ಲಖನೌ:ಕರೊನಾ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಂಗಳವಾರ ಮಧ್ಯರಾತ್ರಿಯಿಂದ ಇಡೀ ಭಾರತ ಲಾಕ್ ಡೌನ್ ಆಗಲಿದೆ ಎಂದು ಘೋಷಿಸಿದ ಮೇಲೆ ಎಲ್ಲ ರಾಜ್ಯ ಸರ್ಕಾರಗಳೂ ಫುಲ್​ ಅಲರ್ಟ್ ಆಗಿವೆ. ಇಂದಿನಿಂದಲೇ ವಾಹನ ಸಂಚಾರಗಳೆಲ್ಲ ಬಂದ್​ ಆಗಿವೆ. ಲಾಕ್​ಡೌನ್ ಆದೇಶ ಪಾಲಿಸದವರಿಗೆ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.
ಉತ್ತರಪ್ರದೇಶದಲ್ಲೂ ಕೂಡ ಲಾಕ್​ಡೌನ್​ನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಅಲ್ಲಿ ಪೊಲೀಸರು ಕಣ್ಗಾವಲು ಇಟ್ಟಿದ್ದಾರೆ. ಹೀಗಿರುವಾಗ 20 ವರ್ಷದ ಯುವಕ ಸೇರಿ ಒಂದಷ್ಟು ಜನರ ಪಾಡು ಹೇಳತೀರದ್ದು.
ಉನ್ನಾವೋದ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುವ 20 ವರ್ಷದ ಯುವಕ ಸೇರಿ ಕೆಲವರು ಈ ಲಾಕ್​​ಡೌನ್​ನಿಂದ ಸಂಕಷ್ಟಕ್ಕೀಡಾಗಿದ್ದಾರೆ. ಉನ್ನಾವೋದಿಂದ 80 ಕಿಮೀ ದೂರದಲ್ಲಿರುವ ತಮ್ಮ ಬರ್ಬಂಕಿ ಹಳ್ಳಿಗೆ ಹೋಗಲು ಯಾವುದೇ ವಾಹನಗಳಿಲ್ಲದೆ ಕಾಲ್ನಡಿಗೆಯಲ್ಲೇ ಹೊರಟಿದ್ದಾರೆ. ಮಂಗಳವಾರ ರಾತ್ರಿಯಿಂದ ನಡೆದುಕೊಂಡು ಹೊರಟಿರುವ ಅವರು, ಗುರುವಾರ ಮಧ್ಯಾಹ್ನ ಅಷ್ಟರಲ್ಲಿ ತಲುಪಬಹುದು. ಅದೂ ಕೂಡ ಮಾರ್ಗದಲ್ಲಿ ಎಲ್ಲೂ ಪೊಲೀಸರು ತಡೆಯದೆ ಇದ್ದರೆ !ಇದು ಸುಮಾರು 36 ತಾಸುಗಳ ಪ್ರಯಾಣ. ಅವಧೇಶ್ ಜತೆ ಇನ್ನೂ 20ಜನರು ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ಅವರಲ್ಲಿ ಒಂದಷ್ಟು ಜನರು ವೃದ್ಧರೂ ಇದ್ದಾರೆ. ಇವರೆಲ್ಲ ಅದೇ ಕಂಪನಿಯ ಕೆಲಸಗಾರರು.
ರಸ್ತೆಯಲ್ಲಿ ನಡೆದೇ ಸಾಗುತ್ತಿದ್ದ ಇವರನ್ನೆಲ್ಲ ಮಾಧ್ಯಮದವರು ಮಾತನಾಡಿಸಿ, ಬೇರೆ ಕಡೆ ಕೆಲಸಕ್ಕೆಂದು ವಲಸೆ ಹೋದವರು ಇದ್ದಲ್ಲೆ ಇರಿ, ಆಯಾ ಪ್ರದೇಶಗಳ ಆಡಳಿತ ನಿಮ್ಮ ಕಾಳಜಿ ಮಾಡುತ್ತದೆ ಎಂದು ಮೋದಿಯವರು ಹೇಳಿದ್ದರೂ ಹೀಗೇಕೆ ಗುಂಪುಗುಂಪಾಗಿ ಹೋಗುತ್ತಿದ್ದೀರಿ ಎಂದು ಪ್ರಶ್ನಿಸಿದ್ದಾರೆ.
ಅದಕ್ಕೆ ಉತ್ತರಿಸಿದ ಯುವಕ ಅವಧೇಶ್, ನನಗೆ ಗೊತ್ತು, ಹಾಗೆಲ್ಲ ಮಾಡಬಾರದು. ಆದರೆ ಬೇರೆ ದಾರಿ ಕಾಣಿಸುತ್ತಿಲ್ಲ. ನಾನು ಉನ್ನಾವೋದ ಸ್ಟೀಲ್​ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡುತ್ತೇನೆ. ಅವರೇ ಕೊಟ್ಟಿದ್ದ ರೂಂನಲ್ಲಿ ಇದ್ದೆ. ಆದರೆ ನಿನ್ನೆ ಕಾರ್ಖಾನೆ ಮ್ಯಾನೇಜ್​​ಮೆಂಟ್​ ಬಂದು, ವಸತಿ ಗೃಹವನ್ನು ಖಾಲಿ ಮಾಡುವಂತೆ ಹೇಳಿದರು. ಅವರೇ ಹಾಗೆ ಹೇಳಿದ ಮೇಲೆ ಇನ್ನೇನು ಮಾಡೋಕೆ ಆಗತ್ತೆ? ಉಳಿಯಲು ಮನೆಗೆ ಹೋಗುವುದು ಅನಿವಾರ್ಯ. ಯಾವ ವಾಹನಗಳೂ ಇಲ್ಲ. ನಡೆದುಕೊಂಡು ಹೋಗುವುದೊಂದೇ ದಾರಿ ಎಂದಿದ್ದಾನೆ. ಇದೇ ಗುಂಪಿನಲ್ಲಿ ಇದ್ದ 50ವರ್ಷದ ವೃದ್ಧ ಕೂಡ ಹೀಗೇ ಅಲವತ್ತುಕೊಂಡಿದ್ದಾರೆ.
ಬಟ್ಟೆಗಳನ್ನು ತುಂಬಿರುವ ದೊಡ್ಡ ದೊಡ್ಡ ಬ್ಯಾಗ್​​ಗಳನ್ನು ಹೊತ್ತು ನಡೆಯುತ್ತಿರುವ ಈ ಗುಂಪು, ತಲೆಗೆ ಟವೆಲ್​ನ್ನು ಕಟ್ಟಿಕೊಂಡು ಬಿಸಿಲಿನ ಝಳದಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 17 =
Remember me
