ತಿರುಪತಿ:ತಿರುಮಲ ತಿರುಪತಿ ದೇವಸ್ಥಾನ ವಿಶ್ವದ ಅತ್ಯಂತ ಹೆಚ್ಚು ಶ್ರೀಮಂತ ದೇವಸ್ಥಾನ ಎಂಬುವುದಕ್ಕೆ ಇದೀಗ ಟಿಟಿಡಿ ಉತ್ತರ ನೀಡಿದೆ.
ತಿರುಪತಿ ತಿರುಮಲ ದೇವಸ್ಥಾನ ದೇಶದ ವಿವಿಧ ಭಾಗದಲ್ಲಿ 960 ಕಡೆಯಲ್ಲಿ ಆಸ್ತಿ ಹೊಂದಿದೆ. ಇವು 7123 ಎಕೆರೆ ವಿಸ್ತೀರ್ಣವಿದ್ದು, 85,705 ಕೋಟಿ ರೂ. ಮೌಲ್ಯ ಹೊಂದಿದೆ ಎಂದು ಟಿಟಿಡಿ ಅಧ್ಯಕ್ಷ ವೈ.ವಿ ಸುಬ್ಬಾರೆಡ್ಡಿ ಮಾಹಿತಿ ನೀಡಿದ್ದಾರೆ.
1974 ರಿಂದ 2014ರ ನಡುವೆ ವಿವಿಧ ಸರ್ಕಾರಗಳ ಸುಪರ್ಧಿಯಲ್ಲಿ ಟಿಟಿಡಿ ಟ್ರಸ್ಟ್‌ ವಿವಿಧ ಕಾರಣಗಳಿಗಾಗಿ ದೇವಾಲಯಕ್ಕೆ ಸೇರಿದ 113 ಆಸ್ತಿಗಳನ್ನು ವಿಲೇವಾರಿ ಮಾಡಿದೆ. ಆದರೆ 2014ರ ನಂತರ ದೇವಾಲಯಕ್ಕೆ ಸೇರಿದ ಯಾವುದೇ ಆಸ್ತಿಗಳನ್ನು ಮಾರಾಟ ಮಾಡಿಲ್ಲ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಹಿಂದಿನ ಟಿಟಿಡಿ ಟ್ರಸ್ಟ್ ದೇವಾಲಯದ ಅಸ್ತಿಯ ಕುರಿತು ಬಿಳಿಪತ್ರ ಬಿಡುಗಡೆ ಮಾಡಿತ್ತು. ಎರಡನೇ ಬಾರಿ ಅಸ್ತಿ ಪತ್ರದ ದಾಖಲೆಗಳನ್ನು ಟ್ರಸ್ಟ್​ನ ವೆಬ್​ಸೈಟ್​ನಲ್ಲಿ ಬಿಡಗಡೆ ಮಾಡಲಾಗಿದೆ. ಯಾರು ಬೇಕಾದರು ಪರೀಕ್ಷಿಸಬಹುದು. ದೇವಾಲಯ ಆಡಳಿತದಲ್ಲಿ ಪಾರದರ್ಶಕತೆಯನ್ನು ತರಲಾಗಿದೆ. ಜತೆಗೆ ದೇವಾಲಯಕ್ಕೆ ಸಂಬಂಧಪಟ್ಟ ಆಸ್ತಿಗಳನ್ನು ಸಂರಕ್ಷಿಸಲು ಬೇಕಾದ ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.
ಟಿಟಿಡಿ ದೇಶದ ವಿವಿಧ ರಾಷ್ಟ್ರೀಕೃತ ಬ್ಯಾಂಕ್​ಗಳಲ್ಲಿ 14 ಸಾವಿರ ಕೋಟಿ ರೂಪಾಯಿ ಮೊತ್ತವನ್ನು ಫಿಕ್ಸೆಡ್ ಡೆಪಾಸಿಟ್ ಮಾಡಿದೆ. ಟಿಟಿಡಿ ಹೆಸರಿನಲ್ಲಿ 14 ಟನ್​ ಚಿನ್ನವನ್ನು ಶೇಖರಿಸಿಡಲಾಗಿದೆ. ಈಗಾಗಲೇ ತಿರುಪತಿ ತಿರುಮಲ ದೇವಸ್ಥಾನ ವಿಶ್ವದ ಶ್ರೀಮಂತ ದೇವಸ್ಥಾನವೆಂಬ ಖ್ಯಾತಿ ಹೊಂದಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × five =
Remember me
