ಲಖನೌ:ಯುವಜೋಡಿಯೊಂದು ಜನನಿಬಿಡ ರಸ್ತೆಯಲ್ಲೇ ಬೈಕ್​ ಸವಾರಿ ಮಾಡುತ್ತಾ ರೊಮ್ಯಾನ್ಸ್​ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ.
ಈ ಘಟನೆ ಉತ್ತರ ಪ್ರದೇಶದ ರಾಜಧಾನಿ ಲಖನೌದ ಹಜರತ್​ಗಂಜ್​ ಏರಿಯಾದಲ್ಲಿ ನಡೆದಿದೆ. ವಿಡಿಯೋವನ್ನು ಟ್ವಿಟರ್​ ಬಳಕೆದಾರರೊಬ್ಬರು ಶೇರ್​ ಮಾಡಿಕೊಂಡಿದ್ದಾರೆ.
ವಿಡಿಯೋದಲ್ಲಿ ಏನಿದೆ?ಪ್ರೇಮಗಳಿಬ್ಬರು ಕಪ್ಪು ಬಣ್ಣದ ಬಟ್ಟೆ ಧರಿಸಿದ್ದಾರೆ. ದ್ವಿಚಕ್ರ ವಾಹನದ ಹಿಂಬದಿಯ ಸೀಟಿನಲ್ಲಿ ಕೂರಬೇಕಾಗಿದ್ದ ಹುಡುಗಿ, ಸ್ಕೂಟರ್​ ಓಡಿಸುತ್ತಿರುವ ಪ್ರಿಯಕರ ಮುಂದೆ ಎದುರು-ಬದುರಾಗಿ ಕುಳಿತು ಆತನನ್ನು ತಬ್ಬಿಕೊಂಡಿದ್ದಾಳೆ. ತನ್ನ ಎರಡು ಕಾಲುಗಳಿಂದ ಪ್ರಿಯಕರನ ನಡುವನ್ನು ಬಳಸಿ, ಹಿಂಬದಿ ಸೀಟಿನ ಮೇಲೆ ಕಾಲುಗಳನ್ನು ಇಟ್ಟಿದ್ದಾಳೆ. ಕೈಯಿಂದ ಪ್ರಿಯಕರನನ್ನು ಗಟ್ಟಿಯಾಗಿ ತಬ್ಬಿಕೊಂಡಿರುವ ಹುಡುಗಿ ಆತನ ಕೆನ್ನೆಗೆ ಚುಂಬಿಸುತ್ತಿರುವ ದೃಶ್ಯವಿದೆ. ಅಕ್ಕಪಕ್ಕದಲ್ಲಿ ಸಾಕಷ್ಟು ವಾಹನಗಳು ಸಂಚರಿಸುತ್ತಿದ್ದರೂ ಇಬ್ಬರು ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ರೊಮ್ಯಾನ್ಸ್​ನಲ್ಲಿ ತೊಡಗಿರುವುದು ವಿಡಿಯೋದಲ್ಲಿದೆ.
नबाबों का शहर Lucknow उत्तर प्रदेशpic.twitter.com/dZ92Sn1R0E
— sakshi (@ShadowSakshi)January 17, 2023

ಪ್ರೇಮಿಗಳಿಬ್ಬರನ್ನು ನೋಡಿ ಸಾರ್ವಜನಿಕರೇ ಮುಜುಗರ ಪಟ್ಟುಕೊಂಡಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಇಬ್ಬರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಒತ್ತಾಯ ಮಾಡಿದ್ದಾರೆ.
ಇದೀಗ ಆರೋಪಿ ಬೈಕ್​ ಸವಾರನನ್ನು ಬಂಧಿಸಲಾಗಿದೆ. ಆರೋಪಿಯನ್ನು ವಿಕ್ಕಿ ಎಂದು ಗುರುತಿಸಲಾಗಿದೆ. ಹುಡುಗಿ ಅಪ್ರಾಪ್ತೆಯಾಗಿರುವುದರಿಂದ ಆಕೆಯನ್ನು ಬಂಧಿಸದೇ, ಬುದ್ಧಿಮಾತು ಹೇಳಿ ಕಳುಹಿಸಲಾಗಿದೆ. ಘಟನೆಯ ಬಗ್ಗೆ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ಮಾತನಾಡಿದ್ದು, ಯುವಜೋಡಿಯ ನಡವಳಿಕೆಯು ಸಭ್ಯತೆಯನ್ನು ಮೀರಿದೆ. ಅಲ್ಲದೆ, ಮೋಟಾರು ವಾಹನ ಕಾಯ್ದೆಯಡಿಯಲ್ಲಿ ಅಪರಾಧವಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
Lucknow: Video of a boy and girl in objectionable state riding a scooter went viral yesterday
Police has now arrested the youth Vicky while the girl was let go being a minorpic.twitter.com/t7Msy3oz3d
— Pratap (@valtairblues)January 18, 2023

“ವಾರೆ ನೋಟ” ವೈರಲ್ ವಿಡಿಯೋ ಬಗ್ಗೆ ನಗುತ್ತಲೇ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ…

ವಿಜಯ್​ ಜತೆ ಮಾಡಲು ಬಯಸುತ್ತೇನೆ! ಬೋಲ್ಡ್​ ಹೇಳಿಕೆ ನೀಡಿದ ತಮಿಳು ನಟಿ ರೇಷ್ಮಾ ಪಸುಪುಲೇತಿ

ಹಿಂದುಗಳಿಗೆ ಮಾತ್ರ ಪ್ರವೇಶ! ದೇವರ ದರ್ಶನ ಸಿಗದಿದ್ದಕ್ಕೆ ಎಂಟ್ರಿ ಬುಕ್​ನಲ್ಲಿ ಖಡಕ್​ ಪ್ರತಿಕ್ರಿಯೆ ಕೊಟ್ಟ ಅಮಲಾ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − six =
Remember me
