ವಾರಂಗಲ್​:ಸರ್ಕಲ್​ ಇನ್ಸ್​ಪೆಕ್ಟರ್​ ಹಾಗೂ ಮಹಿಳಾ ಸಬ್​ ಇನ್ಸ್​ಪೆಕ್ಟರ್​ ನಡುವಿನ ಲವ್ವಿಡವ್ವಿ ಪ್ರಕರಣ ತೆಲಂಗಾಣದ ವಾರಂಗಲ್​ನಲ್ಲಿ ಭಾರಿ ಚರ್ಚೆ ಹುಟ್ಟುಹಾಕಿದ್ದು, ಈ ವಿಷಯ ಗಮನಕ್ಕೆ ಬರುತ್ತಿದ್ದಂತೆ ಇಬ್ಬರನ್ನೂ ವಾರಂಗಲ್​ ಪೊಲೀಸ್​ ಕಮಿಷನರ್​ ರಂಗನಾಥ್​ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಗೆಸಿಗೊಂಡ ಠಾಣೆಯ ಸರ್ಕಲ್​ ಇನ್ಸ್​ಪೆಕ್ಟರ್​ ರಾಯಲ ವೆಂಕಟೇಶ್ವರಲು ಮತ್ತು ದಮೇರಾ ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಹರಿಪ್ರಿಯಾ ಅಮಾನತಾದ ಅಧಿಕಾರಿಗಳು. ಇಬ್ಬರ ಮಿತಿ ಮೀರಿದ ವರ್ತನೆಯಿಂದಾಗಿ ಅಮಾನತು ಶಿಕ್ಷೆಗೆ ಗುರಿಯಾಗಿದ್ದಾರೆ.
ಎಸ್​ಐ ಹರಿಪ್ರಿಯಾ ಇತ್ತೀಚೆಗಷ್ಟೇ ಮದುವೆಯಾಗಿದ್ದಾರೆ. ಆದರೂ ಮೊದಲಿನಿಂದಲೂ ಪರಿಚಯವಿದ್ದ ಸಿಐ ವೆಂಕಟೇಶ್ವರಲು ಜೊತೆ ತಮ್ಮ ರೊಮ್ಯಾನ್ಸ್​ ಮುಂದುವರಿಸಿದ್ದರು. ಪತ್ನಿ ಹರಿಪ್ರಿಯಾ ವರ್ತನೆಯ ಬಗ್ಗೆ ಗಂಡನಿಗೆ ಅನುಮಾನವಿತ್ತು. ಅಲ್ಲದೆ, ಪತ್ನಿಯ ವಾಟ್ಸ್​ಆ್ಯಪ್​ ಚಾಟ್​ ಅನ್ನು ಗಂಡ ಗಮನಿಸಿದ್ದ. ಸಿಐ ಮತ್ತು ಎಸ್​ಐ ನಡುವೆ ತುಂಬಾ ಸಲುಗೆಯ ಚಾಟಿಂಗ್​ ನಡೆಯುತ್ತಿತ್ತು. ಬಳಿಕ ವಾರಂಗಲ್​ ಕಮಿಷನರ್​ಗೆ ಹರಿಪ್ರಿಯಾ ಗಂಡ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸ್​ ಕಮಿಷನರ್​ಗೆ ಸಿಐ ಮತ್ತು ಎಸ್​ಐ ನಡುವೆ ಲವ್ವಿಡವ್ವಿ ಇರುವುದು ತಿಳಿದಿದೆ. ತಕ್ಷಣವೇ ಇಬ್ಬರನ್ನು ಅಮಾನತು ಮಾಡುವ ಮೂಲಕ ಕ್ರಮ ಜರುಗಿಸಿದ್ದಾರೆ.(ಏಜೆನ್ಸೀಸ್​)
ಎಲ್ಲ ವಿಡಿಯೋ, ಆಡಿಯೋಗಳನ್ನು ಕೊಡಲು ಸಿದ್ಧ! ಅಣ್ಣಾಮಲೈ ವಿರುದ್ಧ ನಟಿ ಗಾಯತ್ರಿ ಗಂಭೀರ ಆರೋಪ

ಬಿಜೆಪಿಗೆ ಅಭಿವೃದ್ಧಿ ಬೇಡ್ವಂತೆ, ಲವ್​ ಜಿಹಾದ್​ ವಿವಾದದ ವಿಚಾರ ಬೇಕಂತೆ! ಕಟೀಲ್​ಗೆ ಕಾಂಗ್ರೆಸ್​ ಹಿಗ್ಗಾಮುಗ್ಗಾ ತರಾಟೆ

ವಿವಾಹೇತರ ಸಂಬಂಧ ಹೊಂದಿದ್ದ ಉಪನ್ಯಾಸಕ ಹೆಂಡತಿ ಮಕ್ಕಳಿಗೆ ವಿಷ ಉಣಿಸಿ ತಾನೂ ಪ್ರಾಣ ಬಿಟ್ಟ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
