ನವದೆಹಲಿ:ಮೇಡಂ/ ಸರ್​… ನಾನಿನ್ನೂ ಅಪ್ರಾಪ್ತೆ. ಮದುವೆಯಾಗುವಂತೆ ನನ್ನ ಅಪ್ಪ-ಅಮ್ಮ ದಿನವೂ ಹಿಂಸಿಸುತ್ತಿದ್ದಾರೆ. ಹೊಡೆಯುತ್ತಿದ್ದಾರೆ. ಲಾಕ್​ಡೌನ್​ ಇರುವ ಕಾರಣ ನಾನು ಹೊರಗೆಲ್ಲೂ ಹೋಗುವ ಧೈರ್ಯ ಮಾಡುವುದಿಲ್ಲ ಎನ್ನುವ ಕಾರಣದಿಂದ ಇದೀಗ ಹಿಂಸೆ ಹೆಚ್ಚಾಗಿಬಿಟ್ಟಿದೆ. ನನಗೆ ಮದುವೆ ಇಷ್ಟವಿಲ್ಲ… ದಯವಿಟ್ಟು ನನ್ನನ್ನು ಕಾಪಾಡಿ, ನನ್ನ ಜೀವ ಉಳಿಸಿ…
ಮಾನ್ಯರೇ, ನಾನು ಮಗಳ ಮನೆಯಲ್ಲಿ ಆಕೆಯ ಜತೆ ನೆಲೆಸಿದ್ದೇನೆ. ಈಗ ನನ್ನ ಅಳಿಯ ನನ್ನನ್ನು ಹೊರಕ್ಕೆ ಹಾಕಲು ಹೊಂಚು ಹಾಕುತ್ತಿದ್ದಾನೆ. ಈ ಲಾಕ್​ಡೌನ್​ ಸಮಯದಲ್ಲಿ ನಾನೆಲ್ಲಿ ಹೋಗಲಿ?
ಇದನ್ನೂ ಓದಿ:ಲಾಕ್​ಡೌನ್​ ಎಫೆಕ್ಟ್​: ದಂಪತಿ ನಡುವೆ ಹೆಚ್ಚಿದ ಸರಸ- ಸಲ್ಲಾಪಕ್ಕೆ ವಿಶ್ವ ಸಂಸ್ಥೆ ಬೆಚ್ಚಿ ಬಿದ್ದದ್ದೇಕೆ?
ಸರ್​, ದಯವಿಟ್ಟು ನನ್ನನ್ನು ನನ್ನ ಅತ್ತಿಗೆಯಿಂದ ರಕ್ಷಿಸಿ… ನನ್ನ ಸಹೋದರಿಯ ಮನೆಯಲ್ಲಿ ಆಕೆಗೆ ವರದಕ್ಷಿಣೆ ತರುವಂತೆ ಹಿಂಸಿಸುತ್ತಿದ್ದಾರೆ. ಆಕೆಯನ್ನು ಕಾಪಾಡಿ… ನನ್ನ ಅತ್ತೆ ಮನೆಯಲ್ಲಿ ಹಿಂಸೆ ಆಗುತ್ತಿದೆ ಏನು ಮಾಡಲಿ…?
ಇಂಥ ಎಂಟುನೂರಕ್ಕೂ ಅಧಿಕ ದೂರುಗಳು ರಾಷ್ಟ್ರೀಯ ಮಹಿಳಾ ಆಯೋಗ ಲಾಕ್​ಡೌನ್​ ಸಮಯದಲ್ಲಿ ಸ್ವೀಕರಿಸಿದೆ.ಲಾಕ್​ಡೌನ್​ ಹಿನ್ನೆಲೆಯಲ್ಲಿ ದಂಪತಿಯ ನಡುವೆ ಸರಸ ಹೆಚ್ಚಾಗಿರುವ ವರದಿಯ ಬೆನ್ನಲ್ಲೇ ಕೌಟುಂಬಿಕ ದೌರ್ಜನ್ಯ ಸೇರಿದಂತೆ ಮಹಿಳೆಯರ ಮೇಲೆ ವಿವಿಧ ರೀತಿಯಲ್ಲಿ ಹಿಂಸೆ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದಿವೆ. ಸಾಮಾನ್ಯ ದಿನಗಳಿಗಿಂತ ಕೌಟುಂಬಿಕ ದೌರ್ಜನ್ಯಗಳ ಪ್ರಮಾಣ ಲಾಕ್​ಡೌನ್​ ಸಮಯದಲ್ಲಿ ಹೆಚ್ಚಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಹೇಳಿದ್ದಾರೆ.
ಇದನ್ನೂ ಓದಿ:ಆಟದಲ್ಲಿ ಸೋಲ್ತಾ ಇದ್ದೇನೆಂದು ಹೆಂಡ್ತಿ ಸೊಂಟ ಮುರಿಯೋದಾ? ಅಬ್ಬಬ್ಬಾ ಈ ಪತಿ ಮಹಾಶಯ!
ಲಾಕ್​ಡೌನ್​ ಶುರುವಾದಾಗಿನಿಂದಲೂ ದೌರ್ಜನ್ಯಗಳ ಪ್ರಮಾಣ ಹೆಚ್ಚುತ್ತಿರುವ ಬಗ್ಗೆ ವರದಿ ಬಂದ ಹಿನ್ನೆಲೆಯಲ್ಲಿ ಆಯೋಗವು ಇಂಥ ದೂರುಗಳನ್ನು ನೀಡಲು ವಾಟ್ಸ್​ಆ್ಯಪ್​ ಸಂಖ್ಯೆ7217735372ಪ್ರಾರಂಭಿಸಿದೆ. ಇದರ ಪ್ರಯೋಜನವನ್ನು ಹಲವಾರು ಸ್ತ್ರೀಯರು ಪಡೆದುಕೊಂಡಿದ್ದು, ತಮ್ಮ ಮೇಲಿನ ಹಿಂಸೆಯ ಕುರಿತಂತೆ ವರದಿ ಮಾಡಿದ್ದಾರೆ ಎಂದು ರೇಖಾ ತಿಳಿಸಿದ್ದಾರೆ.
ವಾಟ್ಸ್​ಆ್ಯಪ್​ನಲ್ಲಿ ಒಂದೇ ತಿಂಗಳಲ್ಲಿ 315 ದೂರುಗಳನ್ನು ಸ್ವೀಕರಿಸಲಾಗಿದೆ. ಇದರ ಹೊರತಾಗಿ ಲಾಕ್​ಡೌನ್​ ಅವಧಿಯ ಆರಂಭದಿಂದ 800ಕ್ಕೂ ಅಧಿಕ ದೂರುಗಳು ಬಂದಿವೆ. ಈ ಮುಂಚೆಯೂ ಪೋಸ್ಟ್​ಗಳಲ್ಲಿ ದೂರುಗಳು ಬರುತ್ತಿದ್ದವು. ಆದರೀಗ ವಾಟ್ಸ್​ಆ್ಯಪ್​ ಸಂಖ್ಯೆ ನೀಡಿರುವ ಕಾರಣ, ಮಹಿಳೆಯರಿಗೆ ಅನುಕೂಲ ಆಗಿದೆ ಎಂದಿದ್ದಾರೆ.
ಇದನ್ನೂ ಓದಿ:ಇನ್ನೊಂದು ವರ್ಷ ಕರೊನಾ ಹೊಸ ರೂಲ್ಸ್​: ಫಾಲೋ ಮಾಡದಿದ್ರೆ ಬೀಳತ್ತೆ ದಂಡ!ಅಪ್ರಾಪ್ತೆಯ ದೂರನ್ನು ಆಧರಿಸಿ ತಕ್ಷಣವೇ ಆಕೆಯ ಮನೆಗೆ ಹೋಗಿರುವ ಆಯೋಗದ ಸದಸ್ಯರು, ಬಾಲಕಿಯನ್ನು ಮನೆಯಿಂದ ಕರೆದುತಂದು ಆಶ್ರಯಮನೆಯಲ್ಲಿ ಇರಿಸಿದ್ದಾರೆ. ಅತ್ತಿಗೆಯಿಂದ ಹಿಂಸೆ ಅನುಭವಿಸುತ್ತಿರುವ ಪ್ರಕರಣ ಸೇರಿದಂತೆ ವರದಕ್ಷಿಣೆ ಕಿರುಕುಳು, ಅತ್ತೆ-ಮಾವನಿಂದ ದೈಹಿಕ ಹಿಂಸೆ ಇತ್ಯಾದಿ ಪ್ರಕರಣಗಳು ಹೆಚ್ಚಿಗೆ ಬಂದಿದ್ದು, ಬಹುತೇಕ ಪ್ರಕರಣಗಳಲ್ಲಿ ಪೊಲೀಸರ ಜತೆ ಚರ್ಚಿಸಿ ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಈಗಾಗಲೇ ಹಲವಾರು ಮಂದಿಯ ಸಮಸ್ಯೆ ಪರಿಹಾರ ಮಾಡಲಾಗಿದೆ.
ಇದನ್ನು ಹೊರತುಪಡಿಸಿದರೆ, ಆನ್​ಲೈನ್​ ಮೂಲಕ ವಂಚನೆ ಹೋಗಿರುವ ದೂರುಗಳೂ ಆಯೋಗಕ್ಕೆ ಮಹಿಳೆಯರಿಂದ ಬಂದಿದೆ ಎಂಬ ಮಾಹಿತಿಯನ್ನು ಅಧ್ಯಕ್ಷೆ ನೀಡಿದ್ದಾರೆ.(ಏಜೆನ್ಸೀಸ್​)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:16 − eight =
Remember me
