ಪಟನಾ:ಬಿಹಾರದ ಅರ್ರಾದಲ್ಲಿ ಎಲ್ಲರನ್ನು ಆಶ್ಚರ್ಯಗೆ ದೂಡುವ ಪ್ರಕರಣವೊಂದು ಆಗಾಗ ಬೆಳಕಿಗೆ ಬರುತ್ತಲೇ ಇದೆ. ಜನರು ಕೋರ್ಟ್​ಗೆ ಅಲೆದಾಡುವುದು ಸಾಮಾನ್ಯ. ಆದರೆ, ದೇವರು ಕೋರ್ಟ್​ ಮೆಟ್ಟಿಲೇರಿದ್ದಾನೆ ಅಂದರೆ ಅದನ್ನು ಯಾರೂ ನಂಬುವುದಿಲ್ಲ ಮತ್ತು ಅದಕ್ಕಿಂತ ದೊಡ್ಡ ಅಚ್ಚರಿಯೂ ಇಲ್ಲ. ಆದರೆ, ಅರ್ರಾದಲ್ಲಿ ಇಂಥದ್ದೊಂದು ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಮಾನವರ ವಿರುದ್ಧ ದೇವರು ಪ್ರಕರಣ ದಾಖಲಿಸಿದ್ದಾರೆ. ದೇವರು ಹೆಸರಿನಲ್ಲಿ ಒಂದೆರಡಲ್ಲ ನಾಲ್ಕು ಪ್ರಕರಣಗಳು ನಡೆಯುತ್ತಿವೆ.
ಅಂದಹಾಗೆ ಮಾನವರ ವಿರುದ್ಧ ಪ್ರಕರಣ ದಾಖಲಿಸಿರುವುದು ಬೇರೆ ಯಾರೂ ಅಲ್ಲ ಅದು ಹನುಮಂತ. ಅರ್ರಾದ ಸಿವಿಲ್​ ಕೋರ್ಟ್​ನಲ್ಲಿ ಹನುಮಂತ ದಾವೆ ಹೂಡಿದ್ದಾನೆ. ಎಲ್ಲ ಪ್ರಕರಣವೂ ಜಾಗದ ವಿವಾದಕ್ಕೆ ಸಂಬಂಧಿಸಿದ್ದಾಗಿವೆ.
ಯಾರ ಮೇಲೆ ಪ್ರಕರಣ ದಾಖಲು?ಹನಮಂತ ದೇವರು ಸೇರಿದಂತೆ ಠಾಕೂರ್​ ಮತ್ತು ಇತರೆ ಭಕ್ತರ ಹೆಸರಿನಲ್ಲಿ ಅರ್ರಾ ಸಿವಿಲ್​ ಕೊರ್ಟ್​ನಲ್ಲಿ ಪ್ರಕರಣ ದಾಖಲಾಗಿದೆ. ಮೊದಲ ಪ್ರಕರಣ (4/23) ಪುಷ್ಪಾ ದೇವಿ ಎಂಬುವರ ವಿರುದ್ಧ ದಾಖಲಾಗಿದೆ. ಎರಡನೇ ಪ್ರಕರಣ (11/19) ನಾರಾಯಣ್​ ಶರ್ಮ ವಿರುದ್ಧ, ಮೂರನೇ ಕೇಸ್​ (297/89) ಯೋಗಿಂದರ್​ ಸಿಂಗ್​ ವಿರುದ್ಧ ಮತ್ತು ನಾಲ್ಕನೇ ಕೇಸ್​ (18/88) ಅಯೋಧ್ಯ ಮಿಸ್ತ್ರಿ ಮತ್ತು ಸುಪಾನ್​ ಮಿಸ್ತ್ರಿ ಎಂಬುವರ ವಿರುದ್ಧ ದಾಖಲಾಗಿದೆ. ಇವರೆಲ್ಲ ಅಂಗಡಿಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ, ಬಾಡಿಗೆಯನ್ನು ನೀಡುತ್ತಿಲ್ಲ ಎಂಬ ಆರೋಪವಿದೆ.
ಈ ಪ್ರಕರಣದ ಸರಣಿಯು 1988 ರಿಂದ ಪ್ರಾರಂಭವಾಯಿತು. ನಂತರ 1989, 2019 ಮತ್ತು 2023 ರಲ್ಲಿ ಪ್ರಕರಣಗಳನ್ನು ದಾಖಲಿಸಲಾಯಿತು. ಅದು ಇನ್ನೂ ನಡೆಯುತ್ತಲೇ ಇದೆ. ಈ ಎಲ್ಲ ಪ್ರಕರಣಗಳನ್ನು ಆಗಿನ ಬಡಿ ಮಥಿಯಾದ ಮಹಂತ್ ರಾಮ್ ಕಿಂಕರ್ ದಾಸ್ ನಡೆಸುತ್ತಿದ್ದರು. ಆದರೆ ಬಡಿ ಮಥಿಯಾದ ಹನುಮಂತ ಮತ್ತು ಠಾಕೂರ್ ಅವರನ್ನು ಪ್ರಕರಣದಲ್ಲಿ ಮೊದಲ ಕಕ್ಷಿದಾರನಾಗಿ ಮಾಡಲಾಗಿದೆ.
35 ವರ್ಷಗಳಿಂದ ನಡೆಯುತ್ತಿರುವ ಪ್ರಕರಣಗಳಲ್ಲಿ ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ತೀರ್ಪಿನ ನಂತರವೇ ಯಾರು ಜಯಗಳಿಸುತ್ತಾರೆ ಎಂಬುದು ಗೊತ್ತಾಗಲಿದೆ. ಈ ಪ್ರಕರಣದ ಆರೋಪಿಗಳಾದ ನಾರಾಯಣ ಶರ್ಮಾ ಮತ್ತು ಪುಷ್ಪಾದೇವಿ ಪುತ್ರ ಚಂದನ್ ಓಜಾ ಅವರೇ ಅಚ್ಚರಿಗೊಂಡಿದ್ದಾರೆ. ಇದು ಸಂಪೂರ್ಣವಾಗಿ ವಿಚಿತ್ರವಾಗಿದೆ ಮತ್ತು ಆಘಾತಕ್ಕೊಳಗಾಗಿದ್ದೇವೆ ಎಂದು ಅವರು ಹೇಳುತ್ತಾರೆ. ನಾವು ಯಾವುದೇ ತಪ್ಪು ಮಾಡಿದರೆ, ಮೊದಲು ದೇವರ ಬಳಿಗೆ ಹೋಗಿ ಕ್ಷಮೆ ಕೇಳುತ್ತೇವೆ, ಆದರೆ ಇಲ್ಲಿ ನಮ್ಮ ಮೇಲೆ ದೇವರೇ ಆರೋಪ ಮಾಡಿದ್ದಾರೆ. ಈ ಬಗ್ಗೆ ಆರಂಭದಲ್ಲಿ ನಮಗೆ ತಿಳಿದಿರಲಿಲ್ಲ. ಆದರೆ, ನ್ಯಾಯಾಲಯದಿಂದ ನೋಟಿಸ್​ ಬಂದಾಗಲೇ ಈ ಬಗ್ಗೆ ನಮಗೆ ಗೊತ್ತಾಯಿತು ಎಂದಿದ್ದಾರೆ.
ಇದೇ ವೇಳೆ ಸಿವಿಲ್ ನ್ಯಾಯಾಲಯದ ವಕೀಲರೊಬ್ಬರು ಮಾತನಾಡಿ, ಈ ಪ್ರಕರಣ ಸ್ವಲ್ಪ ವಿಭಿನ್ನವಾಗಿದೆ. ನಿಮಗೆ ಖಂಡಿತಾ ಆಶ್ಚರ್ಯವಾಗುತ್ತದೆ. ಆದರೆ, ಸಂವಿಧಾನದ ಪ್ರಕಾರ ಇದು ಸಾಧ್ಯ. ದೇವರ ಹೆಸರಿನಲ್ಲಿ ಆತನ ಸೇವಕರು ಅಥವಾ ದೇವಸ್ಥಾನದ ಅರ್ಚಕರು ಯಾರ ಮೇಲೇ ಬೇಕಾದರೂ ಮೊಕದ್ದಮೆ ಹೂಡಬಹುದು ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
‘ಈ ಹೊತ್ತಿಗೆ’ ಪ್ರಶಸ್ತಿಗೆ ಕಥೆ, ಕವನಸಂಕಲನ ಆಹ್ವಾನ

ಹೊಸ ಶೂ ಕಚ್ಚುತ್ತಿದೆಯೇ? ಸಮಸ್ಯೆಯಿಂದ ಪಾರಾಗಲು ಈ ಸಲಹೆಗಳನ್ನು ಪ್ರಯತ್ನಿಸಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:8 + 10 =
Remember me
