ನವದೆಹಲಿ:ಸ್ತಬ್ಧಗೊಂಡಿರುವ ಆರ್ಥಿಕ ಚಟುವಟಿಕೆಗಳನ್ನು ಪುನಶ್ಚೇತನಗೊಳಿಸುವ ಉದ್ದೇಶದಿಂದ ಕರೊನಾ ದಾಳಿಗೆ ತುತ್ತಾಗಿರದ ಹಾಗೂ ಪ್ರಕರಣಗಳ ತೀವ್ರತೆ ಕಡಿಮೆ ಇರುವ ಪ್ರದೇಶಗಳಲ್ಲಿ ಸೋಮವಾರದಿಂದ (ಏ.20) ನೀಡಲಾಗುವ ಸೇವೆಗಳು ಮತ್ತು ವಿನಾಯಿತಿಗಳ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯ ಪರಿಷ್ಕರಿಸಿದೆ. ಹಲವು ವಲಯಗಳ ಚಟುವಟಿಕೆಗಳಿಗೆ ಅನುಮತಿ ನೀಡಲಾಗಿದ್ದು, ಇ-ಕಾಮರ್ಸ್ ಕಂಪನಿಗಳ ವಹಿವಾಟನ್ನು ದಿನಸಿ, ಔಷಧ ಸೇರಿದಂತೆ ಅತ್ಯವಶ್ಯಕ ವಸ್ತುಗಳ ಮಾರಾಟಕ್ಕಷ್ಟೇ ಸೀಮಿತಗೊಳಿಸಿದೆ.
ಆರ್ಥಿಕ ಚಟುವಟಿಕೆಗಳಲ್ಲಿ ಬ್ಯಾಂಕಿಂಗೇ ತರ ಹಣಕಾಸು ಸಂಸ್ಥೆಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳನ್ನು ಅಗತ್ಯ ಸೇವೆಗಳ ಪಟ್ಟಿಯಲ್ಲಿ ಗುರುತಿಸಲಾಗಿದ್ದು, ಆಯುಷ್ ಯೋಜನೆಯ ಸೇವೆಗಳು ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಸೇವೆಗಳಿಗೆ ಅನುಮತಿ ಇರುತ್ತದೆ. ಪ್ರಮುಖವಾಗಿ ಕೃಷಿ, ಕೈಗಾರಿಕೆ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದಂತಹ ಎಲ್ಲ ರೀತಿಯ ಚಟುವಟಿಕೆಗಳು, ತೆಂಗಿನಕಾಯಿ, ಮಸಾಲೆ, ಬಿದಿರು, ಅಡಕೆ ಮತ್ತು ಕೋಕೋ ಬೆಳೆಗಳ ಚಟುವಟಿಕೆಗಳಿಗೆ ಅನುಮತಿಸಲಾಗುತ್ತದೆ ಎಂದು ಗೃಹ ಸಚಿವಾಲಯ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.
ರೈಲು, ವಿಮಾನ ಅಂತಿಮವಾಗಿಲ್ಲ:ವಿಮಾನ ಹಾಗೂ ರೈಲು ಸಂಚಾರವನ್ನು ಆರಂಭಿಸುವ ಕುರಿತು ಕೇಂದ್ರ ಸರ್ಕಾರ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.
ವಲಸೆ ಕಾರ್ವಿುಕರಿಗೆ ವಿನಾಯಿತಿ:ಲಾಕ್​ಡೌನ್​ನಿಂದಾಗಿ ವಿವಿಧ ಭಾಗಗಳಲ್ಲಿ ಸಿಲುಕಿರುವ ಕಾರ್ವಿುಕರಿಗೆ ಹಲವು ನಿಬಂಧನೆಗಳೊಂದಿಗೆ ಅವರು ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಹೋಗಲು ಅವಕಾಶ ನೀಡಲಾಗುತ್ತದೆ. ಆದರೆ, ವಲಸೆ ಕಾರ್ವಿುಕರು ತಾವು ಕೆಲಸ ನಿರ್ವಹಿಸುತ್ತಿದ್ದ ರಾಜ್ಯದಲ್ಲಿ ಸಿಲುಕಿಕೊಂಡಿದ್ದರಷ್ಟೇ ಈ ಅವಕಾಶ ದೊರೆಯಲಿದೆ ಎಂದು ಕೇಂದ್ರ ಗೃಹ ಸಚಿವಾಲಯ ಭಾನುವಾರ ತಿಳಿಸಿದೆ. ಅಂದರೆ ಕಾರ್ವಿುಕರಿಗೆ ಹೊರ ರಾಜ್ಯಗಳಿಗೆ ಹೋಗಲು ಅನುಮತಿ ನೀಡಿಲ್ಲ ಎಂದು ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ ಸ್ಪಷ್ಟಪಡಿಸಿದ್ದಾರೆ. ವಿವಿಧ ಸ್ಥಳಗಳಲ್ಲಿನ ಶಿಬಿರಗಳಲ್ಲಿ ಆಶ್ರಯ ಪಡೆದಿರುವ ಕಾರ್ವಿುಕರು ಸಂಬಂಧಪಟ್ಟ ಸ್ಥಳೀಯ ಆಡಳಿತಾಧಿಕಾರಿಗಳ ಬಳಿ ತಮ್ಮ ಮಾಹಿತಿ ನೋಂದಾಯಿಸಬೇಕು. ಒಂದು ವೇಳೆ ಕಾರ್ವಿುಕರು ತಾವು ಸಿಲುಕಿರುವ ಸ್ಥಳದಲ್ಲೇ ಕೆಲಸ ಮಾಡಲು ಬಯಸಿದರೆ ಅವರ ಕೌಶಲ್ಯದ ಆಧಾರದ ಮೇಲೆ ಸೂಕ್ತವಾಗುವ ಕೆಲಸಗಳನ್ನು ಅದೇ ಸ್ಥಳಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ ಅಥವಾ ರಾಜ್ಯದೊಳಗೆ ಅವರು ಈ ಹಿಂದೆ ಕೆಲಸ ನಿರ್ವಹಿಸುತ್ತಿದ್ದ ಸ್ಥಳಕ್ಕೆ ತೆರಳಲು ಬಯಸಿದರೆ ಅಲ್ಲಿಗೆ ಕೊಂಡೊಯ್ಯಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಇದಕ್ಕೂ ಮೊದಲು ಕಾರ್ವಿುಕರನ್ನು ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಿ, ಅವರಿಗೆ ಸೋಂಕು ಇಲ್ಲವೆಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತದೆ.
ನಿಯಮ ಅನ್ವಯ:ಮುಖ್ಯವಾಗಿ ಈ ಎಲ್ಲ ಸೇವೆಗಳು ಕರೊನಾ ಹಾಟ್​ಸ್ಪಾಟ್​ಗಳು ಹಾಗೂ ಕೆಂಪು ಪಟ್ಟಿಯಲ್ಲಿ ಸೇರಿಸಲಾಗಿರುವ ವಲಯಗಳಲ್ಲಿ ಲಭ್ಯವಿರುವುದಿಲ್ಲ. ಸಾಮಾಜಿಕ ಅಂತರ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳ ಷರತ್ತಿನ ಮೇಲೆ ಕಾರ್ಯನಿರ್ವಹಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.
ಇಂದಿನಿಂದ ಏನೇನಿರುತ್ತದೆ?
* ಹಣಕಾಸು ವಲಯ: ಸಾಮಾನ್ಯ ಕೆಲಸದ ಅವಧಿ ಪ್ರಕಾರ ಬ್ಯಾಂಕುಗಳು ತೆರೆದಿರಲಿದ್ದು, ಎಟಿಎಂಗಳು ಎಂದಿನಂತೆ ಕಾರ್ಯನಿರ್ವಹಿಸುತ್ತವೆ. ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳೂ ಕಾರ್ಯ ನಿರ್ವಹಿಸಲಿವೆ
* ಆರೋಗ್ಯ: ಕೇಂದ್ರದ ಆಯುಷ್ ಯೋಜನೆ ಸೇರಿದಂತೆ ಎಲ್ಲ ರೀತಿಯ ಆರೋಗ್ಯ ಸೇವೆಗಳು ಲಭ್ಯ
* ಸಾಮಾಜಿಕ ವಲಯ: ಮಕ್ಕಳು, ಅಂಗವಿಕಲರು ಮತ್ತು ವೃದ್ಧರ ವಸತಿ ನಿಲಯಗಳು, ವೃದ್ಧಾಶ್ರಮಗಳು, ವಿವಿಧ ಯೋಜನೆಗಳ ಸಹಾಯಧನ ವಿತರಣೆ, ಅಂಗನವಾಡಿಗಳ ಮೂಲಕ 15 ದಿನಗಳಿಗೊಮ್ಮೆ ಫಲಾನುಭವಿಗಳ ಮನೆಗೆ ದಿನಸಿ ಪೂರೈಕೆ
* ಕೃಷಿ ಮತ್ತು ತೋಟಗಾರಿಕೆ: ಪಶುಸಂಗೋಪನೆ , ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳಿಗೆ ಸಂಬಂಧಿಸಿದಂತಹ ಎಲ್ಲ ರೀತಿಯ ಚಟುವಟಿಕೆಗಳು
* ಮೀನುಗಾರಿಕೆ: ಮೀನುಗಾರಿಕೆ ಉದ್ಯಮ (ಒಳನಾಡು, ಸಾಗರ), ಜಲಚರ ಸಾಕಣೆ ಉದ್ಯಮ
* ಟೀ, ಕಾಫಿ ಉದ್ಯಮ: ಟೀ, ಕಾಫಿ ರಬ್ಬರ್ ತೋಟ, ಶೇ.50 ಕಾರ್ವಿುಕರ ಕೆಲಸಕ್ಕೆ ಓಕೆ
* ನರೇಗಾ ಕೆಲಸಗಳು: ಸಾಮಾಜಿಕ ಅಂತರ, ಮುನ್ನೆಚ್ಚರಿಕಾ ಕ್ರಮಗಳ ಮೂಲಕ ಕಾಮಗಾರಿ
* ಸಾರ್ವಜನಿಕ ಉಪಯುಕ್ತತೆಗಳು: ನೀರು, ನೈರ್ಮಲ್ಯ, ತ್ಯಾಜ್ಯ ನಿರ್ವಹಣೆ, ವಿದ್ಯುತ್ ಸೇವೆ
* ಸರಕುಗಳ ವಿಲೇವಾರಿ: ರಾಜ್ಯ ಮತ್ತು ಅಂತಾರಾಜ್ಯ ಮಟ್ಟದಲ್ಲಿ ರೈಲು, ರಸ್ತೆ ಹಾಗೂ ಜಲ ಮಾರ್ಗದ ಮೂಲಕ ಸರಕುಗಳ ವಿಲೇವಾರಿ
* ಆನ್​ಲೈನ್ ಮೂಲಕ ಶಿಕ್ಷಣ: ಕಲಿಕೆಗೆ ಸಂಬಂಧಿಸಿದ ಆನ್​ಲೈನ್ ತರಬೇತಿ ಕೇಂದ್ರಗಳು
* ಅಗತ್ಯ ವಸ್ತು ಪೂರೈಕೆ: ಸ್ಥಳೀಯ ಕಿರಾಣಿ ಅಂಗಡಿ ಹಾಗೂ ಇ-ಕಾಮರ್ಸ್ ವಹಿವಾಟು
* ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು: ಡಿಟಿಎಚ್ ಮತ್ತು ಕೇಬಲ್ ಸೇವೆಗಳು, ಕಾಲ್ ಸೆಂಟರ್​ಗಳು (ಸರ್ಕಾರಿ ಚಟುವಟಿಕೆಗಳಿಗೆ ಮಾತ್ರ), ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಇ-ಕಾಮರ್ಸ್ ಕಂಪನಿಗಳು, ಕೊರಿಯರ್ ಸೇವೆಗಳು, ಹೋಟೆಲ್​ಗಳು, ಹೋಮ್ ಸ್ಟೇಗಳು ಮತ್ತು ವಸತಿಗೃಹಗಳು (ಲಾಕ್​ಡೌನ್​ನಲ್ಲಿ ಸಿಲುಕಿರುವರು, ವೈದ್ಯಕೀಯ ಸಿಬ್ಬಂದಿಗೆ ಮಾತ್ರ) * ಕೈಗಾರಿಕೆಗಳು: ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಖಾಸಗಿ ಕೈಗಾರಿಕೆಗಳು ಮತ್ತು ಆಹಾರ, ಔಷಧ ಹಾಗೂ ವೈದ್ಯಕೀಯ ಉಪಕರಣಗಳ ತಯಾರಿಕಾ ಘಟಕಗಳು* ನಿರ್ಮಾಣ ಚಟುವಟಿಕೆಗಳು: ರಸ್ತೆಗಳು, ನೀರಾವರಿ ಯೋಜನೆಗಳು ಮತ್ತು ಹೆಚ್ಚುವರಿ ಕಾರ್ವಿುಕರ ಅಗತ್ಯವಿಲ್ಲದ ಕೈಗಾರಿಕಾ ಯೋಜನೆಗಳು* ಖಾಸಗಿ ವಾಹನಗಳು: ವೈದ್ಯಕೀಯ ಹಾಗೂ ಪಶುವೈದ್ಯಕೀಯ ಆರೈಕೆ ತುರ್ತು ಪರಿಸ್ಥಿತಿಗಳಿಗೆ ಖಾಸಗಿ ವಾಹನಗಳನ್ನು ಬಳಕೆ. ಅಗತ್ಯ ಸರಕುಗಳ ಚಟುವಟಿಕೆಗಳಲ್ಲಿ ಕೆಲಸ ಮಾಡುವವರು ಹಾಗೂ ವಿನಾಯಿತಿ ನೀಡಲಾಗಿರುವ ಕ್ಷೇತ್ರಗಳಲ್ಲಿ ಕೆಲಸ ನಿರ್ವಹಿಸುವವರು
* ಸರ್ಕಾರಿ ಕಚೇರಿಗಳು: ಕೇಂದ್ರ, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿನ ಸರ್ಕಾರಿ ಕಚೇರಿಗಳ ಸೌಲಭ್ಯ * ಇ-ಕಾಮರ್ಸ್​ಗೆ ಷರತ್ತು: ಲಾಕ್ ಡೌನ್ ಸಮಯದಲ್ಲಿ ಇ-ಕಾಮರ್ಸ್ ಸಂಸ್ಥೆಗಳಿಗೆ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಕ್ಕೆ ಅನುಮತಿ ನೀಡಿದ್ದ ಆದೇಶವನ್ನು ಸರ್ಕಾರ ಹಿಂಪಡೆದಿದೆ. ಏ. 20ರಿಂದ ಇ-ಕಾಮರ್ಸ್ ಮೂಲಕ ಟಿವಿ, ರೆಫ್ರಿಜರೇಟರ್, ಮೊಬೈಲ್ ಸೇರಿ ಎಲ್ಲ ಬಗೆಯ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರಾಟ ಮಾಡಬಹುದು ಎಂದು ಕೇಂದ್ರ ಸರ್ಕಾರ ಕೆಲದಿನದ ಹಿಂದೆ ಆದೇಶಿಸಿತ್ತು. ಹೀಗಾಗಿ ಈ ಸಂಸ್ಥೆಗಳು ಔಷಧ, ಅತ್ಯವಶ್ಯಕ ವಸ್ತುಗಳನ್ನಷ್ಟೇ ಮಾರಾಟ ಮಾಡಬಹುದಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − one =
Remember me
