ನವದೆಹಲಿ:ಕರೊನಾ ಮಹಾಮಾರಿಯನ್ನು ಮಟ್ಟಹಾಕುವ ಜತೆಯಲ್ಲೇ ಮುಂಜಾಗ್ರತಾ ಕ್ರಮಗಳ ಮೂಲಕ ಆರ್ಥಿಕತೆ ಸುಧಾರಣೆ, ಕೃಷಿಕರು, ವ್ಯಾಪಾರಿಗಳು ಜನಸಾಮಾನ್ಯರ ಹೊರೆ ಇಳಿಸುವ ಉದ್ದೇಶದೊಂದಿಗೆ ಕೇಂದ್ರ ಸರ್ಕಾರ ಏ.20ರ ಬಳಿಕ ಹಲವು ವಿನಾಯಿತಿಗಳನ್ನು ನೀಡಲು ಚಿಂತಿಸಿದ್ದು, ಆ ಪಟ್ಟಿಗೆ ಶುಕ್ರವಾರ ಒಂದಷ್ಟು ಹೊಸ ಕ್ಷೇತ್ರಗಳನ್ನು ಸೇರ್ಪಡೆ ಮಾಡಿದೆ. ಸುರಕ್ಷಿತ ಪ್ರದೇಶಗಳಲ್ಲಿ ಬ್ಯಾಂಕೇತರ ಹಣಕಾಸು ನಿಗಮಗಳು ಮತ್ತು ಸಣ್ಣ ಹಣಕಾಸು ಸಂಸ್ಥೆಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕೆಲಸ ಪುನರಾರಂಭಿಸಲು ಅನುಮತಿ ನೀಡಲಾಗಿದೆ.
ಜತೆಗೆ ನೀರು ಪೂರೈಕೆ ಮತ್ತು ಶುಚಿತ್ವಕ್ಕೆ ಸಂಬಂಧಿಸಿದ ಕಾಮಗಾರಿಗಳು, ವಿದ್ಯುತ್ ಹಾಗೂ ಟೆಲಿಕಾಂ ಕೇಬಲ್ ಕೆಲಸ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲ ನಿರ್ಮಾಣ ಕಾಮಗಾರಿಗಳಿಗೆ ಅನುಮತಿ ನೀಡಲಾಗುತ್ತದೆ ಎಂದು ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಕರೊನಾ ವೈರಸ್ ಪಸರಿಸುವಿಕೆ ತಡೆಗಟ್ಟುವ ಸಲುವಾಗಿ ಲಾಕ್​ಡೌನ್ ಅವಧಿಯನ್ನು ವಿಸ್ತರಿಸಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ಕೈಗಾರಿಕಾ ಮತ್ತು ವಾಣಿಜ್ಯ ಚಟುವಟಿಕೆಗಳ ಪುನರುಜ್ಜೀವನಕ್ಕಾಗಿ ಸರ್ಕಾರ ಈ ಮಾರ್ಗಸೂಚಿಗಳನ್ನು ಹೊರತಂದಿದೆ.
ಕೃಷಿ ಮತ್ತು ತೋಟಗಾರಿಕೆ ಇಲಾಖೆಯ ಹಲವು ಚಟುವಟಿಕೆಗಳಿಗೂ ಸಹ ವಿನಾಯಿತಿ ನೀಡಲಾಗುತ್ತಿದೆ. ಬಿದಿರು, ತೆಂಗಿನಕಾಯಿ, ಅಡಕೆ, ಕೋಕೋ ಹಾಗೂ ಮಸಾಲೆ ಪದಾರ್ಥಗಳನ್ನು ಬೆಳೆಯುವುದು, ಸಂಸ್ಕರಣೆ, ಪ್ಯಾಕೆಜಿಂಗ್ ಮತ್ತು ಮಾರಾಟಕ್ಕೆ ಅನುಮತಿ ಸಿಕ್ಕಿದೆ.
ಮೊಬೈಲ್ ಫೋನ್, ಟಿವಿ, ರೆಫ್ರಿಜರೇಟರ್, ಲ್ಯಾಪ್​ಟಾಪ್, ಬಟ್ಟೆ, ವಿದ್ಯಾರ್ಥಿಗಳ ಅವಶ್ಯಕ ವಸ್ತುಗಳು ಹಾಗೂ ದಿನಸಿ ಮತ್ತು ಔಷಧಗಳನ್ನು ಇ-ಕಾಮರ್ಸ್ ಸಂಸ್ಥೆಗಳ ಮೂಲಕ ಮಾರಾಟ ಮಾಡಲು ಸರ್ಕಾರ ಈ ಹಿಂದೆ ಅನುಮತಿ ನೀಡಿತ್ತು. ಆದಾಗ್ಯೂ ಇ-ಕಾಮರ್ಸ್ ಕಂಪನಿಗಳ ಸರಕು ಸರಬರಾಜು ವಾಹನಗಳಿಗೆ ಕಾರ್ಯನಿರ್ವಹಿಸಲು ಸಂಬಂಧಪಟ್ಟ ಇಲಾಖೆಯ ಅನುಮತಿ ಅಗತ್ಯವಿರುತ್ತದೆ.
ಷರತ್ತು ಅನ್ವಯ:ಕೇಂದ್ರ ಸರ್ಕಾರ ಅವಕಾಶ ನೀಡಿರುವ ಈ ಎಲ್ಲ ಚಟುವಟಿಕೆ ನಡೆಸುವುದಕ್ಕೆ ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಸೇರಿದಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕೆಂಬ ಷರತ್ತು ವಿಧಿಸಲಾಗಿದೆ.
ರಾಜ್ಯಕ್ಕೆ ಶೀಘ್ರ 10 ಪ್ರಯೋಗಾಲಯ:ಐಸಿಎಂಆರ್ ಅನುಮತಿ ನೀಡಿದರೆ ಕರ್ನಾಟಕದಲ್ಲೂ ಪ್ಲಾಸ್ಮಾ ಚಿಕಿತ್ಸೆ ಪ್ರಾರಂಭಿಸಲು ಮತ್ತು ಏಪ್ರಿಲ್ ಅಂತ್ಯದೊಳಗೆ ಇನ್ನೂ 10 ಪ್ರಯೋಗಾಲಯಗಳನ್ನು ಸ್ಥಾಪಿಸಲು ಸರ್ಕಾರ ತೀರ್ವನಿಸಿದೆ. ಕೋವಿಡ್-19ಕ್ಕೆ ಸಂಬಂಧಿಸಿದಂತೆ ತಜ್ಞ ವೈದ್ಯರು ಹಾಗೂ ಹಿರಿಯ ಅಧಿಕಾರಿಗಳ ಜತೆ ಸಿಎಂ ಬಿ.ಎಸ್. ಯಡಿಯೂರಪ್ಪ ನಡೆಸಿದ ಸಭೆಯಲ್ಲಿ ಕರೊನಾ ಸೋಂಕಿನ ಪ್ರಕರಣಗಳ ಕುರಿತು ಸಚಿವರು ಮತ್ತು ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು.
20ರ ಬಳಿಕ ಏನಿರುತ್ತೆ
* ದೈನಂದಿನ ದಿನಸಿ, ತರಕಾರಿ, ಹಣ್ಣು, ಹಾಲು ಖರೀದಿಗೆ ಅವಕಾಶ, ಐಟಿ, ಬಿಟಿ ಕಂಪನಿಗಳ ಶೇ.50 ನೌಕರರಿಗೆ ಕಚೇರಿಗೆ ಹಾಜರಾಗಲು ಅನುಮತಿ
ಏನಿರುವುದಿಲ್ಲ
* ಮಾಲ್, ಪಬ್, ಚಿತ್ರಮಂದಿರ, ಬಾರ್, ರೆಸ್ಟೋರೆಂಟ್ ಸೇರಿದಂತೆ ಇತರ ಸೇವೆಗಳ ಮೇಲಿರುವ ನಿರ್ಬಂಧ ಮುಂದುವರಿಯಲಿದೆ.
ಪಾಸ್ ವ್ಯವಸ್ಥೆ ರದ್ದು:20ರ ಬಳಿಕ ತುರ್ತು ಹಾಗೂ ಅಗತ್ಯ ಸೇವೆಗಳಿಗೆ ನೀಡುವ ಪಾಸ್ ವ್ಯವಸ್ಥೆ ರದ್ದಾಗಲಿದೆ. ಖಾಸಗಿ ವಾಹನಗಳಲ್ಲಿ ಇಬ್ಬರು, ದ್ವಿಚಕ್ರ ವಾಹನದಲ್ಲಿ ಒಬ್ಬರಿಗೆ ಓಡಾಡಲು ಅವಕಾಶ ಸಿಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
