ನವದೆಹಲಿ:ಮಹಿಳೆಯರ ವಿರುದ್ಧ ಅವಹೇಳನಕಾರಿ ಹೇಳಿಕೆಗೆ ಬಿಜೆಪಿ ನಾಯಕ ದಿಲೀಪ್ ಘೋಷ್ ಮತ್ತು ಕಾಂಗ್ರೆಸ್‌ ನಾಯಕಿ ಸುಪ್ರಿಯಾ ಶ್ರಿನೇಟ್ ಅವರನ್ನು ಚುನಾವಣಾ ಆಯೋಗ ಸೋಮವಾರ ತರಾಟೆ ತೆಗೆದುಕೊಂಡಿದೆ.
ಇದನ್ನೂ ಓದಿ:ಪ್ರಧಾನಿ ಮೋದಿ ಬಾಂಧವ್ಯದ ಮೇಲೆ ದೇವೇಗೌಡರು ಮೇಕೆದಾಟು ಅಣೆಕಟ್ಟು ಮಾಡಿಸಲಿ: ಸಿದ್ದರಾಮಯ್ಯ ಸವಾಲು
ಇಬ್ಬರೂ ನಾಯಕರ ಹೇಳಿಕೆಗಳ ಬಗ್ಗೆ ಎಚ್ಚರಿಕೆ ವಹಿಸುವಂತೆ ಇಸಿ ಎಚ್ಚರಿಕೆ ನೀಡಿದ್ದು, ಚುನಾವಣಾ ಸಮಯದಲ್ಲಿ ಆಯೋಗವು ಅವರ ಮೇಲೆ ವಿಶೇಷ ನಿಗಾ ಇಡಲಿದೆ ಎಂದು ಎಚ್ಚರಿಕೆ ನೀಡಿದೆ.
ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ವೈಯಕ್ತಿಕ ದಾಳಿ ನಡೆಸಿದ ಹಿನ್ನೆಲೆ ಚುನಾವಣಾ ಆಯೋಗ ದಿಲೀಪ್ ಘೋಷ್ ಮತ್ತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರೀನಾಥೆ ಅವರಿಗೆ ನೋಟಿಸ್ ಜಾರಿ ಮಾಡಿತ್ತು. ನೋಟಿಸ್‌ಗೆ ಉತ್ತರಿಸಿದ ಉಭಯ ನಾಯಕರು ನೀತಿ ಸಂಹಿತೆ ಉಲ್ಲಂಘಿಸಿ ವೈಯಕ್ತಿಕ ದಾಳಿ ನಡೆಸಿರುವುದನ್ನು ಒಪ್ಪಿಕೊಂಡಿದ್ದಾರೆ.
ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವಾಗ ಜಾಗರೂಕರಾಗಿರಿ ಮತ್ತು ಅಂತಹ ಯಾವುದೇ ಅವಹೇಳನಕಾರಿ ಹೇಳಿಕೆಗೆಳು ಹಾಗೂ ವೈಯಕ್ತಿಕ ದಾಳಿ ನಡೆಸುವ ಮೂಲಕ ನಿಬಂಧನೆಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿದೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಸಮಯದಲ್ಲಿ ಹೇಳಿಕೆಗಳನ್ನು ನೀಡುವಾಗ ಜಾಗರೂಕರಾಗಿ ಇರುವಂತೆ ಹೇಳಿತ್ತು.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ನಟಿ ಕಂಗನಾ ರನೌತ್ ವಿರುದ್ಧ ಕ್ರಮವಾಗಿ ಬಿಜೆಪಿಯ ಸಂಸದ ದಿಲೀಪ್ ಘೋಷ್ ಮತ್ತು ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತಾ ಅವರ “ಆಕ್ಷೇಪಾರ್ಹ”, “ಅವಮಾನಕರ” ಮತ್ತು “ಅಗೌರವದ” ಹೇಳಿಕೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗ ಮಾರ್ಚ್ 27 ರಂದು ಶೋಕಾಸ್ ನೋಟಿಸ್‌ ನೀಡಿತ್ತು.
ದಿಲೀಪ್ ಘೋಷ್ ಮತ್ತು ಸುಪ್ರಿಯಾ ಅವರ ಚುನಾವಣೆಗೆ ಸಂಬಂಧಿಸಿದ ಭಾಷಣಗಳನ್ನು ಈ ಸಮಯದಿಂದ ಆಯೋಗವು ವಿಶೇಷವಾಗಿ ಮತ್ತು ಹೆಚ್ಚುವರಿಯಾಗಿ ಮೇಲ್ವಿಚಾರಣೆ ಮಾಡಲಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
IPL 2024: ರೋಹಿತ್ ಶರ್ಮಾ ವಿಕೆಟ್​ಗೆ​ ಸಂಭ್ರಮಿಸಿದ್ದ ಸಿಎಸ್​ಕೆ ಅಭಿಮಾನಿಯನ್ನು ಕೊಲೆಗೈದ MI ಫ್ಯಾನ್ಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − three =
Remember me
