ಮುಂಬೈ:ಪ್ರೀತಿಯಲ್ಲಿ ಮುಳುಗಿದವರಿಗೆ ಜಗತ್ತೇ ಕಾಣಲ್ಲ ಅಂತಾರೆ. ಇನ್ನು ಕರೊನಾ ಖಯಾಲಿ ಬರುತ್ತಾ ? ಅದಕ್ಕಾಗೇ ಯುವ ಜೋಡಿಗಳಿಗೆ ವಾಲೆಂಟೈನ್ಸ್ ಡೇ ಅಬ್ಬರದಲ್ಲಿ ಕರೊನಾ ಮುನ್ನೆಚ್ಚರಿಕೆಗಳನ್ನು ಮರೆಯದಿರಿ ಎಂದು ಮುಂಬೈ ಪೊಲೀಸರು ಬಿನ್ನಹ ಮಾಡಿಕೊಂಡಿದ್ದಾರೆ. ಟ್ವಿಟರ್​ನಲ್ಲಿ ವಿಭಿನ್ನ ರೀತಿಯಾಗಿ ಮೂಡಿಬಂದಿರುವ ಪೊಲೀಸರ ಅಹವಾಲು ನೆಟ್ಟಿಗರ ಗಮನ ಸೆಳೆದಿದೆ.
‘ಈ ವಾಲೆಂಟೈನ್ಸ್ ಡೇ ನಮಗೆ ಬೇಕಿರುವುದು ಎಂದರೆ ಪ್ರೀತಿ, ಒಂದು ಮಾಸ್ಕ್ ಮತ್ತು 6 ಅಡಿ ಅಂತರ’ ಎಂದು ಬರೆದು ಮುಂಬೈ ಪೊಲೀಸರು ಟ್ವೀಟ್ ಮಾಡಿದ್ದಾರೆ. ಅದರೊಂದಿಗೆ ಆಕರ್ಷಕ ಜಿಫ್ ಒಂದನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಮಾಸ್ಕ್ ಧರಿಸಿರುವ ಹುಡುಗ ಮತ್ತು ಹುಡುಗಿಯ ಮಧ್ಯ ಒಂದು ಲವ್ ಶೇಪ್ ಇರುತ್ತದೆ. ಕ್ರಮೇಣ ಹೆಚ್ಚು ಲವ್​ ಶೇಪ್​ಗಳು ಬಂದು ಅಂತರ ಮೂಡಿಸುತ್ತವೆ. ಇದರೊಂದಿಗೆ “ಅಂತರವು ಪ್ರೀತಿ ಹೆಚ್ಚು ಬಲವಾಗಿ ಬೆಳೆಯುವಂತೆ ಮಾಡುತ್ತದೆ” ಎಂದು ಸೂಚಿಸುವ ಅಡಿಬರಹ ಗೋಚರಿಸುತ್ತದೆ!
All we need is love, a mask and six feet of distance this#ValentinesDay!pic.twitter.com/Q7OVoNBaak— मुंबई पोलीस – Mumbai Police (@MumbaiPolice)February 14, 2021
All we need is love, a mask and six feet of distance this#ValentinesDay!pic.twitter.com/Q7OVoNBaak
The three magical words everyone wants to hear this#ValentinesDay– 'Safety Comes First.'pic.twitter.com/XKEajB3kB8— पोलीस आयुक्त, बृहन्मुंबई – CP Mumbai Police (@CPMumbaiPolice)February 14, 2021
The three magical words everyone wants to hear this#ValentinesDay– 'Safety Comes First.'pic.twitter.com/XKEajB3kB8

ಮುಂಬೈ ನಗರ ಪೊಲೀಸ್ ಮುಖ್ಯಸ್ಥ ಪರಮ್ ಬೀರ್ ಸಿಂಗ್ ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್​ನಲ್ಲಿ ಮತ್ತೊಂದು ಆಕರ್ಷಕ ಪೋಸ್ಟ್ ಇದೆ. ಜೋಡಿಗಳಿಗೆ “ಸುರಕ್ಷತೆಯನ್ನು ಮೊದಲು ಕಾಪಾಡಿಕೊಳ್ಳಿ” ಎಂದು ಈ ಸಂದೇಶ ಹೇಳುತ್ತದೆ. ‘ಐ ಲವ್ ಯೂ’ ಎಂಬ ಮೂರು ಪದಗಳ ಬದಲಿಗೆ ‘ಸೇಫ್ಟಿ ಕಮ್ಸ್ ಫಸ್ಟ್’​ ಎಂಬ ಮೂರು ಪದಗಳನ್ನು ಪೇರಿಸಿದ್ದಾರೆ! ಚಿತ್ರದಲ್ಲಿ ಕುರ್ಚಿಗಳ ಮೇಲೆ ಕುಳಿತಿರುವ ಜೋಡಿಯ ಮಧ್ಯೆ ಒಂದು ಮಾಸ್ಕ್​ ಇದೆ. ಜೊತೆಗೆ ಢಾಯಿ ಅಕ್ಷರ್ ಪ್ರೇಮ್​ ಕೆ, ದೋ ಗಜ್ ಸೇಫ್ಟಿ ಕೇ ಅಂತ ಮುದ್ರಿಸಲಾಗಿದೆ.(ಏಜೆನ್ಸೀಸ್)
ಪ್ರೇಮಿಗಳ ದಿನದಂದು ಸತಿಪತಿಗಳಾದ ಡಾರ್ಲಿಂಗ್ ಕೃಷ್ಣ, ಮಿಲನಾ ನಾಗರಾಜ್ ತಾರಾ ಜೋಡಿ

‘ವಾಲೆಂಟೈನ್ಸ್ ಡೇ’ಗೆ ‘ಮಾತಾಪಿತ ಪೂಜೆ’ಯ ತಿರುಗೇಟು !


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + seven =
Remember me
