ಕೊಲ್ಲಂ:ಕಂಠಪೂರ್ತಿ ಕುಡಿದು ಮದ್ಯದ ಅಮಲಿನಲ್ಲಿ ರೈಲು ಹಳಿಯ ಮೇಲೆ ಮಲಗಿದ್ದ ವ್ಯಕ್ತಿಯೊಬ್ಬನ ಜೀವ ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಉಳಿದಿದೆ. ಗಮನಾರ್ಹ ಸಂಗತಿ ಏನೆಂದರೆ, ಆತನ ಪ್ರಾಣ ಉಳಿಯಲು ಮುಂಗಾರು ಮಳೆಯು ಕಾರಣವಾಗಿದೆ. ಈ ಘಟನೆ ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ನಡೆದಿದೆ.
ನಿನ್ನೆ (ಜೂ. 12) ಸಂಜೆ 6 ಗಂಟೆ ಸುಮಾರಿಗೆ ರೈಲು ಎಜುಕೋಣೆ ರೈಲು ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ಕೊಲ್ಲಂ-ಪುನಲೂರ್ ಮೆಮೂ ರೈಲಿನ ಲೋಕೋ ಪೈಲಟ್ ವ್ಯಕ್ತಿಯೊಬ್ಬ ಟ್ರ್ಯಾಕ್ ಮೇಲೆ ಬಿದ್ದಿರುವುದನ್ನು ಗಮನಿಸಿದ್ದಾರೆ. ತಕ್ಷಣ ಲೋಕೋ ಪೈಲಟ್ ರೈಲನ್ನು ನಿಧಾನಗತಿಗೆ ತಂದು, ಅಂತಿಮವಾಗಿ ರೈಲನ್ನು ನಿಲ್ಲಿಸುವಲ್ಲಿ ಯಶಸ್ವಿಯಾದರು. ಇದಾದ ಬಳಿಕ ಸ್ಥಳೀಯರ ನೆರವಿನೊಂದಿಗೆ ಟ್ರ್ಯಾಕ್​ ಮೇಲೆ ಮಲಗಿದ್ದ ವ್ಯಕ್ತಿಯನ್ನು ಎಚ್ಚರಗೊಳಸಿ ಟ್ರ್ಯಾಕ್‌ನಿಂದ ಹೊರಗೆ ಹೋಗುವಂತೆ ಲೋಕೋ ಪೈಲಟ್ ಮಾಡಿದರು.
ಇದನ್ನೂ ಓದಿ:ಲೈಂಗಿಕ ಕಿರುಕುಳ ಸಹಿಸದೇ ವಿದ್ಯಾರ್ಥಿನಿ ಸಾವು ಪ್ರಕರಣ: ಆರೋಪಿ ಶಿಕ್ಷಕನ ಪತ್ನಿಯೂ ಅರೆಸ್ಟ್​!
ಈ ಘಟನೆಯ ನಂತರ ಪಾನಮತ್ತ ವ್ಯಕ್ತಿಯನ್ನು ಎಜುಕೋಣೆ ಪೊಲೀಸರ ಮುಂದೆ ಹಾಜರುಪಡಿಸಲಾಯಿತು. ಪೊಲೀಸರ ಪ್ರಕಾರ, ಆ ವ್ಯಕ್ತಿ ಮದ್ಯದ ಅಮಲಿನಲ್ಲಿದ್ದನು ಎಂಬುದನ್ನು ಖಚಿತಪಡಿಸಿದ್ದಾರೆ ಮತ್ತು ಅವನನ್ನು ಕುಟುಂಬದ ಸದಸ್ಯರು ಮನೆಗೆ ಕರೆದೊಯ್ದರು ಎಂದು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಅಧಿಕಾರಿಗಳು ನೈಋತ್ಯ ಮುಂಗಾರು ಮಳೆ ಸಂಬಂಧಿತ ಎಚ್ಚರಿಕೆ ನೀಡಿದ ಪರಿಣಾಮವಾಗಿ ರೈಲು ಮೊದಲೇ ಕಡಿಮೆ ವೇಗದಲ್ಲಿ ಚಲಿಸುತ್ತಿತ್ತು. ಗಾಳಿಯ ರಭಸದಿಮದಾಗಿ ಮರದ ಕೊಂಬೆಗಳು ಹಳಿಗಳ ಮೇಲೆ ಬೀಳುವ ಸಾಧ್ಯತೆಯಿರುವುದರಿಂದ ಈ ಪ್ರದೇಶದಲ್ಲಿ ಎಚ್ಚರಿಕೆ ವಹಿಸಲು ಮತ್ತು ವೇಗವನ್ನು ಕಡಿಮೆ ಮಾಡಲು ಲೊಕೊ ಪೈಲಟ್‌ಗಳಿಗೆ ಮೊದಲೇ ಎಚ್ಚರಿಕೆ ನೀಡಲಾಗಿತ್ತು. ಈ ಕಾರಣದಿಂದಲೂ ಆ ವ್ಯಕ್ತಿ ಬದುಕುಳಿದಿದ್ದಾನೆ. ರೈಲು ಏನಾದರೂ ವೇಗದಲ್ಲಿದ್ದರೆ ಸಾವು ಸಂಭವಿಸುವುದು ಖಚಿತವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
ಕಾಂಗ್ರೆಸ್ ಜವಾಬ್ದಾರಿ ಇಲ್ಲದ, ಸಹಾಯಕವಲ್ಲದ ಸರ್ಕಾರವಾಗಿದೆ: ಮಾಜಿ ಸಿಎಂ ಬೊಮ್ಮಾಯಿ

ಹನಿಮೂನ್​ಗೆ ಹೋದ ವೇಳೆ ಹೆಂಡತಿಯ ಕಣ್ಮುಂದೆಯೇ ನಡೆಯಿತು ಘೋರ ದುರಂತ..

ವಿವಾದ ಸೃಷ್ಟಿಸಿದ ಒಟಿಟಿ ವೆಬ್​ ಸರಣಿಯ ಪೋಸ್ಟರ್​: ಏಕ್ತಾ ಕಪೂರ್​ ವಿರುದ್ಧ ಕಿಡಿಕಾರಿದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − twelve =
Remember me
