ನವದೆಹಲಿ:543 ಲೋಕಸಭೆ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆಗೆ ಇಂದು (ಏಪ್ರಿಲ್ 19) ಮೊದಲ ಹಂತದ ಮತದಾನ ನಡೆಯಲಿದೆ. 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಒಟ್ಟು 102 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಈ ಪೈಕಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಲೋಕಸಭಾ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. 1,600ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಏಪ್ರಿಲ್​ 19ರಂದು ಬೆಳಗ್ಗೆ 07 ಗಂಟೆಗೆ ಮತದಾನ ಆರಂಭವಾಗಲಿದ್ದು, ಸಂಜೆ 06ಕ್ಕೆ ಮುಕ್ತಾಯವಾಗಲಿದೆ. ಚುನಾವಣಾ ಸಿಬ್ಬಂದಿ ಹಾಗೂ ಭದ್ರತಾ ಸಿಬ್ಬಂದಿಯನ್ನು ಒಂದೆಡೆಯಿಂದ ಇನ್ನೊಂದೆಡೆ ಕರೆದೊಯ್ಯಲು 41 ಹೆಲಿಕಾಪ್ಟರ್‌ಗಳು, 84 ವಿಶೇಷ ರೈಲುಗಳು ಹಾಗೂ ಸರಿಸುಮಾರು ಒಂದು ಲಕ್ಷ ವಾಹನಗಳ ವ್ಯವಸ್ಥೆ ಮಾಡಲಾಗಿದೆ.
ಮತದಾನ ನಡೆಯುತ್ತಿರುವ ಕ್ಷೇತ್ರಗಳ ಪೈಕಿ ಅದೃಷ್ಟ ಪರೀಕ್ಷೆಗೆ ಇಳಿದವರಲ್ಲಿ ನಿತಿನ್​ ಗಡ್ಕರಿ ಸೇರಿದಂತೆ ಎಂಟು ಮಂದಿ ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ರಾಜ್ಯಪಾಲೆ ಕೂಡ ಇದ್ದಾರೆ. ಏಳು ಹಂತಗಳಲ್ಲಿ ನಡೆಯಲಿರುವ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ, ಶುಕ್ರವಾರ ನಡೆಯಲಿರುವ ಮತದಾನವು ಮೊದಲ ಹಂತವಾಗಿದೆ.
ಇದನ್ನೂ ಓದಿ:ಬಿಡುಗಡೆಗೂ ಮುನ್ನ 1000 ಕೋಟಿ ರೂ. ಕಮಾಯಿ ಮಾಡಿದ ಸಿನಿಮಾ; ಇದು ಸಾಧ್ಯವಾಗಿದ್ದು ಹೇಗೆ?
1)ಅರುಣಾಚಲಪ್ರದೇಶ (2):ಅರುಣಾಚಲ ಪೂರ್ವ, ಅರುಣಾಚಲ ಪಶ್ಚಿಮ
2)ಅಸ್ಸಾಂ (5):ಕಾಜಿರಂಗ, ಸೋನಿತ್‌ಪುರ್, ಲಖಿಂಪುರ, ದಿಬ್ರುಗಢ್, ಜೋರ್ಹತ್
3)ಬಿಹಾರ (4):ಔರಂಗಾಬಾದ್, ಗಯಾ, ನಾವಡಾ, ಜಮುಯಿ
4)ಛತ್ತೀಸ್‌ಗಢ (1):ಬಸ್ತಾರ್ (ST)
5)ಮಧ್ಯಪ್ರದೇಶ (6):ಛಿಂದ್ವಾರಾ, ಸಿಧಿ, ಶಹದೋಲ್, ಜಬಲ್ಪುರ್, ಮಂಡ್ಲಾ, ಬಾಲಾಘಾಟ್
6)ಮಹಾರಾಷ್ಟ್ರ (5):ನಾಗ್ಪುರ್, ಗಡ್ಚಿರೋಲಿ-ಚಿಮೂರ್ (ಎಸ್ಟಿ), ಭಂಡಾರಾ-ಗೊಂಡಿಯಾ, ಚಂದ್ರಾಪುರ್, ರಾಮ್ಟೆಕ್ (ಎಸ್ಸಿ)
7)ಮಣಿಪುರ (2)
8)ಮೇಘಾಲಯ (2):ಶಿಲ್ಲಾಂಗ್ ಮತ್ತು ತುರಾ
9)ಮಿಜೋರಾಂ (1): ಮಿಜೋರಾಂ
10)ನಾಗಾಲ್ಯಾಂಡ್ (1):ನಾಗಾಲ್ಯಾಂಡ್
11)ಸಿಕ್ಕಿಂ (1):ಸಿಕ್ಕಿಂ
12)ತ್ರಿಪುರ (1):ತ್ರಿಪುರ ಪಶ್ಚಿಮ
13)ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು (1):ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
14)ಜಮ್ಮು ಮತ್ತು ಕಾಶ್ಮೀರ (1):ಉಧಂಪುರ
15)ಲಕ್ಷದ್ವೀಪ (1):ಲಕ್ಷದ್ವೀಪ
16)ಪುದುಚೇರಿ (1):ಪುದುಚೇರಿ
17)ಪಶ್ಚಿಮ ಬಂಗಾಳ (3):ಕೂಚ್‌ಬೆಹರ್, ಅಲಿಪುರ್ದುವಾರ್, ಜಲ್ಪೈಗುರಿ
18)ಉತ್ತರಾಖಂಡ (5):ನೈನಿತಾಲ್-ಉಧಮ್ ಸಿಂಗ್ ನಗರ, ಅಲ್ಮೋರಾ, ಹರಿದ್ವಾರ, ಗರ್ವಾಲ್ (ಪೌರಿ), ತೆಹ್ರಿ ಗರ್ವಾಲ್
19)ಉತ್ತರ ಪ್ರದೇಶ (8):ಸಹರಾನ್ಪುರ್, ಕೈರಾನಾ, ಮುಜಾಫರ್ನಗರ, ಬಿಜ್ನೋರ್, ನಗೀನಾ, ಮೊರಾದಾಬಾದ್, ರಾಂಪುರ್, ಪಿಲಿಭಿತ್
20)ರಾಜಸ್ಥಾನ (12):ಗಂಗಾನಗರ, ಬಿಕಾನೇರ್, ಚುರು, ಜುಂಜುನು, ಸಿಕರ್, ಜೈಪುರ ಗ್ರಾಮಾಂತರ, ಜೈಪುರ, ಅಲ್ವಾರ್, ಭರತ್‌ಪುರ್, ಕರೌಲಿ-ಧೋಲ್‌ಪುರ್, ದೌಸಾ, ನಾಗೌರ್
21)ತಮಿಳುನಾಡು (39):ತಿರುವಳ್ಳೂರ್ (SC), ಚೆನ್ನೈ ಉತ್ತರ , ಚೆನ್ನೈ ದಕ್ಷಿಣ, ಚೆನ್ನೈ ಸೆಂಟ್ರಲ್, ಶ್ರೀಪೆರಂಬದೂರ್, ಕಾಂಚೀಪುರಂ (SC), ಅರಕ್ಕೋಣಂ, ವೆಲ್ಲೂರು, ಕೃಷ್ಣಗಿರಿ, ಧರ್ಮಪುರಿ, ತಿರುವಣ್ಣಾಮಲೈ, ಅರಣಿ, ವಿಲುಪ್ಪುರಂ (SC), ಕಲ್ಲಕುರಿಚಿ, ಸೇಲಂ, ನಾಮ , ಈರೋಡ್ GEN, ತಿರುಪ್ಪೂರ್, ನೀಲಗಿರಿ (SC), ಕೊಯಮತ್ತೂರು, ಪೊಲ್ಲಾಚಿ, ದಿಂಡುಗಲ್, ಕರೂರ್, ತಿರುಚಿರಾಪಳ್ಳಿ, ಪೆರಂಬಲೂರ್, ಕಡಲೂರು, ಚಿದಂಬರಂ (SC), ಮೈಲಾಡುತುರೈ, ನಾಗಪಟ್ಟಣಂ, ತಂಜಾವೂರು, ಮಧುರೈ, ಶಿವಗಂಗಾ , ವಿರುಧುನಗರ, ರಾಮನಾಥಪುರಂ, ತೂತುಕ್ಕುಡಿ , ತೆಂಕಶಿ (SC), ತಿರುನೆಲ್ವೇಲಿ, ಕನ್ಯಾಕುಮಾರಿ ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ.

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:four × one =
Remember me
