ನವದೆಹಲಿ:ಕೋವಿಶೀಲ್ಡ್ ಅಮಾನ್ಯ ಮಾಡಿದರೆ ಪ್ರತೀಕಾರದ ಕ್ರಮ ಕೈಗೊಳ್ಳುವುದಾಗಿ ಭಾರತ ಎದಿರೇಟು ನೀಡಿದ ನಂತರ ಎಚ್ಚೆತ್ತುಕೊಂಡ ಬ್ರಿಟನ್ ಸರ್ಕಾರ, ಕೋವಿಶೀಲ್ಡ್​ಗೆ ತನ್ನ ಪರಿಷ್ಕೃತ ಪ್ರವಾಸ ಮಾರ್ಗಸೂಚಿಯಲ್ಲಿ ಸ್ಥಾನ ನೀಡಿದೆ. ಆದರೆ, ಲಸಿಕೆ ಸರ್ಟಿಫಿಕೇಟ್ ವಿಚಾರದಲ್ಲಿ ಆಕ್ಷೇಪವಿದೆ ಎನ್ನುವ ಮೂಲಕ ಹೊಸದೊಂದು ಕ್ಯಾತೆ ತೆಗೆದು ವಿವಾದವನ್ನು ಜೀವಂತವಿರಿಸಿದೆ. ಈ ನಡುವೆ, ಲಸಿಕೆ ಪ್ರಮಾಣ ಪತ್ರದ ಬಗ್ಗೆ ಬ್ರಿಟನ್ ಆಕ್ಷೇಪ ವ್ಯಕ್ತಪಡಿಸಿರುವುದು ಕೇಂದ್ರ ಸರ್ಕಾರದ ಕಣ್ಣು ಕೆಂಪಾಗಿಸಿದೆ. ವ್ಯಾಕ್ಸಿನ್ ಸರ್ಟಿಫಿಕೇಟ್​ನಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಸ್ಟ್ರಾಜೆನಿಕಾ ಕೋವಿಶೀಲ್ಡ್, ಅಸ್ಟ್ರಾಜೆನಿಕಾ ವ್ಯಾಕ್ಸ್​ಝೆವಿರಿಯಾ ಮತ್ತು ಮಾಡರ್ನ್ ಟಕೇಡಾ ಮುಂತಾದ ನಾಲ್ಕು ಲಸಿಕೆಗಳಿಗೆ ಮಾನ್ಯತೆಯಿದೆ ಎಂದು ಬ್ರಿಟನ್​ನ ಪರಿಷ್ಕೃತ ಪ್ರವಾಸ ಮಾರ್ಗಸೂಚಿ ಹೇಳಿದೆ.
ಸಿಇಒ ವಿವರಣೆ:ಕೋವಿಡ್ ಚುಚ್ಚುಮಮದ್ದು ಹಾಕಿಸಿಕೊಂಡವರಿಗೆ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಕೇಂದ್ರೀಕೃತ ರಾಷ್ಟ್ರೀಯ ವ್ಯವಸ್ಥೆಯಾದ ಕೋವಿನ್ ಆಪ್ ಮತ್ತು ಪೋರ್ಟಲ್ ನಿಭಾಯಿಸುತ್ತದೆ. ವ್ಯಾಕ್ಸಿನ್ ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ಯಾವುದೇ ಸಮಸ್ಯೆಯಿಲ್ಲ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ (ಸಿಇಒ) ಆರ್.ಎಸ್. ಶರ್ಮಾ ಬುಧವಾರ ಹೇಳಿದ್ದಾರೆ. ಕೋವಿನ್ ಪ್ರಮಾಣೀಕರಣ ವ್ಯವಸ್ಥೆ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್​ಒ) ನಿಯಮಗಳಿಗೆ ಅನುಸಾರವಾಗಿದೆ. ಅಂತಾ ರಾಷ್ಟ್ರೀಯ ನಾಗರಿಕ ವಿಮಾನಯಾನ ಸಂಸ್ಥೆಯೊಂದಿಗೆ ಚರ್ಚೆ ಮುಂದುವರಿಸಲಾಗುವುದು ಎಂದು ಶರ್ಮಾ ಹೇಳಿದ್ದಾರೆ.
ಅಕ್ಟೋಬರ್​ನಿಂದ ಮಕ್ಕಳಿಗೆ ಲಸಿಕೆ?:ಕ್ಯಾಡಿಲಾ ಹೆಲ್ತ್​ಕೇರ್​ನ ಝೈಕೋವ್ ಡಿ ಮಕ್ಕಳ ಲಸಿಕೆ ಅಕ್ಟೋಬರ್​ನಲ್ಲಿ ಲಭ್ಯವಾಗಲಿದ್ದು, ಭಾರತದಲ್ಲಿ 12 ವರ್ಷ ಮತ್ತು ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಚುಚ್ಚುಮದ್ದು ಹಾಕುವ ಅಭಿಯಾನ ಆರಂಭಿಸಲಾಗುವುದೆಂದು ಮೂಲಗಳು ತಿಳಿಸಿವೆ. ಝೈಕೋವ್ ಡಿ ಲಸಿಕೆಯ ತುರ್ತು ಬಳಕೆಗೆ ಭಾರತದ ಔಷಧ ಮಹಾ ನಿಯಂತ್ರಕರು (ಡಿಸಿಜಿಐ) ಕಳೆದ ತಿಂಗಳು ಅನುಮತಿ ನೀಡಿದೆ. ಝೈಕೋವ್ ಡಿ ಜಗತ್ತಿನ ಮೊದಲ ಡಿಎನ್​ಎ-ಆಧರಿತ ಕೋವಿಡ್-19 ಲಸಿಕೆಯಾಗಿದೆ. ಅಕ್ಟೋಬರ್​ನಿಂದ 10 ಮಿಲಿಯನ್ ಡೋಸ್ ಲಸಿಕೆ ಉತ್ಪಾದಿಸಲು ಝೈಡುಸ್ ಕ್ಯಾಡಿಲಾ ಎಂದೇ ಖ್ಯಾತವಾಗಿರುವ ಕ್ಯಾಡಿಲಾ ಹೆಲ್ತ್​ಕೇರ್ ಕಂಪನಿ ಹೇಳಿದೆ.
ಚಿತ್ತೋನ್ಮಾದಿಗಳಲ್ಲಿ ಕೋವಿಡ್ ಅಧಿಕಚಿತ್ತಭ್ರಮೆ ಅಥವಾ ಭಾವೋನ್ಮಾದ (ಡೆಲಿರಿಯಂ) ಸಮಸ್ಯೆ ಇರುವವರಲ್ಲಿ ಕೋವಿಡ್ ರೋಗ ಹೆಚ್ಚಾಗಿ ಕಾಡುವ ಸಂಭವವಿದೆ ಎಂದು ಅಮೆರಿಕದ ಅಧ್ಯಯನವೊಂದು ಹೇಳಿದೆ. ‘ಬಿಎಂಜೆ ಓಪನ್’ ಜರ್ನಲ್​ನಲ್ಲಿ ಅಧ್ಯಯನ ವರದಿ ಪ್ರಕಟವಾಗಿದೆ. ಕರೊನಾ ಸಾಂಕ್ರಾಮಿಕತೆಯ ಆರಂಭ ಕಾಲದಲ್ಲಿ ಆಸ್ಪತ್ರೆಗೆ ದಾಖಲಾದ 150 ರೋಗಿಗಳ ಅಧ್ಯಯನ ನಡೆಸಿದಾಗ, ಆ ಪೈಕಿ ಶೇಕಡ 73 ರೋಗಿಗಳಲ್ಲಿ ಡೆಲಿರಿಯಂ ಇರುವುದು ಕಂಡು ಬಂದಿದೆ ಎಂದು ಅಧ್ಯಯನ ತಿಳಿಸಿದೆ. ಗೊಂದಲಕ್ಕೀಡಾಗುವುದು, ಚಿತ್ತಕ್ಷೋಭೆ ಗೊಳ್ಳುವುದು ಮತ್ತು ಸ್ಪಷ್ಟವಾಗಿ ಆಲೋಚಿಸಲು ಸಾಧ್ಯವಾಗದಿರುವುದು ಮುಂತಾದ ಗಂಭೀರ ಮಾನಸಿಕ ಸ್ಥಿತಿಯನ್ನು ಡೆಲಿರಿಯಂ ಎನ್ನುತ್ತಾರೆ. ಡೆಲಿರಿಯಂ ರೋಗಿಗಳು ಅತಿ ರಕ್ತದೊತ್ತಡ ಹಾಗೂ ಮಧುಮೇಹದಂಥ ಅನ್ಯರೋಗ ಗಳಿಂದ ಬಾಧಿತರಾಗಿರುವ ಸಾಧ್ಯತೆಯಿದೆ. ಕೋವಿಡ್-ಸಂಬಂಧಿತ ಗಂಭೀರ ಕಾಯಿಲೆಯಿಂದಲೂ ಬಳಲುವ ಸಂಭವವಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.
ಎರಡು ಡೋಸ್ ಅಂತರ ಇಳಿಕೆಕೇಂದ್ರ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಮಾರಿದ ಕೋವಿಶೀಲ್ಡ್ ಲಸಿಕೆಯ 2 ಡೋಸ್ ನಡುವಿನ ಅಂತರವನ್ನು ಇಳಿಸುವ ಸಾಧ್ಯತೆಯಿದೆ. ಮೊದಲ ಡೋಸ್ ಪಡೆದ ನಾಲ್ಕು ವಾರಗಳ ನಂತರ ಎರಡನೇ ಡೋಸ್ ಪಡೆಯಲು ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್​ಗಳು ಅವಕಾಶ ನೀಡುವ ಸಂಭವವಿದೆ. ಪ್ರಸ್ತುತ ಎರಡು ಡೋಸ್ ನಡುವಿನ ಅಂತರ 12ರಿಂದ 16 ವಾರವಾಗಿದೆ.
26,964 ಕೇಸ್ಭಾರತದಲ್ಲಿ ಬುಧವಾರ ಬೆಳಗ್ಗಿನ ವರೆಗಿನ 24 ಗಂಟೆ ಅವಧಿಯಲ್ಲಿ ಕರೊನಾ ಸೋಂಕಿನ 26,964 ಹೊಸ ಪ್ರಕರಣಗಳು ಪತ್ತೆಯಾಗಿವೆ. 383 ಮಂದಿ ಮೃತಪಟ್ಟಿದ್ದಾರೆ. ಈ ಅವಧಿಯಲ್ಲಿ 34,167 ಜನರು ಚೇತರಿಸಿಕೊಂಡಿ ದ್ದಾರೆ. ಕಳೆದ 186 ದಿನಗಳಲ್ಲೇ ಅತಿ ಕಡಿಮೆ; 3,01,989 ಸಕ್ರಿಯ ಪ್ರಕರಣಗಳಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
83 ಕೋಟಿ ಲಸಿಕೆ ವಿತರಣೆಬುಧವಾರ ಸಂಜೆ 7ರ ಅಂಕಿಅಂಶದ ಪ್ರಕಾರ ದೇಶದಲ್ಲಿ 83 ಸಾವಿರ ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದೆ. ಬುಧುವಾರ 64.98 ಲಕ್ಷ ಚುಚ್ಚುಮದ್ದು ಕೊಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 3 =
Remember me
