ನಾಗ್ಪುರ:ಬೆಳೆದು ನಿಂತಿರುವ ಪೈರಿನ ಮೇಲೆ ದಾಳಿ ಮಾಡಿ, ಅವನ್ನು ಭಕ್ಷಿಸಿ ಧ್ವಂಸಗೊಳಿಸುತ್ತಿರುವ ಮಿಡತೆಗಳ ಗುಂಪು ಮಹಾರಾಷ್ಟ್ರವನ್ನು ತಲುಪಿವೆ. ಮುಂದುವರಿದು ಇವು ಯಾವುದೇ ಕ್ಷಣದಲ್ಲಿ ಕರ್ನಾಟಕವನ್ನೂ ಪ್ರವೇಶಿಸಿ, ಬೆಳೆಗಳನ್ನು ಹಾಳು ಮಾಡುವ ಸಾಧ್ಯತೆ ದಟ್ಟವಾಗಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಮೊದಲಿಗೆ ಪಾಕಿಸ್ತಾನದಲ್ಲಿ ಕಾಣಿಸಿಕೊಂಡ ಮಿಡತೆಗಳ ಗುಂಪು, ಅಲ್ಲಿನ ಬೆಳೆಗಳನ್ನು ಹಾಳು ಮಾಡಿದವು. ಬಳಿಕ ಏಪ್ರಿಲ್​ 19ರಂದು ರಾಜಸ್ಥಾನದ ಮೂಲಕ ಭಾರತವನ್ನು ಪ್ರವೇಶಿಸಿದವು. ಅಲ್ಲೆಲ್ಲೆ ಬೆಳಗಳಿಗೆ ಹಾನಿ ಮಾಡುತ್ತಾ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶಗಳಿಗೂ ಹಬ್ಬಿ ಇದೀಗ ಮಹಾರಾಷ್ಟ್ರದ ನಾಗ್ಪುರದ ನಾರ್​ಖೇಡ್​ ಮತ್ತು ಕಟೋಲ್​ನಲ್ಲಿ ಹಾವಳಿ ಇಡುತ್ತಿವೆ.
ಇವು ವಿಶೇಷವಾಗಿ ತರಕಾರಿ ಮತ್ತು ಹಣ್ಣುಗಳ ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಈ ಹಿನ್ನೆಲೆಯಲ್ಲಿ ರೈತರು ಬೆಳೆಗಳಿಗೆ ಕೀಟನಾಶಕ ಸಿಂಪಡಿಸಿ, ಮಿಡತೆಗಳ ದಾಳಿಯಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ತುರ್ತುಪರಿಸ್ಥಿತಿ ನಿರ್ವಹಣೆಗೆ ಸಜ್ಜಾಗಿ: ಅಧಿಕಾರಿಗಳಿಗೆ ಡಿಸಿ ಡಾ.ಬೊಮ್ಮನಹಳ್ಳಿ ಸೂಚನೆ
1974ರಲ್ಲಿ ಮಿಡತೆಗಳು ಕೊನೆಯ ಬಾರಿಗೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಂಡಿದ್ದವು. ಅದಾದ ನಂತರದಲ್ಲಿ ಇದೀಗ ಮತ್ತೊಮ್ಮೆ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿವೆ. ಸದ್ಯ ಅವು ಅಮರಾವತಿಯ 12 ಗ್ರಾಮಗಳಲ್ಲಿ ದಾಳಿ ಇಟ್ಟಿರುವುದಾಗಿ ವಾರ್ಧಾ ಜಿಲ್ಲೆಯ ಕೃಷಿ ಅಧಿಕಾರಿ ಅನಿಲ್​ ಇಂಗ್ಲೆ ಹೇಳಿದ್ದಾರೆ.
ಪಕ್ಕದ ಮಹಾರಾಷ್ಟ್ರದಕ್ಕೆ ಬಂದಿರುವ ಮಿಡತೆಗಳ ಗುಂಪು ಯಾವುದೇ ಕ್ಷಣದಲ್ಲಾದರೂ ಕರ್ನಾಟಕವನ್ನು ಪ್ರವೇಶಿಸಿ, ಇಲ್ಲಿನ ಬೆಳೆಗಳನ್ನು ಹಾಳುವ ಮಾಡುವ ಸಾಧ್ಯತೆಗಳು ಇಲ್ಲದಿಲ್ಲ. ಈಗಾಗಲೆ ಕೋವಿಡ್​-19 ಲಾಕ್​ಡೌನ್​, ಬೆಲೆ ಕುಸಿತ ಸೇರಿ ನಾನಾ ಸಮಸ್ಯೆಗಳಿಂದ ಬಳಲುತ್ತಿರುವ ರೈತರು ಇದೀಗ ಮಿಡತೆಗಳಿಂದಲೂ ನಷ್ಟಕ್ಕೆ ಒಳಗಾಗುವ ಭೀತಿಗೆ ಸಿಲುಕಿದ್ದಾರೆ.
ಜಗತ್ತು ಕರೊನಾ ವಿರುದ್ಧ ಹೋರಾಡುತ್ತಿದ್ದರೆ, ಈ ವಿಜ್ಞಾನಿಗಳ ಹೋರಾಟವೇ ಬೇರೆಯದ್ದು…!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:seventeen − five =
Remember me
