ಇಂದೋರ್​:ಲವ್​ ಜಿಹಾದ್ ಕಾನೂನನ್ನು ಟೀಕಿಸುವವರು ಲವ್​ಜಿಹಾದ್​ನ ವ್ಯಾಖ್ಯಾನವನ್ನು ಅರ್ಥಮಾಡಿಕೊಳ್ಳಬೇಕಾಗಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಛತ್ತೀಸ್​ಗಢ ಸಿಎಂ ಭೂಪೇಶ್ ಬಘೇಲ್ ಮತ್ತು ಇತರೆ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಲವ್​ ಜಿಹಾದ್​ನ ವ್ಯಾಖ್ಯಾನವನ್ನು ನಾವು ಅರ್ಥಮಾಡಿಕೊಳ್ಳಬೇಕು. ಲವ್​ ಜಿಹಾದ್ ತಡೆಯುವ ಕಾನೂನು ರೂಪಿಸಿರುವುದರ ಉದ್ದೇಶ ಇಷ್ಟೆ – ಅಂತರ್​-ಧರ್ಮೀಯ ವಿವಾಹಗಳ ಹಿಂದೆ ಇರುವ ಪಿತೂರಿಯನ್ನು ತಡೆಯುವುದಾಗಿದೆ. ಪ್ರೀತಿಗೆ ಕಣ್ಣಿಲ್ಲ. ಅದು ಧರ್ಮವನ್ನೋ ಅಥವಾ ಜಾತಿಯನ್ನೋ ನೋಡಿ ಹುಟ್ಟುವಂಥದ್ದಲ್ಲ. ಆದರೆ, ಯಾರು ಒಬ್ಬರನ್ನು ಒಂದು ನಿಶ್ಚಿತ ಉದ್ದೇಶ ಅಥವಾ ಅವರ ಧರ್ಮಕ್ಕೆ ಮತಾಂತರಿಸುವ ಉದ್ದೇಶದಿಂದ ವಿವಾಹವಾಗುತ್ತಾರೋ ಅಂಥ ಸನ್ನಿವೇಶದಲ್ಲಿ ಈ ಕಾನೂನು ಸಂತ್ರಸ್ತರ ನೆರವಿಗೆ ಬರುತ್ತದೆ ಎಂದು ಕೈಲಾಶ್ ವಿಜಯವರ್ಗೀಯ ವಿವರಿಸಿದ್ದಾರೆ.
ಇದನ್ನೂ ಓದಿ:ಮುಗಿಯದ ಸಂಪುಟ ಸಂಕಟ: ಮುಗಿದ ಸಿಎಂ ಹೇಳಿದ ಸಮಯ
ಛತ್ತೀಸ್​ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್​ ಶನಿವಾರ ಬಿಜೆಪಿ ಆಡಳಿತ ರಾಜ್ಯಗಳಲ್ಲಿ ಜಾರಿಗೊಳಿಸುತ್ತಿರುವ ಲವ್​ ಜಿಹಾದ್ ಕಾನೂನನ್ನು ಟೀಕಿಸಿದ್ದಕ್ಕೆ ಪ್ರತಿಯಾಗಿ ವಿವರಣೆ ನೀಡಿದರು. ಲವ್​ ಜಿಹಾದ್ ವ್ಯಾಖ್ಯಾನದ ವ್ಯಾಪ್ತಿಗೆ ಬಿಜೆಪಿ ನಾಯಕರ ಕುಟುಂಬ ಸದಸ್ಯರು ಬರುತ್ತಾರೆಯೇ ಎಂದು ಬಘೇಲ್ ಟೀಕಿಸಿದ್ದರು. (ಏಜೆನ್ಸೀಸ್ )
ಕಾಂಗ್ರೆಸ್ ಸೋಲೋದಕ್ಕೆ 5 ಸ್ಟಾರ್ ಸಂಸ್ಕೃತಿ ಕಾರಣ- ಗುಲಾಂ ನಬಿ ಆಜಾದ್ ನೇರ ಮಾತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 3 =
Remember me
