ಲಂಡನ್​:ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ವಿಚಿತ್ರ ಹಾಗೂ ಭಯಾನಕ ಫೋಟೋವೊಂದು ನಾನಾ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಫೋಟೋದಲ್ಲಿರುವುದು ಏನು? ಏನಿಷ್ಟು ವಿಚಿತ್ರವಾಗಿದೆ? ನೋಡಲು ಕೆಂಪು ಕಣ್ಣಿನ ಬೇಬಿ ಗಾಡ್ಜಿಲ್ಲ ಇದ್ದಂಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಂದಹಾಗೆ ಈ ಫೋಟೋವನ್ನು ಲಂಡನ್​ನ ಥೇಮ್ಸ್​ ನದಿಯಲ್ಲಿ ಸೆರೆಹಿಡಿಯಲಾಗಿದೆ. ಬಹುತೇಕ ನೀರಿನಲ್ಲಿ ಅಡಗಿಕೊಂಡು ತನ್ನ ಮುಖವನ್ನು ಮಾತ್ರ ಹೊರತೆಗೆದಿರುವ ಜೀವಿಯಂತೆ ಕಾಣವ ಫೋಟೋ ನೆಟ್ಟಿಗರ ಹುಬ್ಬೇರಿಸಿದೆ. ನಿಜವಾಯಿಯೂ ಇದೊಂದು ದೈತ್ಯಾಕಾರದ ಜೀವಿ ಇರಬಹುದಾ ಎಂದು ಅಂದಾಜು ಮಾಡುತ್ತಿದ್ದಾರೆ.
ರೆಡಿಟ್​ ಜಾಲತಾಣ ವೇದಿಕೆಯಲ್ಲಿ ಈ ಫೋಟೋವನ್ನು ಶೇರ್​ ಮಾಡಲಾಗಿದೆ. ಇದೀಗ ತಾನೇ ಥೇಮ್ಸ್‌ ನದಿಯಲ್ಲಿ ಒಂದು ವಸ್ತುವನ್ನು ನೋಡಿದೆ. ಅದ್ಭುತವಾದ ಫೋಟೋದಲ್ಲಿ ಗುರುತಿಸಲಾಗದ ಜಲಚರ ಜೀವಿಯು ಕ್ಯಾಮೆರಾದಲ್ಲಿ ನಟಿಸುತ್ತಿರುವುದನ್ನು ತೋರಿಸಿತು. ಈ ಒಂದು ನೋಟವು ನೋಡುವ ಸ್ಥಳದಿಂದ ಎಸ್ಕೇಪ್​ ಆಗುವಷ್ಟು ಭಯಾನಕವಾಗಿದೆ ಎಂದು ಫೋಟೋಗೆ ಅಡಿಬರಹ ನೀಡಲಾಗಿದೆ.

ಲೊಚ್ ನೆಸ್ ಮಾನ್ಸ್ಟರ್​ ನಿಜವಾಗಿ ಅಸ್ತಿತ್ವದಲ್ಲಿದೆಯೇ? ಸ್ಕಾಟಿಷ್ ಜಾನಪದದಲ್ಲಿ ಈ ಜೀವಿಯನ್ನು ಉಲ್ಲೇಖಿಸಲಾಗಿದೆ. ಇದನ್ನು ನೆಸ್ಸಿ ಎಂದೂ ಕರೆಯುತ್ತಾರೆ. ಲಂಡನ್‌ನ ನದಿಯಲ್ಲಿ ಕಾಣಿಸಿಕೊಂಡಿರುವುದು ಪೌರಾಣಿಕ ಪ್ರಾಣಿಯೇ ಎಂಬ ಊಹೆಗಳನ್ನು ಹುಟ್ಟುಹಾಕಿದೆ.
ನೆಟ್ಟಿಗರು ಸಹ ಬಗೆಬಗೆಯಲ್ಲಿ ಕಾಮೆಂಟ್​ ಮಾಡುತ್ತಿದ್ದಾರೆ. ಕೆಲವರು ಇದನ್ನು ಥೇಮ್ಸ್​ನ ಅನಕೊಂಡಾ ಅಂತಾ ಕರೆದರೆ, ಇನ್ನು ಕೆಲವರು ಅದೊಂದು ಗಾಡ್ಜಿಲ್ಲಾ ಮರಿ ಮತ್ತು ಕೆಂಪು ಕಣ್ಣು ಹೊಂದಿದೆ ಎಂದಿದ್ದಾರೆ.(ಏಜೆನ್ಸೀಸ್​)

ಮುಸ್ಲಿಮರಿಗೆ ನೀಡಿರುವ ಟೆಂಡರ್ ರದ್ದಾಗದಿದ್ರೆ ರಾಮಮಂದಿರ ಉದ್ಘಾಟನೆಗೆ ಬಿಡಲ್ಲ: ಪ್ರಮೋದ್ ಮುತಾಲಿಕ್ ಎಚ್ಚರಿಕೆ

ಸ್ಟುಡಿಯೋದಲ್ಲಿ ಮೃತದೇಹವಾಗಿ ಪತ್ತೆಯಾದ ಬಾಲಿವುಡ್​​ನ ಖ್ಯಾತ ಕಲಾ ನಿರ್ದೇಶಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
