ಒಡಿಶಾ:ಪ್ರೀತಿಗೆ ವಯಸ್ಸಿಲ್ಲ ಎನ್ನುವ ಮಾತಿದೆ. ಆ ಮಾತನ್ನು ಈ ನವ ದಂಪತಿ ನಿಜ ಮಾಡಿ ತೋರಿಸಿದ್ದಾರೆ. ಆಕೆಯ ವಯಸ್ಸು 47.. ಆತ 76. ಇಳಿವಯಸ್ಸಿನ ವೃದ್ಧ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದು, ಕೊನೆಗೂ ಮದುವೆಯಾಗಿ ಒಂದಾಗಿರುವ ಘಟನೆ ಒಡಿಶಾದ ಗಂಜಾಂ ಜಿಲ್ಲೆಯ ಶಂಖಮುಂಡಿ ಮಂಡಲದ ಅಡ್ಡಾ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ಈ ರೆಸ್ಟೋರೆಂಟ್​​​ನಲ್ಲಿ ತಿನ್ನಲು ಇಂದು ಬುಕ್ ಮಾಡಿದರೆ 4 ವರ್ಷ ಕಾಯಬೇಕು!
ಗ್ರಾಮದ ರಾಮಚಂದ್ರ ಸಾಹು (76) ಎಂಬ ವೃದ್ಧನಿಗೆ ಹಲವು ವರ್ಷಗಳ ಹಿಂದೆ ವಿವಾಹವಾಗಿತ್ತು. ಇಬ್ಬರು ಹೆಣ್ಣು ಮಕ್ಕಳಿದ್ದು, ಅವರಿಗೆ ಮದುವೆಯಾಗಿದೆ. ಇತ್ತ ರಾಮಚಂದ್ರನ ಪತ್ನಿ ಅನಾರೋಗ್ಯದಿಂದ ಸಾವನ್ನಪ್ಪಿದ್ದಾಳೆ. ಸುಮಾರು 18 ವರ್ಷಗಳಿಂದ ಒಂಟಿ ಜೀವನ ಸಾಗಿಸುತ್ತಿದ್ದವನಿಗೆ ಕಳೆದ 8 ವರ್ಷಗಳ ಹಿಂದೆ 47 ವರ್ಷದ ಮಹಿಳೆ ಮೇಲೆ ಪ್ರೀತಿಯಾಗಿದೆ.
ಇದನ್ನೂ ಓದಿ:ಪತಿಯಿಂದ ವಿಚ್ಛೇದನ ಪಡೆದ ನಿರೂಪಕಿ ಚೈತ್ರಾ ವಾಸುದೇವನ್; ದಯವಿಟ್ಟು ಯಾರೂ ಜಡ್ಜ್​​ ಮಾಡಬೇಡಿ ಎಂದ್ರು…
ರಾಮಚಂದ್ರ ಸಾಹು ಮಾತನಾಡಿ, ” ಭಂಜ್ ನಗರ ಕುಳಾಗರ್​​ ಗ್ರಾಮದ ತ್ರಿನಾಥ್ ಸಾಹು ಅವರ ಪುತ್ರಿ ಸುರೇಖಾ (46) ಅವರನ್ನೊಮ್ಮೆ  ನೋಡಿದೆ. ಮರುಮದುವೆ ಆಗಲೇಬೇಕೆಂದು ನಿರ್ಧಾರ ಮಾಡಿದೇನು. ಇಬ್ಬರೂ ಫೋನ್‌ನಲ್ಲಿ ಮಾತನಾಡುತ್ತಾ ಕಾಲ ಕಳೆಯುತ್ತಾ ನಮ್ಮ ಸಂಬಂಧ ಇನ್ನಷ್ಟು ಗಟ್ಟಿ ಆಯಿತ್ತು. ನಾವು ಒಬ್ಬರನ್ನೊಬ್ಬರು ಔತಣದಲ್ಲಿ ಭೇಟಿಯಾಗಿ ಮದುವೆಯಾಗುವ ನಿರ್ಧಾರಕ್ಕೆ ಬಂದೆವು” ಎಂದು ಹೇಳಿದ್ದಾರೆ.
ಇದನ್ನೂ ಓದಿ:VIDEO| ನಾಲ್ಕು ಲಕ್ಷ ರೂ. ಬೆಲೆಯ ಮಗನ ಶೂ ನೋಡಿ ಕೈ ಮುಗಿದ ತಂದೆ!
ಭಂಜನಗರ ನ್ಯಾಯಾಲಯದಲ್ಲಿ ಜುಲೈ 19 ರಂದು ರಾಮಚಂದ್ರ ಮತ್ತು ಸುರೇಖಾ ವಿವಾಹವಾಗಿದ್ದಾರೆ. ನಂತರ ದೇವಸ್ಥಾನದಲ್ಲಿ ವಿಧಿವಿಧಾನಗಳ ಪ್ರಕಾರ ಮತ್ತೆ ವಿವಾಹವಾಗಿದ್ದಾರೆ.
ಪತಿಯಿಂದ ವಿಚ್ಛೇದನ ಪಡೆದ ನಿರೂಪಕಿ ಚೈತ್ರಾ ವಾಸುದೇವನ್; ದಯವಿಟ್ಟು ಯಾರೂ ಜಡ್ಜ್ ಮಾಡಬೇಡಿ ಎಂದ್ರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + eighteen =
Remember me
