ಮುಂಬೈ:ದೇಶಾದ್ಯಂತ ಜಾರಿಗೊಳಿಸಲಾಗಿರುವ ಕೋವಿಡ್​ 19 ಲಾಕ್​ಡೌನ್​ ಮೇ 3ಕ್ಕೆ ಮುಗಿದರೂ ಮುಂಬೈ ಮತ್ತು ಪುಣೆಯಲ್ಲಿ ಮಾತ್ರ ಲಾಕ್​ಡೌನ್​ ಅನ್ನು ಕಟ್ಟುನಿಟ್ಟಾಗಿ ಮುಂದುವರಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಾಷ್ಟ್ರ ಆರೊಗ್ಯ ಸಚಿವ ರಾಜೇಶ್​ ಟೋಪೆ ಈ ಸುಳಿವು ನೀಡಿದ್ದು, ಮುಂಬೈ ಹಾಗೂ ಪುಣೆಯಲ್ಲಿ ಸೋಂಕು ಹರಡದಂತೆ ಸಂಪೂರ್ಣವಾಗಿ ತಡೆಯದ ಹೊರತು ಲಾಕ್​ಡೌನ್​ ತೆರವುಗೊಳಿಸುವುದಿಲ್ಲ ಎಂದು ಹೇಳಿದ್ದಾರೆ.
ಕರೊನಾ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ದೇಶಾದ್ಯಂತ ಲಾಕ್​ಡೌನ್​ ಘೋಷಿಸಲಾಗಿದೆ. ಆದರೂ ಮುಂಬೈ ಮತ್ತು ಪುಣೆಯಲ್ಲಿ ಸೋಂಕು ಹರಡದಂತೆ ತಡೆಗಟ್ಟಲು ಇದುವರೆಗೆ ಸಾಧ್ಯವಾಗಿಲ್ಲ. ಆದ್ದರಿಂದ, ಮೇ 3ರ ನಂತರದಲ್ಲಿ ಉಭಯ ನಗರಗಳಲ್ಲಿ 15 ದಿನ ಲಾಕ್​ಡೌನ್​ ಮುಂದುವರಿಸುವ ಸಾಧ್ಯತೆ ಇದೆ. ಆದರೆ ಈ ಲಾಕ್​ಡೌನ್​ ಕಂಟೈನ್​ಮೆಂಟ್​ ಪ್ರದೇಶಗಳಿಗೆ ಸೀಮಿತವಾಗಿರಲಿದೆ ಎಂದು ತಿಳಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮುಂಬೈ ಮತ್ತು ಪುಣೆ ಕೋವಿಡ್​ 19 ಹಾಟ್​ಸ್ಪಾಟ್​ಗಳಾಗಿವೆ. ಇದುವರೆಗೂ 6,817 ಕರೊನಾ ಪೀಡಿತರು ಪತ್ತೆಯಾಗಿದ್ದು, ಮುಂಬೈವೊಂದರಲ್ಲೇ 4,447 ಮತ್ತು ಪುಣೆಯಲ್ಲಿ 961 ಸೋಂಕಿತರು ಪತ್ತೆಯಾಗಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಕೋವಿಡ್​ 19 ನಿಯಂತ್ರಣದ ರಾಜಕೀಯ ಜಟಾಪಟಿ; ಕೇಂದ್ರೀಯ ತಂಡಕ್ಕೆ ಮಾಹಿತಿ ಕೊಡದ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 4 =
Remember me
