ಭಗವಂತ ಶ್ರೀರಾಮನಫೋಟೋವಿರುವ ಪೇಪರ್​ ಪ್ಲೇಟ್​ಗಳಲ್ಲಿ ಗ್ರಾಹಕರಿಗೆ ಬಿರಿಯಾನಿ ಬಡಿಸುತ್ತಿರುವ ಆಘಾತಕಾರಿ ದೃಶ್ಯವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ವಿಡಿಯೋ ನೋಡಿದ ನೆಟ್ಟಿಗರು ಅಂಗಡಿ ಮಾಲೀಕನ ವಿರುದ್ಧ ವ್ಯಾಪಕವಾಗಿ ಛೀಮಾರಿ ಹಾಕಿದ್ದಾರೆ. ದೆಹಲಿಯ ಜಹಾಂಗೀರ್‌ಪುರಿಯಲ್ಲಿರುವ ಬಿರಿಯಾನಿ ಜಾಯಿಂಟ್‌ನಲ್ಲಿ ಈ ಘಟನೆ ವರದಿಯಾಗಿದ್ದು, ಸದ್ಯ ಅಂಗಡಿ ಮಾಲೀಕನನ್ನು ಸ್ಥಳೀಯ ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ:ಹುಟ್ಟುಹಬ್ಬದಂದೇ ಕೇಕ್​ ತಿಂದು ಬಾಲಕಿ ಸಾವು ಪ್ರಕರಣ: ತಿಂಗಳ ಬಳಿಕ ಭಯಾನಕ ಸಂಗತಿ ಬಯಲು
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ, ಭಗವಂತ ಶ್ರೀರಾಮನ ಚಿತ್ರಗಳನ್ನು ಒಳಗೊಂಡ ಪೇಪರ್​ ಪ್ಲೇಟ್​ಗಳಲ್ಲಿ ಗ್ರಾಹಕರಿಗೆ ಬಿರಿಯಾನಿ ಹಾಕಿಕೊಡುತ್ತಿರುವ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದು, ಎಲ್ಲೆಡೆ ಹರಿಬಿಟ್ಟಿದ್ದಾರೆ. ಬಿರಿಯಾನಿಗಾಗಿ ಅಂಗಡಿಯ ಬಳಿ ಜನರು ಗುಂಪುಗಟ್ಟಿ ಸಾಲು ಸಾಲಾಗಿ ನಿಂತಿರುವುದು ಕಾಣಬಹುದು.
Jahangirpuri, Delhi: Biriyani was being served on paper plates with images of Lord Rama, locals and Bajrang dal object and complained to Police.
Investigation on…..https://t.co/gcojcxZYgUpic.twitter.com/HgxcgFEnke
— Megh Updates 🚨™ (@MeghUpdates)April 23, 2024

ಅಂಗಡಿ ಮಾಲೀಕನ ಈ ನಾಚಿಕೆಗೇಡಿನ ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸ್ಥಳೀಯರ ಭಾರೀ ವಿರೋಧದ ಬೆನ್ನಲ್ಲೇ ಮಾಹಿತಿ ಪಡೆದ ಬಜರಂಗದಳದ ಸದಸ್ಯರು ತಕ್ಷಣವೇ ಅಂಗಡಿಯ ಮಾಲೀಕರಿಗೆ ಆ ಪ್ಲೇಟ್‌ಗಳಲ್ಲಿ ಬಿರಿಯಾನಿ ಮಾರಾಟ ಮಾಡದಂತೆ ಎಚ್ಚರಿಸಿ, ನಂತರದಲ್ಲಿ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು ಅಂಗಡಿ ಮಾಲೀಕನನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಮಾನಗೆಟ್ಟ ಕಾಂಗ್ರೆಸ್ ಜಯವೆಂದು ತಪ್ಪು ವ್ಯಾಖ್ಯಾನ: ಆರ್.ಅಶೋಕ್ ಚಾಟಿ
ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇದರ ಹಿಂದಿದ್ದ ಕಾರಣವೇನು? ಇದು ಮಾರ್ಕೆಟಿಂಗ್ ಉದ್ದೇಶಕ್ಕಾಗಿ ಹೀಗೆ ಮಾಡಿದ್ದಾರೆಯೇ ಅಥವಾ ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಇದನ್ನು ಮಾಡಿದ್ದಾರೆಯೇ ಎಂಬುದನ್ನು ಸದ್ಯ ಪರಿಶೀಲಿಸುತ್ತಿದ್ದಾರೆ,(ಏಜೆನ್ಸೀಸ್).
ಇನ್ನೆಷ್ಟು ಸಹಿಸಿಕೊಳ್ಳೋದು? ಮುಂದಿನ ಸೀಸನ್​​ಗಾದ್ರು ಈ ಬದಲಾವಣೆ ತನ್ನಿ ಸಾಕು! RCB ಫ್ಯಾನ್ಸ್​ ಮನವಿ

4 ಗಂಟೆಗಳ ಕಾಲ ಅವರಿಬ್ಬರು ಹೀಗೆ ಇದ್ರು! ಅದನ್ನು ನೋಡಿ… ಪ್ರಯಾಣಿಕ ಹರಿಬಿಟ್ಟ ದೃಶ್ಯ ನೋಡಿ ದಂಗಾದ ನೆಟ್ಟಿಗರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
