನ್ನು ಯುದ್ಧದ ಮಾದರಿಯಲ್ಲಿ ಎದುರಿಸಬೇಕು. ಇದಕ್ಕಾಗಿ ನಾನು ನನ್ನ ಮಗನಿಗೆ ಲಾಕ್​ಡೌನ್​ ಹೆಸರು ನಾಮಕರಣ ಮಾಡಿದ್ದೇನೆ. ಇದಕ್ಕೆ ಪತ್ನಿ ಕೂಡ ಸಮ್ಮಿತಿಸಿದ್ದಾರೆ ಎಂದು ರಘುನಾಥ್​ ಮಾಲಿ ತಿಳಿಸಿದರು.
2ನೇ ಮಹಾಯುದ್ಧ ನಡೆದ ಈ ವೇಳೆ ಈ ರೀತಿಯ ಪರಿಸ್ಥಿತಿ ಎದುರಾಗಿತ್ತಂತೆ. ಈಗ ಕರೊನಾ ವೈರಸ್​ ಹಾವಳಿಯಿಂದ ಸಮಸ್ಯೆ ಎದುರಾಗಿದೆ. ಲಾಕ್​ಡೌನ್​ ಎಂದು ಹೆಸರು ನಾಮಕರಣ ಮಾಡಿದರೆ ಎಲ್ಲರಿಗೂ ವೈರಸ್​ ವಿರುದ್ಧ ಸೆಣೆಸಾಡಿದ ನೆನಪು ಬರುತ್ತದೆ. ಹೀಗಾಗಿ ಹೆಸರು ನಾಮಕರಣ ಮಾಡಿದ್ದೇನೆ ಎಂದು ರಘುನಾಥ್​ ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)
ಗೂಗಲ್‌ನಿಂದ ನಿರಾಶ್ರಿತರಿಗಾಗಿ ಹೊಸ ಫೀಚರ್‌: ಆಹಾರ ಮತ್ತು ಸ್ಥಳಾವಕಾಶ ತಿಳಿಯಲು ಸಹಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × one =
Remember me
