ಗುರುವಾಯೂರು:ಬುಧವಾರದ ಅಷ್ಟಮಿ ರೋಹಿಣಿ ದಿನದಂದು ಪ್ರಸಿದ್ಧ ಗುರುವಾಯೂರು ದೇವರಿಗೆ ಚಿನ್ನದ ಕಿರೀಟವನ್ನು ಧರಿಸಲಾಗುತ್ತದೆ. ಕೇರಳದ ಚಿನ್ನದ ಉದ್ಯಮಿರೊಬ್ಬರು ಕಿರೀಟವನ್ನು ಉಡುಗೊರೆ ನೀಡಿದ್ದಾರೆ.
ಸೆ. 6 ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಇದೆ. ಅದೇ ದಿನ ಚಿನ್ನದ ಕಿರೀಟವನ್ನು ಗುರುವಾಯೂರಪ್ಪನಿಗೆ ಅರ್ಪಿಸಲಾಗುತ್ತದೆ. ತಮಿಳುನಾಡಿನ ಕೊಯಮತ್ತೂರಿನಲ್ಲಿ ಚಿನ್ನದ ವ್ಯಾಪಾರ ನಡೆಸುವ ಕೇರಳದ ತ್ರಿಸ್ಸೂರು ಜಿಲ್ಲೆಯ ಕೈನೂರು ತರವಾಡು ಮೂಲದ ಕೆ.ವಿ. ರಾಜೇಶ್​ ಆಚಾರ್ಯ ಅವರು ಈ ಉಡುಗೊರೆ ನೀಡುತ್ತಿದ್ದಾರೆ.
ಇದನ್ನೂ ಓದಿ:ಸೋಫಾ ಸೆಟ್‌ ಖರೀದಿಗೆ ಉತ್ಸುಕತೆ: ಫರ್ನೀಚರ್ ಎಕ್ಸ್‌ಪೋಗೆ ಜನರಿಂದ ಉತ್ತಮ ಸ್ಪಂದನೆ, 11ರವರೆಗೆ ಆಯೋಜನೆ
ಶ್ರೀ ಕೃಷ್ಣ ಜನ್ಮಾಷ್ಟಮಿ ಹಿನ್ನೆಲೆಯಲ್ಲಿ ಗುರುವಾಯೂರಪ್ಪ (ಶ್ರೀ ಕೃಷ್ಣ)ನಿಗೆ ಉಡುಗೊರೆ ನೀಡುತ್ತಿದ್ದಾರೆ. ಚಿನ್ನದ ಕಿರೀಟ 38 ಸವರನ್​ ತೂಕವಿದೆ. ಜನ್ಮಾಷ್ಟಮಿ ದಿನ ಕಾಣಿಕೆಯಾಗಿ ಸ್ವೀಕರಿಸಿದ ವಸ್ತುಗಳನ್ನು ವಿಗ್ರಹದ ಮೇಲೆ ಧರಿಸಲಾಗುತ್ತದೆ ಮತ್ತು ನಂತರ ದೇವಸ್ವಂನ ರಿಜಿಸ್ಟರ್‌ನಲ್ಲಿ ದಾಖಲಿಸಲಾಗುತ್ತದೆ ಮತ್ತು ಸುರಕ್ಷಿತ ಲಾಕರ್‌ಗೆ ವರ್ಗಾಯಿಸಲಾಗುತ್ತದೆ.
ಕಳೆದ ತಿಂಗಳು ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರ ಪತ್ನಿ ದುರ್ಗಾ ಅವರು ಗುರುವಾಯೂರಪ್ಪನವರಿಗೆ 32 ಸವರನ್​ ಚಿನ್ನದ ಕಿರೀಟವನ್ನು ಕಾಣಿಕೆಯಾಗಿ ಅರ್ಪಿಸಿದ್ದರು. ಅಲ್ಲದೆ, ಚಥಯಂ ದಿನದಂದು ಗುರುವಾಯೂರಪ್ಪನವರಿಗೆ ಸುಮಾರು ನೂರು ಸವರನ್​ ತೂಕದ ಚಿನ್ನದ ಕಿಂಡಿಯನ್ನು ಕಾಣಿಕೆಯಾಗಿ ಸ್ವೀಕರಿಸಲಾಯಿತು. ಇದನ್ನು ಟಿವಿಎಸ್ ಗ್ರೂಪ್ ಪ್ರಸ್ತುತಪಡಿಸಿದೆ. ಉದ್ಯಮಿ ಡಾ. ರವಿ ಪಿಳ್ಳೈ ಅವರು 2021ರ ಸೆಪ್ಟೆಂಬರ್​ನಲ್ಲಿ 725 ಗ್ರಾಂ ಚಿನ್ನದ ಕಿರೀಟವನ್ನು ಉಡುಗೊರೆಯಾಗಿ ನೀಡಿದ್ದರು.(ಏಜೆನ್ಸೀಸ್​)
ದೆಹಲಿಗೆ ಹೋಗಿ ಜಿ-20 ಶೃಂಗಸಭೆಗೆ ಅಡ್ಡಿಪಡಿಸಿ: ಕಾಶ್ಮೀರದ ಮುಸ್ಲಿಮರಿಗೆ ಕರೆ ಕೊಟ್ಟ ಖಲಿಸ್ತಾನಿ ನಾಯಕ

ಚಂದ್ರಯಾನ-3 ಉಡಾವಣೆ ವೇಳೆ ಕೌಂಟ್​ಡೌನ್​ ಧ್ವನಿ ನೀಡಿದ್ದ ISRO ವಿಜ್ಞಾನಿ ಹೃದಯಾಘಾತದಿಂದ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 2 =
Remember me
