ನವದೆಹಲಿ:ಮಹಾರಾಷ್ಟ್ರದ ಮಾಜಿ ಗೃಹ ಮಂತ್ರಿ ಅನಿಲ್​ ದೇಶಮುಖ್​ ಹೆಸರಲ್ಲಿ ಆರ್ಥಿಕ ಅಪರಾಧಗಳ ತನಿಖೆ ನಡೆಸುವ ಎನ್​ಫೋರ್ಸ್​ಮೆಂಟ್​ ಡೈರೆಕ್ಟೊರೇಟ್​(ಇಡಿ) ಲುಕ್​ ಔಟ್​ ನೋಟೀಸ್​ ಹೊರಡಿಸಿದೆ. ಹಲವು ಸಮನ್ಸ್​ಗಳಿಗೆ ದೇಶಮುಖ್​ ಸೂಕ್ತವಾಗಿ ಸ್ಪಂದಿಸದೆ ಇರುವ ಹಿನ್ನೆಲೆಯಲ್ಲಿ, ಅವರು ದೇಶ ಬಿಟ್ಟು ಹೋಗುವುದನ್ನು ತಡೆಯಲು ಈ ನೋಟೀಸ್​ ಜಾರಿಮಾಡಲಾಗಿದೆ ಎನ್ನಲಾಗಿದೆ.
ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ(ಎನ್​ಸಿಪಿ)ದ ನಾಯಕರಾದ ದೇಶ್​ಮುಖ್​ ವಿರುದ್ಧ ಸುಮಾರು 100 ಕೋಟಿ ರೂಪಾಯಿಗಳ ಅಕ್ರಮ ಹಣ ವರ್ಗಾವಣೆ(ಮನಿ ಲಾಂಡರಿಂಗ್)​ ಆರೋಪದ ತನಿಖೆಯನ್ನು ಇಡಿ ಕೈಗೆತ್ತಿಕೊಂಡಿದೆ. ವಿಚಾರಣೆಗಾಗಿ ಹಾಜರಾಗಲು ಅವರಿಗೆ ಹಲವು ಸಮನ್ಸ್​ ಜಾರಿಗೊಳಿಸಿದ್ದರೂ ಈವರೆಗೆ ಭೌತಿಕ ಹಾಜರಾತಿ ನೀಡಿಲ್ಲ. ಸುಪ್ರೀಂ ಕೋರ್ಟ್​ನಲ್ಲಿ ಈ ಬಗ್ಗೆ ತಾವು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ಮುಗಿಯುವವರೆಗೆ ಇಡಿ ಮುಂದೆ ಬರುವುದಿಲ್ಲವೆಂದು ಹೇಳಿರುವ ದೆಶ್​ಮುಖ್​, ಯಾವುದೇ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ತಮ್ಮ ಹೇಳಿಕೆ ದಾಖಲಿಸಲು ಸಿದ್ಧರಿರುವುದಾಗಿಯೂ ಹೇಳಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:ಇಳಿದ ಕರೊನಾ ಸಾವುಗಳ ಸಂಖ್ಯೆ… 38,948 ಹೊಸ ಪ್ರಕರಣಗಳು
ಮಾಜಿ ಸಚಿವರಿಗೆ ಸುಪ್ರೀಂ ಕೋರ್ಟ್​ ಈವರೆಗೆ ಯಾವುದೇ ಮಧ್ಯಂತರ ಪರಿಹಾರ ನೀಡಿಲ್ಲ. ಮತ್ತೊಂದೆಡೆ, ದೇಶ್​ಮುಖ್​ರ ಸಹಾಯಕ ಕುಂದನ್​ ಶಿಂದೆ ಮತ್ತು ಆಪ್ತ ಕಾರ್ಯದರ್ಶಿ ಸಂಜೀವ್ ಪಾಲಂದ್​ರನ್ನು ಬಂಧಿಸಿರುವ ಇಡಿ, ಅವರ ವಿರುದ್ಧ ಅದಾಗಲೇ ಮನಿ ಲಾಂಡರಿಂಗ್​ನಲ್ಲಿ ಸಹಾಯ ಮಾಡಿರುವುದಾಗಿ ಚಾರ್ಜ್​ಶೀಟ್​ ಸಲ್ಲಿಸಿದೆ. ಇದೇ ಸೆಪ್ಟೆಂಬರ್ 3 ರಂದು ದೇಶ್​ಮುಖ್​ರ ವಕೀಲರ ತಂಡದ ಸದಸ್ಯ ಆನಂದ್​ ದಾಗಾ ಅವರನ್ನು ತನಿಖೆಯ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿರುವ ಆರೋಪದ ಮೇಲೆ ಸಿಬಿಐ ಬಂಧಿಸಿದೆ.
ಮಹಾರಾಷ್ಟ್ರದ ಗೃಹ ಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಕೆಲವು ಪೊಲೀಸ್​ ಅಧಿಕಾರಿಗಳ ಮೂಲಕ ಮುಂಬೈನ ಬಾರ್​ಗಳಿಂದ ಕೋಟ್ಯಂತರ ರೂ.ಗಳನ್ನು ವಸೂಲಿ ಮಾಡಿರುವುದಾಗಿ ದೇಶ್​ಮುಖ್​ ಮೇಲೆ ಆರೋಪ ಎದ್ದಿತ್ತು. ಈ ನಿಟ್ಟಿನಲ್ಲಿ ಸಿಬಿಐ ಏಪ್ರಿಲ್​ 21 ಕ್ಕೆ ಎಫ್​ಐಆರ್​ ದಾಖಲಿಸಿದ ನಂತರ, ಇಡಿ, ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದೆ.(ಏಜೆನ್ಸೀಸ್)
ಚಿಕ್ಕಚೊಕ್ಕ ಗಣೇಶೋತ್ಸವ! ಆಯೋಜಕರು ಲಸಿಕೆ ಪಡೆದಿರಬೇಕು, ಜನಜಂಗುಳಿ ಸಲ್ಲ… ಇಲ್ಲಿವೆ, ಮಾರ್ಗಸೂಚಿಗಳು!

ಜಾವೆದ್​ ಅಕ್ತರ್​ ಹೇಳಿಕೆ ಬಗ್ಗೆ ಆಕ್ರೋಶ; ಸಂಘ ಪರಿವಾರದ ಕ್ಷಮೆ ಕೇಳಿ ಎಂದ ಬಿಜೆಪಿ ವಕ್ತಾರ

ಪೂರ್ಣ ಲಸಿಕೀಕರಣದಲ್ಲಿ ಕರ್ನಾಟಕ 6ನೇ ಸ್ಥಾನದಲ್ಲಿದೆ! ಎರಡೂ ಡೋಸ್​ ಪಡೆದ ಜನರೆಷ್ಟು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 3 =
Remember me
