ಮುಂಬೈ:ಕರೊನಾ ಭೀತಿ ಹಿನ್ನೆಲೆಯಲ್ಲಿ, ಈ ಸಂದರ್ಭದಲ್ಲಿ ಯಾರೇ ಮೃತಪಟ್ಟರೂ ಸಂಬಂಧಿಕರೇ ಹತ್ತಿರ ಬರದ ಪರಿಸ್ಥಿತಿ ಇದೆ. ಕರೊನಾ ಅಲ್ಲದೇ ಬೇರೆ ಯಾವುದೇ ಕಾರಣದಿಂದ ಮೃತಪಟ್ಟರೂ ಅಂತ್ಯಕ್ರಿಯೆಗೆ ಬರಲು ಹೆದರುವ ಸ್ಥಿತಿ ಇಂದಿನದ್ದು.
ಇದರ ಜತೆಗೆ, ಅಂತ್ಯಕ್ರಿಯೆ ಬೇಕಾಗಿರುವ ಸಾಮಗ್ರಿಗಳನ್ನು ತರಲು ಹುಡುಕಾಟ ನಡೆಸುವುದು ಇನ್ನೊಂದು ತಲೆನೋವು. ಇವೆಲ್ಲವುಗಳಿಗೆ ಪರಿಹಾರ ಒದಗಿಸಿದೆ ಸ್ಟಾರ್ಟ್​ಆಪ್​ ಮೂಲಕ ಶುರುವಾಗಿರುವ ಆನ್​ಲೈನ್​ ಸೇವೆ.
ಪುಣೆ ಮೂಲದ ಸ್ಟಾರ್ಟ್‌ಅಪ್ ಗುರೂಜಿ ‘ಮೋಕ್ಷ ಸೇವಾ’ ಎಂಬ ಅನ್​ಲೈನ್​ ಸೇವೆ ಶುರು ಮಾಡಿದೆ. ಮೃತಪಟ್ಟ ವ್ಯಕ್ತಿಯ ಮರಣ ಪ್ರಮಾಣ ಪತ್ರ (ಡೆತ್ ಸರ್ಟಿಫಿಕೇಟ್) ಪಡೆಯಲು, ಚಟ್ಟ ಕಟ್ಟಲು ಸಹಾಯ ಮಾಡುವ, ಸ್ಮಶಾನಕ್ಕೆ ಮೃತದೇಹವನ್ನು ಸಾಗಿಸುವ, ಸ್ಮಶಾನದ ಪಾಸ್ ಪಡೆಯುವ ಮತ್ತು ಅಂತ್ಯ ಸಂಸ್ಕಾರಕ್ಕೆ ಬೇಕಾಗುವ ವಸ್ತುಗಳನ್ನು ಇದೇ ಆನ್‌ಲೈನ್ ಮೂಲಕ ಪಡೆಯಲು ಅನುಕೂಲವನ್ನು ಕಲ್ಪಿಸಲಾಗಿದೆ.
ಇದನ್ನೂ ಓದಿ:ಆಯುಷ್ಮಾನ್​ ಭಾರತ್​ ಯೋಜನೆಯಡಿ ಉದ್ಯೋಗ: ಲಿಂಕ್​ ಕ್ಲಿಕ್​ ಮಾಡುವ ಮುನ್ನ ಎಚ್ಚರ ಎಚ್ಚರ…!
ಅಂತ್ಯ ಸಂಸ್ಕಾರದ ನಂತರ ಮಾಡಬೇಕಾದ ಕ್ರಿಯಾವಿಧಾನಗಳಿಗೂ ಆನ್​ಲೈನ್​ನಲ್ಲಿಯೇ ಸೇವೆ ಸಿಗಲಿದೆ ಎಂದಿದ್ದಾರೆ ಕಂಪನಿಯ ಪಾಲುದಾರ ಪ್ರಣವ್ ಚವರೆ. ಈ ತಿಂಗಳ ಅಂತ್ಯದಲ್ಲಿ ಈ ಎಲ್ಲ ಸೇವೆಗಳು ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಆ ಕುಟುಂಬದ ಸದಸ್ಯರು ಅಂತ್ಯ ಸಂಸ್ಕಾರ ನಿರ್ವಹಿಸಲು ಅಲ್ಲಿ ಇಲ್ಲಿ ಓಡಬೇಕಾಗುತ್ತದೆ. ಆದರೆ ಈಗ ಈ ಸಮಸ್ಯೆ ಇರುವುದಿಲ್ಲ. ನಮ್ಮಲ್ಲಿ ಇದಕ್ಕೆಲ್ಲ ಪರಿಹಾರವಿದೆ ಎಂದು ಪ್ರಣವ್ ಹೇಳಿದ್ದಾರೆ.
ಇದನ್ನೂ ಓದಿ:ಕರೊನಾಘಾತದ ನಡುವೆಯೇ 100ಕಿ.ಮೀ ವೇಗದಲ್ಲಿ ನುಗ್ಗುತಿದೆ ‘ನಿಸರ್ಗ’: ಮುಂಬೈನಲ್ಲಿ ನಡುಕ
ಪ್ರಸ್ತುತ 650 ಅರ್ಚಕರು ಪುಣೆಯ ಪಿಂಪ್ರಿ-ಚಿಂಚ್‌ವಡಾ ಪ್ರದೇಶದಲ್ಲಿದ್ದು, ಕಂಪನಿಯ ಆ್ಯಪ್ ಅಥವಾ ವೆಬ್‌ಸೈಟ್ ಮೂಲಕ ಇವರ ಸೇವೆಗೆ ಬುಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಅಷ್ಟೇ ಅಲ್ಲದೇ, ಯಾವುದಾದರೂ ವ್ಯಕ್ತಿಗೆ ವೈದಿಕರು ಬೇಕಾದರೆ, ಅದೇ ಪ್ರದೇಶದಲ್ಲಿ 5 ಕಿ.ಮೀ ವ್ಯಾಪ್ತಿಯೊಳಗೆ ಲಭ್ಯವಿರುವ ಅರ್ಚಕರನ್ನು ಸಂಪರ್ಕ ಮಾಡಿಕೊಡಲಾಗುವುದು. ಅಗತ್ಯ ಕಂಡುಬಂದರೆ ವಿಡಿಯೊ ಕಾನ್ಫರೆನ್ಸ್ ಮೂಲಕವೂ ಪೂಜೆ ಮಾಡಿಕೊಡಲಾಗುವುದು. ಒಂದು ವೇಳೆ ಅರ್ಚಕರ ಸೇವೆ ಅಗತ್ಯವಿದ್ದಲ್ಲಿ ಸೋಂಕು ತಗುಲದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದಿದ್ದಾರೆ ಪ್ರಣವ್​.
ಬಿಜೆಪಿಯೇತರ ರಾಜ್ಯಗಳಲ್ಲಿಯೂ ಮೋದಿಗೇ ಅಧಿಕ ಫ್ಯಾನ್ಸ್​: ಸಮೀಕ್ಷೆಯಿಂದ ಬಯಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + eleven =
Remember me
