ಬಾಲಸೋರ್​:ಒಡಿಶಾದ ಡೆಬಾಸ್ಮಿತಾ ಮತ್ತು ಸುಭ್ರಾನ್ಶು ಲವ್​ ಸ್ಟೋರಿ ಯಾವ ಸಿನಿಮಾ ಲವ್​ ಸ್ಟೋರಿಗೂ ಕಡಿಮೆ ಇಲ್ಲ. ಎಂಟು ವರ್ಷಗಳ ಹಿಂದೆ ಇಬ್ಬರ ನಡುವೆ ಪ್ರೀತಿ ಶುರುವಾಯಿತು. ಎಲ್ಲವು ಚೆನ್ನಾಗಿ ನಡೆದುಕೊಂಡು ಹೋಗುತ್ತಿದ್ದೆ ಎನ್ನುವಷ್ಟರಲ್ಲಿ ಡೆಬಾಸ್ಮಿತಾಳ ಬಾಳಲ್ಲಿ ಅನಿರೀಕ್ಷಿತ ಘಟನೆ ಒಂದು ಜರುಗಿತು. ಪಾರ್ಶ್ವವಾಯುವಿನಿಂದಾಗಿ ಡೆಬಾಸ್ಮಿತ ನೆಡೆದಾಡದಂತಾಯಿತು. ಇಂತಹ ಸಂದರ್ಭದಲ್ಲಿ ಯಾವುದೇ ಹುಡುಗನಾದರೂ ಮದುವೆ ಆಗಲು ಹಿಂಜರಿಯುತ್ತಾರೆ. ಆದರೆ, ಸುಭ್ರಾನ್ಶು ಆ ರೀತಿ ಮಾಡಲಿಲ್ಲ. ಬದಲಾಗಿ ಮದುವೆಯಾಗುವ ಮೂಲಕ ಪ್ರೀತಿ ಎಲ್ಲವನ್ನು ಮೀರಿದ್ದು ಎಂಬುದನ್ನು ನಿರೂಪಿಸಿದ್ದಾರೆ.
ಅಂದಹಾಗೆ ಡೆಬಾಸ್ಮಿತಾ ಮತ್ತು ಸುಭ್ರಾನ್ಶು ಒಡಿಶಾದ ಬಾಲಾಸೋರ್​ ಜಿಲ್ಲೆಯ ಖಂದ್ರಪದಾ ಪ್ರದೇಶದವರು. ಮೊದಲ ನೋಟದಲ್ಲೇ ಇಬ್ಬರ ನಡುವೆ ಶುರುವಾದ ಪ್ರೀತಿ 8 ವರ್ಷಗಳನ್ನು ಪೂರೈಸಿದೆ. ಡೇಟಿಂಗ್​, ಮೀಟಿಂಗ್​ ಮೂಲಕ ಇಬ್ಬರು ಪ್ರಣಯ ಪಕ್ಷಿಗಳಂತೆ ಸಂತೋಷದ ಜೀವನ ನಡೆಸುತ್ತಿದ್ದರು. ಎರಡು ಕುಟುಂಬವನ್ನು ಒಪ್ಪಿಸಿ 2019ರಲ್ಲಿ ಇಬ್ಬರು ಮದುವೆಯನ್ನು ಖಚಿತಪಡಿಸಿಕೊಂಡಿದ್ದರು. ಆದರೆ, ಇದರ ನಡುವೆ ಯಾರು ನಿರೀಕ್ಷಿಸದ ಘಟನೆ ಒಂದು ಘಟಿಸೇ ಹೋಯಿತು.
2019ರಲ್ಲೇ ಡೆಬಾಸ್ಮಿತ್​ಗೆ ಪಾರ್ಶ್ವವಾಯು ತಗುಲಿತು. ಅಂದಿನಿಂದ ಡೆಬಾಸ್ಮಿತ್​ ಕೈಯಲ್ಲಿ ಸ್ವತಂತ್ರವಾಗಿ ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ. ಅಂದಿನಿಂದ ಹಾಸಿಗೆಯನ್ನೇ ಆಕೆ ಅವಲಂಬಿಸಿದ್ದಾಳೆ. ಎಲ್ಲ ಕೆಲಸಗಳಿಗೂ ಬೇರೆಯವರನ್ನೇ ಅವಲಂಬಿಸಿದ್ದಾಳೆ. ಇದೀಗ ಸುಭ್ರಾನ್ಶು ಆಕೆಯ ಸಂಪೂರ್ಣ ಜವಬ್ದಾರಿಯನ್ನು ಹೊತ್ತುಕೊಂಡಿದ್ದಾನೆ. ಪ್ರತಿ ಹಂತದಲ್ಲೂ ಡೆಬಾಸ್ಮಿತ್​ಗೆ ಆಕೆಯ ನೆರಳಿನಂತೆ ಬೆನ್ನೆಲುವಾಗಿ ನಿಂತು ಆಕೆ ಸಾಮಾನ್ಯರಂತೆ ಜೀವನ ನಡೆಸಲು ಸುಭ್ರಾನ್ಶು ಸಹಕಾರಿಯಾಗಿದ್ದಾನೆ.
ಇದೀಗ 8 ವರ್ಷದ ಪ್ರೇಯಸಿಯನ್ನು ಮದುವೆ ಆಗುವ ಮೂಲಕ ಪ್ರೀತಿಗಿಂತ ಶ್ರೇಷ್ಟವಾದುದ್ದು ಯಾವುದು ಇಲ್ಲ ಮತ್ತು ನಿಜವಾದ ಪ್ರೀತಿಗೆ ಎಲ್ಲವನ್ನು ಸಹಿಸಿಕೊಳ್ಳುವ ಶಕ್ತಿ ಇದೆ ಎಂಬುದನ್ನು ನಿರೂಪಿಸಿದ್ದಾನೆ.(ಏಜೆನ್ಸೀಸ್​)
19 ವರ್ಷದೊಳಗಿನ ಬಿಸಿಸಿಐ ಮಹಿಳಾ ತಂಡದಲ್ಲಿ ಸ್ಥಾನ ಪಡೆದ ಬೀದರ್​ನ ಆದಿತಿಗೆ ಗಣ್ಯರ​ ಅಭಿನಂದನೆ

ಉತ್ತಮ ಜೀವನಶೈಲಿ, ಆಹಾರ ಪದ್ಧತಿಯಿಂದ ಮೂಲವ್ಯಾಧಿ ದೂರ; ಸಕಾಲದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಕ್ಯಾನ್ಸರ್ ಅಪಾಯ

ಕೋಮಲ್​ ಯಾಕೆ ಇಷ್ಟು ದಿನ ಚಿತ್ರರಂಗದಿಂದ ದೂರ ಇದ್ದರು? ಜಗ್ಗೇಶ್​ ಹೇಳುತ್ತಾರೆ ಕೇಳಿ …

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + one =
Remember me
