ನವದೆಹಲಿ:ರಾಜ್ಯಸಭೆ ವಿಪಕ್ಷನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡುವ ವೇಳೆ ಮೈಕ್ರೋಫೋನ್​ಗಳನ್ನು ಆಫ್​​ ಮಾಡಲಾಗಿದೆ ಎಂದು ಆರೋಪಿಸಿ ವಿಪಕ್ಷಗಳ ಒಕ್ಕೂಟ I.N.D.I.Aದ ಸದಸ್ಯರು ಸಭಾತ್ಯಾಗ ಮಾಡಿದ್ದಾರೆ.
ಈ ಕುರಿತು ಟ್ವೀಟ್​ ಮಾಡಿರುವ ಟಿಎಂಸಿ ಸಂಸದ ಡೆರೆಕ್​ ಓ ಬ್ರಿಯಾನ್​ ಈ ಘಟನೆ ಇಂದು ರಾಜ್ಯಸಭೆಯಲ್ಲಿ ನಡೆದಿದೆ. ಪ್ರತಿಪಕ್ಷ ನಾಯಕ ಮಾತನಾಡುವ ವೇಳೆ ಅವರ ಮೈಕ್​ ಆಫ್​ ಮಾಡಲಾಗಿದೆ. ಈ ಸಂಬಂಧ ವಿಪಕ್ಷಗಳ ಒಕ್ಕೂಟ I.N.D.I.Aದ ಸದಸ್ಯರು ಸಭಾತ್ಯಾಗ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.
This happened in Rajya Sabha today. THE MICROPHONE OF THE LEADER OF THE OPPOSITION WAS SWITCHED OFF. Every INDIA party walked out in protest#PARLIAMENTDeep dark chamber
ಇದನ್ನೂ ಓದಿ:VIDEO| ಮಣಿಪುರ ಗಲಭೆ ಕುರಿತು ಪ್ರಧಾನಿ ಮೋದಿ ಮೌನವಾಗಿದ್ದೇಕೆ: ಮಲ್ಲಿಕಾರ್ಜುನ ಖರ್ಗೆ
ಈ ಕುರಿತು ಟ್ವೀಟ್​ ಮಾಡಿರುವ ರಾಜ್ಯಸಭೆ ಸದಸ್ಯ ಜೈರಾಮ್​ ರಮೇಶ್​ ಮಣಿಪುರದಲ್ಲಿನ ಗಲಭೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂದು ಆಗ್ರಹಿಸಿ I.N.D.I.Aದ ಸದಸ್ಯರು ಒತ್ತಾಯಿಸಿದ ಖರ್ಗೆ ಅವರ ಮೈಕ್ರೋಫೋನ್​ಗಳನ್ನು ಆಫ್​ ಮಾಡಿಸುವ ಮೂಲಕ ಬಿಜೆಪಿ ನಾಯಕರು ತಡೆಯೊಡ್ಡಿದ್ದಾರೆ.
ವಿಪಕ್ಷ ನಾಯಕರ ಮಾತಿಗೆ ತಡೆಯೊಡ್ಡುವುದು. ಗದ್ದಲದಲ್ಲಿ ಮಸೂದೆಗಳನ್ನು ಅಂಗೀಕರಿಸುವುದು ವಿಪಕ್ಷಗಳ ಒಕ್ಕೂಟ I.N.D.I.Aದ ಸದಸ್ಯರು ಸಭಾತ್ಯಾಗ ಮಾಡಲು ಕಾರಣ ಎಂದು ರಾಜ್ಯಸಭೆ ಸದಸ್ಯ ಜೈರಾಮ್​ ರಮೇಶ್​ ಟ್ವೀಟ್​ ಮಾಡಿ ತಿಳಿಸಿದ್ದಾರೆ.
In the Rajya Sabha this afernoon, BJP MPs prevented Leader of the Opposition,@kharge-ji from speaking and raising INDIA’s demand for PM's statement in the House on Manipur and a discussion thereafter.Repeated obstruction at the instigation of none other than the Leader of the…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × two =
Remember me
