ನವದೆಹಲಿ:ವಿಪಕ್ಷಗಳ ಪ್ರತಿಭಟನೆ, ಸದನ ಮೂಂದೂಡುವಿಕೆಯಿಂದ ನಿಗದಿತ ಅವಧಿಗಿಂತ ಮುನ್ನವೇ ಹಾಲಿ ಸಂಸತ್​ ಅಧಿವೇಶನ ಕಾರ್ಯ ನಿರ್ವಹಿಸಬಹುದು ಎಂದು ತಜ್ಱರು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿ ಮೂಲಗಳ ಪ್ರಕಾರ ಲೋಕಸಭೆಗೆ ನಿಗದಿಯಾಗಿರುವ 133.6 ಘಂಟೆಗಳ ಸಮಯದಲ್ಲಿ 45 ಘಂಟೆ ಕಾಲ ಕಾರ್ಯ ನಿರ್ವಹಿಸಿದೆ. ರಾಜ್ಯಸಭೆಗೆ ನಗದಿಯಾಗಿದ್ದ 130 ಘಂಟೆಗಳ ಪೈಕಿ 31 ಘಂಟೆ ಕಾರ್ಯ ನಿರ್ವಹಿಸಿದೆ ಎಂದು ವರದಿ ಹೇಳಿದೆ.
ಇದು ಲೋಕಸಭೆ ನಿಗದಿಯಾದ ಸಮಯದಲ್ಲಿ ಶೇ.34.28 ರಷ್ಟು, ರಾಜ್ಯಸಭೆ ಶೇ.24 ರಷ್ಟು ಖಾರ್ಯ ನಿರ್ವಹಿಸಿದೆ. ಪ್ರಶ್ನೋತರ ವೇಳೆಯಲ್ಲು ಉಭಯ ಸದನದಲ್ಲಿ ಗದ್ದಲ ಉಂಟಾದ ಕಾರಣ ಕಲಾಪವನ್ನು ಮುಂದೂಡಲಾಗಿತ್ತು. ಇಡೀ ಬಜೆಟ್​ ಅಧಿವೇಶನದಲ್ಲಿ ಲೋಕಸಭೆಯಲ್ಲಿ 4.32 ಘಂಟೆ, ರಾಜ್ಯಸಭೆಯಲ್ಲಿ 1.32 ಘಂಟೆ ಪ್ರಶ್ನೆಗಳನ್ನು ಕೇಳಲಾಗಿದೆ.
ಇದನ್ನೂ ಓದಿ:ಮಹಾ ಉದ್ಧಟತನಕ್ಕೆ ರಣದೀಪ್​ ಸುರ್ಜೇವಾಲ ಕಿಡಿ; ಬಿಜೆಪಿ ವಿರುದ್ಧ ವಾಗ್ದಾಳಿ
ಹಾಲಿ ಲೋಕಸಭೆ ಅಧಿವೇಶನದಲ್ಲಿ ಬಜೆಟ್​ ಮೇಲೆ 14.42 ಘಂಟೆಗಳ ಕಾಲ ಚರ್ಚೆ ನಡೆದಿದ್ದು ಇದರಲ್ಲಿ 145 ಸದಸ್ಯರು ಭಾಗಿಯಾಗಿದ್ದರು. ರಾಷ್ಟ್ರಪತಿ ಅವರ ಭಾಷಣದ ಮೇಲಿನ ವಂದನಾ ನಿರ್ಣಯ ಕುರಿತ ಚರ್ಚೆಯನ್ನು 13.44 ಘಂಟೆಗಳ ಕಾಲ ನಡೆಸಲಾಗಿದೆ.
ಈ ಬಾರಿಯ ಲೋಕಸಭೆ ಅಧಿವೇಶನದಲ್ಲಿ 8 ಮಸೂದೆಗಳನ್ನು ಮಂಡಿಲಾಗಿದ್ದು ಇದರಲ್ಲಿ 6 ಅನ್ನು ಅಂಗೀಕರಿಸಲಾಗಿದೆ. ಇದರಲ್ಲಿ 29 ಪ್ರಶ್ನೆಗಳನ್ನು ಉತ್ತರಿಸಲಾಗಿದೆ ಎಂದು ಲೋಕಸಭೆ ಸ್ಪೀಕರ್​ ಓಂ ಬಿರ್ಲಾ ತಿಳಿಸಿದ್ಧಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 1 =
Remember me
