ತಿರುವನಂತಪುರಂ:ಈ ವರ್ಷ 25 ಕೋಟಿ ರೂ. ಓಣಂ ಬಂಪರ್ ಲಾಟರಿ ಗೆದ್ದವರಿಗೆ ಇನ್ನು ಹಣ ಕೈ ಸೇರಿಲ್ಲ. ಹಣಕ್ಕಾಗಿ ಇನ್ನಷ್ಟು ಕಾಯುವ ಅನಿವಾರ್ಯತೆ ಎದುರಾಗಿದೆ. ಅಲ್ಲದೆ, ಹಣ ಸಿಗದೇ ಇರುವ ಪರಿಸ್ಥಿತಿಯು ನಿರ್ಮಾಣವಾಗಿದೆ. 25 ಕೋಟಿ ರೂ. ಮೌಲ್ಯದ ಟಿಕೆಟ್ ತಮಿಳುನಾಡಿನ ಕಾಳಸಂತೆಯಲ್ಲಿ ಮಾರಾಟವಾಗಿದೆಯೇ ಎಂಬುದನ್ನು ಪತ್ತೆ ಹಚ್ಚಲು ಲಾಟರಿ ಇಲಾಖೆ ತನಿಖೆ ಆರಂಭಿಸಿದೆ. ಜಂಟಿ ನಿರ್ದೇಶಕರು ಮತ್ತು ಹಣಕಾಸು ಅಧಿಕಾರಿಯನ್ನು ಒಳಗೊಂಡ ಏಳು ಸದಸ್ಯರ ತಂಡದ ತನಿಖಾ ವರದಿಯ ಮೇಲೆ ಮೊದಲ ಬಹುಮಾನ ವಿಜೇತರ ಭವಿಷ್ಯ ನಿರ್ಧಾರವಾಗಿದೆ.
ಈ ಬಾರಿಯ ಓಣಂ ಬಂಪರ್ ಲಾಟರಿ ಗೆದ್ದವರು ತಮಿಳುನಾಡು ಮೂಲದ ಪಾಂಡ್ಯರಾಜ್ ಮತ್ತು ಇತರ ಮೂವರು ಸ್ನೇಹಿತರು. ವಾಳಯಾರ್​ನಲ್ಲಿ ಟಿಕೆಟ್ ಖರೀದಿಸಿರುವುದಾಗಿ ಬಹುಮಾನ ವಿಜೇತ ಪಾಂಡ್ಯರಾಜ್ ತಿಳಿಸಿದ್ದಾರೆ. ಆದರೆ, ಬಹುಮಾನ ಟಿಕೆಟ್​ ಅನ್ನು ಕೇರಳದಿಂದ ತಂದು ತಮಿಳುನಾಡಿನ ಕಾಳಸಂತೆಯಲ್ಲಿ ಮಾರಾಟ ಮಾಡಲಾಗಿದೆ ಎಂದು ತಮಿಳುನಾಡು ಮೂಲದವರೊಬ್ಬರು ದೂರು ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲಾಟರಿ ಇಲಾಖೆ ತನಿಖೆಯನ್ನು ಪ್ರಕಟಿಸಿದೆ.
ಇದನ್ನೂ ಓದಿ:ಆಸ್ಪತ್ರೆಯಲ್ಲಿ ಪವರ್ ಕಟ್; ಮೊಬೈಲ್​ ಟಾರ್ಚ್​ನಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಿದ ವೈದ್ಯರು
ಕಾನೂನಿನ ಪ್ರಕಾರ ಕೇರಳ ಲಾಟರಿಯನ್ನು ಬೇರೆ ರಾಜ್ಯಗಳಲ್ಲಿ ಮಾರಾಟ ಮಾಡುವಂತಿಲ್ಲ. ಬಹುಮಾನ ವಿಜೇತರು ಕೇರಳಕ್ಕೆ ಬರಲು ಕಾರಣಗಳನ್ನೂ ಪರಿಶೀಲಿಸಲಾಗುವುದು. ಬಹುಮಾನ ವಿಜೇತರು ಲಾಟರಿ ಖರೀದಿ ಮಾಡಿರುವ ಏಜೆನ್ಸಿಯಲ್ಲಿ ವಿಚಾರಣೆ ನಡೆಸಲಾಗುವುದು ಮತ್ತು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಲಾಗುತ್ತದೆ. ಯಾವುದೇ ದೂರುಗಳಿಲ್ಲದಿದ್ದರೂ, ಲಾಟರಿ ಬಹುಮಾನವನ್ನು ಬೇರೆ ರಾಜ್ಯದವರು ಪಡೆದರೆ ಆ ಸಂದರ್ಭದಲ್ಲೂ ಸಮಿತಿ ಪರಿಶೀಲಿಸಿದ ನಂತರವೇ ಬಹುಮಾನವನ್ನು ಹಸ್ತಾಂತರಿಸಲಾಗುತ್ತದೆ. ಈ ಬಾರಿ ದೂರು ಬಂದ ಹಿನ್ನೆಲೆಯಲ್ಲಿ ತನಿಖೆ ಬಲಗೊಳ್ಳಲಿದೆ.
ಈ ನಡುವೆ ತಮಿಳುನಾಡು ಮೂಲದ ಪಾಂಡ್ಯರಾಜ್, ನಟರಾಜ್, ಕುಪ್ಪುಸಾಮಿ ಮತ್ತು ರಾಮಸ್ವಾಮಿ ತಿರುವಂತಪುರಂಗೆ ಆಗಮಿಸಿ ಪಾಲಕ್ಕಾಡ್ ಬಾವಾ ಕೇಂದ್ರದಿಂದ ಖರೀದಿಸಿದ್ದ ಓಣಂ ಬಂಪರ್ ಲಾಟರಿಯನ್ನು ಇಲಾಖೆಗೆ ಹಸ್ತಾಂತರಿಸಿದ್ದಾರೆ. ವಿಜೇತರು ತಮ್ಮ ಚಿತ್ರಗಳನ್ನು ಅಥವಾ ಇತರ ವಿವರಗಳನ್ನು ಹಂಚಿಕೊಳ್ಳದಂತೆ ಅಧಿಕಾರಿಗಳಿಗೆ ವಿನಂತಿಸಿದ್ದರು. ಇದರ ಬೆನ್ನಲ್ಲೇ ಲಾಟರಿ ಇಲಾಖೆಯು ಲಾಟರಿ ವಿಜೇತರ ಕೈಯಿಂದ ಲಾಟರಿ ಹಸ್ತಾಂತರಿಸುವ ಚಿತ್ರವನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಂಡಿದೆ.(ಏಜೆನ್ಸೀಸ್​)
25 ಕೋಟಿ ರೂ. ಓಣಂ ಬಂಪರ್​ ಲಾಟರಿ ಗೆದ್ದವರಿಗೆ ಬಿಗ್​ ಶಾಕ್​! ಹಣ ಸಿಗುವುದೇ ಅನುಮಾನ, ಕಾರಣ ಹೀಗಿದೆ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − 2 =
Remember me
