ಚೆನ್ನೈ:ಖಳನಾಯಕ ಪಾತ್ರದಲ್ಲಿ ಅಮೋಘ ಅಭಿನಯದ ಮೂಲಕ ತುಂಬಾ ಪ್ರಸಿದ್ಧಿ ಪಡೆದಿರುವ ಖಳನಟ ಪೊನ್ನಂಬಲಂ ಯೂಟ್ಯೂಬ್​ ಚಾನೆಲ್​ ಸಂದರ್ಶನವೊಂದರಲ್ಲಿ ತನ್ನ ಬದುಕಿನಲ್ಲಿ ಸಹೋದರನಿಂದಲೇ ನಡೆದ ದ್ರೋಹವನ್ನು ಬಿಚ್ಚಿಟ್ಟಿದ್ದಾರೆ.
ಪೊನ್ನಂಬಲಂ ಅವರು ತಮಿಳಿನ ಬಹುತೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಚಿನ್ನ, ಕಿಚ್ಚ ಹಾಗೂ ಪೊಲೀಸ್​ ಸ್ಟೋರಿ ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ.
ಇತ್ತೀಚೆಗಷ್ಟೇ ಪೊನ್ನಂಬಲಂ ಕಿಡ್ನಿ ಕಸಿ ಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ತನ್ನ ಸಹೋದರ ತನಗೆ ವಿಷ ಹಾಕಲು ಯತ್ನಿಸಿದರು ಎಂದು ಆರೋಪ ಮಾಡಿದ್ದಾರೆ. ನನ್ನ ಕುಡಿತ ಚಟದಿಂದ ನನ್ನ ಕಿಡ್ನಿಗಳು ಹಾನಿಯಾಗಿಲ್ಲ. ನನ್ನ ತಂದೆಗೆ ನಾಲ್ಕು ಹೆಂಡತಿಯರು. ತಂದೆಯ ಮೂರನೇ ಹೆಂಡತಿಯ ಮಗ ಹಾಗೂ ನನ್ನ ಮಲ ಸಹೋದರ ನನ್ನ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ. ನಾನು ಅವನನ್ನು ತುಂಬಾ ನಂಬಿದ್ದೆ. ಆದರೂ, ಒಂದು ದಿನ ಬಿಯರ್‌ನಲ್ಲಿ ಸ್ಲೋ ಪಾಯಿಸನ್​ ಅನ್ನು ಬೆರೆಸಿ ಕುಡಿಸಿದರು. ಇದು ನನ್ನ ಮೂತ್ರಪಿಂಡದ ಮೇಲೆ ಪ್ರತಿಕೂಲ ಪರಿಣಾಮ ಬೀರಿತು ಎಂದು ಹೇಳಿದ್ದಾರೆ.
ಇದನ್ನೂ ಓದಿ:ರೈಲ್ವೇ ಸ್ಟೇಷನ್​ನಲ್ಲಿ ಡ್ರಮ್​​ನೊಳಗೆ ಶವ ಪತ್ತೆ ಪ್ರಕರಣ; ಹತ್ಯೆಗೀಡಾದ ಮಹಿಳೆ ಯಾರೆಂದು ಪತ್ತೆ ಮಾಡಿದ ಪೊಲೀಸರು
ನನ್ನ ಮಲಸಹೋದರರು ಆಹಾರದಲ್ಲಿ ವಿಷ ಬೆರೆಸುವುದನ್ನು ಮುಂದುವರೆಸಿದ್ದಾರೆ ಮತ್ತು ಅದನ್ನು ವೈದ್ಯರು ಸಹ ಗುರುತಿಸಿದ್ದಾರೆ ಎಂದು ಪೊನ್ನಂಬಲಂ ಆರೋಪಿಸಿದ್ದಾರೆ. ಇದಿಷ್ಟೇ ಅಲ್ಲದೆ, ತನ್ನ ವಿರುದ್ಧ ತನ್ನ ಸಹೋದರ ವಾಮಾಚಾರ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಮಾರು 1500 ಸಿನಿಮಾಗಳಲ್ಲಿ ಪೆಟ್ಟು ತಿಂದು ಗಳಿಸಿದೆಲ್ಲ ನನ್ನ ಕುಟುಂಬಕ್ಕಾಗಿ. ಆದರೆ, ನನ್ನ ಸಹೋದರ ನನಗೆ ಈ ರೀತಿ ಮಾಡಿದ್ದಾನೆ ಎಂದು ತಿಳಿದಾಗ ನನಗೆ ತುಂಬಾ ನೋವಾಯಿತು ಎಂದು ಹೇಳಿದರು.
ಸ್ಟಂಟ್‌ಮ್ಯಾನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಪೊನ್ನಂಬಲಂ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿಯ ಹಲವಾರು ಚಲನಚಿತ್ರಗಳಲ್ಲಿ ವಿಲನ್ ಪಾತ್ರಗಳನ್ನು ನಿರ್ವಹಿಸಿದ್ದಾರೆ.(ಏಜೆನ್ಸೀಸ್​)
ಇಂದೇ ವೇತನ ಹೆಚ್ಚಳ ಆದೇಶ: ಕೆಪಿಟಿಸಿಎಲ್​, ಸಾರಿಗೆ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ ಬೊಮ್ಮಾಯಿ‌

ನಾಳೆ ತೆರೆಗೆ ಅಪ್ಪಲಿಸಲಿದೆ ಕಬ್ಜ: ಸಿನಿಮಾ ತಂಡದಿಂದ ಟೆಂಪಲ್​ ರನ್​

ಮತದಾನದ ಮಹತ್ವ ಸಾರುವ ಸಿನಿಮಾ ‘ಪ್ರಭುತ್ವ’; ಟ್ರೇಲರ್​ ಬಿಡುಗಡೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − nine =
Remember me
