ಲಂಡನ್‌:ಮನಸ್ಸಿದ್ದರೆ ಮಾರ್ಗ ಎನ್ನುವುದು ಬಹುಶಃ ಇದಕ್ಕೇ ಇರಬೇಕು. ಲಾಕ್‌ಡೌನ್‌ ಅವಧಿಯಲ್ಲಿ ಕೆಲಸ ಕಳೆದುಕೊಂಡವರು ಅದೆಷ್ಟೋ ಮಂದಿ. ಮನೆಯಲ್ಲಿಯೇ ಕೂತು ಹಿಂಸೆ ಅನುಭವಿಸಿದವರಿಗಂತೂ ಲೆಕ್ಕವೇ ಇಲ್ಲ.
ಇಂಥ ಸಮಯದಲ್ಲಿ ಪಾಲಿಗೆ ಬಂದುದು ಪಂಚಾಮೃತ ಎನ್ನುವಂತೆ ಕರೊನಾ ವೈರಸ್‌ ಬಿಕ್ಕಟ್ಟಿನ ಸಮಯವನ್ನೇ ಸದುಪಯೋಗ ಪಡಿಸಿಕೊಂಡು ಲಂಡನ್‌ನ ಅತ್ಯಂತ ಬಡ ದಂಪತಿಯೊಬ್ಬರು ಇದೀಗ ಕೋಟ್ಯಧಿಪತಿಯಾಗಿದ್ದಾರೆ.
ಈ ದಂಪತಿ ಹೆಸರು ರಾಚೆಲ್ ಮಾಂಟೆಗ್ ಮತ್ತು ಅಂಡ್ರ್ಯೂ, ಇವರು ಲಾಕ್‌ಡೌನ್ ಶುರುವಾಗುತ್ತಿದ್ದಂತೆಯೇ ಅಂದರೆ ಕಳೆದ ಮಾರ್ಚ್‌ನಿಂದಲೇ ಹೊಸ ವ್ಯವಹಾರವೊಂದನ್ನು ಪ್ರಾರಂಭಿಸಿದರು. ಇದೀಗ ಮೂರೇ ಮೂರು ತಿಂಗಳಾಗಿದೆ ಈ ವ್ಯವಹಾರಕ್ಕೆ ಇದಾಗಲೇ ಅವರು ಕೋಟ್ಯಧಿಪತಿಯಾಗಿದ್ದಾರೆ.
ಅಷ್ಟಕ್ಕೂ ಅದೆಂಥ ವ್ಯವಹಾರ ಅಂತೀರಾ? ಈಗ ಎಲ್ಲರ ಬಾಯಲ್ಲಿಯೂ ಇರುವ ಸ್ಯಾನಿಟೈಸರ್‌ ವ್ಯವಹಾರ. ಲಂಡನ್‌ನಲ್ಲಿ ಮಾರ್ಚ್‌ನಲ್ಲಿಯೇ ಕರೊನಾ ಸ್ಥಿತಿ ಗಂಭೀರವಾದಾಗ ಎಲ್ಲೆಡೆ ಸ್ಯಾನಿಟೈಸರ್‌ ಹಚ್ಚಿ ಎನ್ನುವ ಮಾತೇ. ಈ ಬಡ ದಂಪತಿ ಸಣ್ಣ ಪುಟ್ಟ ವ್ಯವಹಾರ ಮಾಡಿ ಸಂಸಾರ ಸಾಗಿಸುತ್ತಿದ್ದರು. ಲಾಕ್‌ಡೌನ್‌ನಿಂದಾಗಿ ಆ ಕೆಲಸವೂ ಇರಲಿಲ್ಲ. ನಾಲ್ಕು ಮಕ್ಕಳು ಬೇರೆ.
ಇದನ್ನೂ ಓದಿ:ಸಂಸದೆ ಸುಮಲತಾ ಸಂಪರ್ಕದಲ್ಲಿದ್ದವರಿಗೆ ಆತಂಕ ಶುರು: ಜಿಲ್ಲಾಡಳಿತದಿಂದ ಮಹತ್ವದ ನಿರ್ಧಾರ!​
ಏನು ಮಾಡುವುದು ಎಂಬುದೇ ತೋಚದಾಗ ಅವರ ಕೈಹಿಡಿದದ್ದು ಸ್ಯಾನಿಟೈಸರ್‌ ವ್ಯವಹಾರ. ಮೊದಲು ಸ್ನೇಹಿತರ ಡಿಕೆಡ್‌ ಡಿಸ್ಟಿಲರಿ ಎಂಬ ಸಂಸ್ಥೆಯಲ್ಲಿ ಕೆಲಸ ಪ್ರಾರಂಭಿಸಿದರು. ಇಬ್ಬರೂ ಮಾರ್ಚ್‌ನಿಂದ ಹ್ಯಾಂಡ್ ಸ್ಯಾನಿಟೈಜರ್ ವ್ಯವಹಾರದತ್ತ ಗಮನ ಹರಿಸಿದರು. ನಕಲಿ ಸ್ಯಾನಿಟೈಸರ್‌ ಅದಾಗಲೇ ಮಾರುಕಟ್ಟೆಗೆ ಬಂದಿದ್ದರಿಂದ ಹೈಜಿನಿಕ್‌ ಸ್ಯಾನಿಟೈಸರ್‌ನತ್ತ ಇವರು ಗಮನ ಹರಿಸಿದರು.
ಈ ಸ್ಯಾನಿಟೈಜರ್‌ ನಿರ್ಮಿಸುತ್ತಿದ್ದ ಕಂಪನಿಯು ಹಣಕಾಸಿನ ಕಾರಣಗಳಿಂದಾಗಿ ಮುಚ್ಚುವ ಅಂಚಿನಲ್ಲಿತ್ತು. ಆದರೆ ಅದಕ್ಕೆ ಹೊಸ ರೂಪ ಕೊಟ್ಟರು ದಂಪತಿ. ಅದರಿಂದ ಇದೀಗ ಕೋಟ್ಯಧಿಪತಿಯಾಗಿದ್ದಾರೆ.
ಪ್ಲಾಸ್ಟಿಕ್ ಬಾಟಲಿಗಳಿಗಾಗಿ ಬ್ರಿಟನ್ ಚೀನಾವನ್ನು ಹೆಚ್ಚು ಅವಲಂಬಿಸಿತ್ತು. ಕರೊನಾ ವೈರಸ್‌ ಹಬ್ಬಿಸಿರುವ ಚೀನಾದಿಂದ ತಾವೇಕೆ ಬಾಟಲ್‌ ತರಿಸಬೇಕು ಎಂದುಕೊಂಡ ದಂಪತಿ, ಸ್ಥಳೀಯ ಮಾರುಕಟ್ಟೆಯನ್ನು ಸಂಪರ್ಕಿಸುವ ಮೂಲಕ ಮರುಬಳಕೆ ಮಾಡಬಹುದಾದ ಬಾಟಲಿಗಳನ್ನು ಆರಿಸಿಕೊಂಡರು. ಇದರಿಂದ ಅವರ ಉತ್ಪನ್ನಕ್ಕೆ ಲಂಡನ್‌ನಲ್ಲಿ ಬೇಡಿಕೆ ಹೆಚ್ಚಿತು. ಇದೀಗ ದೊಡ್ಡ ಮಟ್ಟದಲ್ಲಿ ವ್ಯವಹಾರ ಶುರು ಮಾಡಿದ್ದಾರೆ.
ಮದುಮಕ್ಕಳಿಗೆ ಭಾರಿ ಶಾಕ್‌- ಸಾರ್ವಜನಿಕ ಮದುವೆ ಬ್ಯಾನ್‌- ಎಲ್ಲೆಲ್ಲಿ ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nine + 20 =
Remember me
