ಕೊಚ್ಚಿ:ಮೇಕಪ್​ ಆರ್ಟಿಸ್ಟ್​ ಒಬ್ಬಳು ಪ್ರಿಯಕರನಿಂದಲೇ ಬರ್ಬರ ಹತ್ಯೆಯಾಗಿರುವ ಘಟನೆ ಕೇರಳದ ಕಾಸರಗೋಡಿನ ಕನ್ಹಂಗಾಡ್​ನಲ್ಲಿರುವ ಲಾಡ್ಜ್​ ಒಂದರಲ್ಲಿ ಮಂಗಳವಾರ ನಡೆದಿದೆ.
ಕೊಲೆಯಾದ ಮಹಿಳೆಯನ್ನು ಪಿ.ಬಿ. ದೇವಿಕಾ (34) ಎಂದು ಗುರುತಿಸಲಾಗಿದೆ. ಈಕೆ ಉದ್ಮಾ ಪಂಚಾಯಿತಿಯ ಮುಕ್ಕುನೋಥ್​ ನಿವಾಸಿ. ಆಕೆಯ ಮಂಗಳವಾರ ಮಧ್ಯಾಹ್ನ 1.30ಕ್ಕೆ ಹತ್ಯೆ ಮಾಡಿದ ಬಳಿಕ ಪ್ರಿಯಕರ ಸತೀಶ್​ (36) ಲಾಡ್ಜ್​ ರೂಮ್​ ಅನ್ನು ಲಾಕ್​ ಮಾಡಿ ಸುಮಾರು 500 ಮೀಟರ್​ ದೂರದಲ್ಲಿರುವ ಪೊಲೀಸ್​ ಠಾಣೆಗೆ ಕಾಲ್ನಡಿಗೆಯಲ್ಲಿ ತೆರಳಿ ಪೊಲೀಸರ ಮುಂದೆ ಶರಣಾದನು ಎಂದು ಕನ್ಹಂಗಾಡ್​ ಡಿವೈಎಸ್​ಪಿ ಬಾಲಕೃಷ್ಣನ್​ ನಾಯರ್​ ತಿಳಿಸಿದ್ದಾರೆ.
ಇದನ್ನೂ ಓದಿ:ಕರೊನಾ ಲಾಕ್‌ಡೌನ್‌ನಲ್ಲಿ ಮಗಳ ಸಮಾನ ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ

ಸಂಜೆ 5 ಗಂಟೆ ಸುಮಾರಿಗೆ ಸತೀಶ್​ ಪೊಲೀಸ್​ ಠಾಣೆಗೆ ಬಂದು ಶರಣಾಗಿದ್ದಾನೆ. ಬಳಿಕ ಪೊಲೀಸರು ಮಾಹಿತಿ ತಿಳಿದು ಸ್ಥಳಕ್ಕೆ ತೆರಳಿ ಲಾಡ್ಜ್​ ರೂಮ್​ ಅನ್ನು ತೆರೆದಾಗ ದೇವಿಕಾ ಕತ್ತು ಸೀಳಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದಳು ಎಂದು ಬಾಲಕೃಷ್ಣನ್​ ನಾಯರ್​ ಮಾಹಿತಿ ನೀಡಿದರು.
ಆರೋಪಿ ಸತೀಶ್ ಮುಲ್ಲಿಯಾರ್​ ಗ್ರಾಮ ಪಂಚಾಯಿತಿಯ​ ಬೊವಿಕನಮ್​ ಮೂಲದ ನಿವಾಸಿ. ಈತ ಕನ್ಹಂಗಾಡ್​ ಪಟ್ಟಣದಲ್ಲಿ ಖಾಸಗಿ ಸೆಕ್ಯುರಿಟಿ ಏಜೆನ್ಸಿಯನ್ನು ನಡೆಸುತ್ತಿದ್ದಾರೆ. ಈಗಾಗಲೇ ಈತನಿಗೆ ಮದುವೆಯಾಗಿದ್ದು, ಒಂದು ಮಗು ಕೂಡ ಇದೆ. ದೇವಿಕಾಗೂ ಮದುವೆ ಆಗಿತ್ತು. ಆಕೆಗೆ ಇಬ್ಬರು ಮಕ್ಕಳಿದ್ದಾರೆ.
ಪತ್ನಿಗೆ ಡಿವೋರ್ಸ್​ ನೀಡಿ ತನ್ನೊಂದಿಗೆ ಇರುವಂತೆ ದೇವಿಕಾ ಒತ್ತಾಯ ಮಾಡುತ್ತಿದ್ದಳು. ಹೀಗಾಗಿ ಆಕೆಯನ್ನು ಕೊಲೆ ಮಾಡಿದೆ ಎಂದು ಸತೀಶ್​ ಪೊಲೀಸರ ಮುಂದೆ ಹೇಳಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಸದ್ಯ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಮತ್ತೆ ಮದುವೆಯಲ್ಲ ಲಿವಿಂಗ್ ಟುಗೆದರ್: ಕೊನೆಗೂ ಮೌನ ಮುರಿದ ನರೇಶ್-ಪವಿತ್ರಾ ಲೋಕೇಶ್

ಕಳೆದ ಎರಡು ತಿಂಗಳಿನಿಂದ ಸತೀಶ್​ ಲಾಡ್ಜ್​ನಲ್ಲಿ ವಾಸವಿದ್ದನು. ಕನ್ಹಂಗಾಡ್​ನಿಂದ 20 ಕಿಮೀ ದೂರದಲ್ಲಿರುವ ತನ್ನ ಊರಿನಿಂದ ದೇವಿಕಾ ಲಾಡ್ಜ್​ಗೆ ಬಂದಿದ್ದಳು. CITU ಗೆ ಸಂಯೋಜಿತವಾಗಿರುವ ಕೇರಳ ಸ್ಟೇಟ್ ಬಾರ್ಬರ್-ಬ್ಯೂಟಿಷಿಯನ್ ವರ್ಕರ್ಸ್ ಯೂನಿಯನ್‌ನ ಜಿಲ್ಲಾ ಸಮಾವೇಶದಲ್ಲಿ ಭಾಗವಹಿಸಲು ಕನ್ಹಂಗಾಡ್​ಗೆ ಬಂದಿದ್ದಳು. ಸಮಾವೇಶ ಬಳಿಕ ಸತೀಶ್​ನನ್ನು ಭೇಟಿ ಮಾಡಿ, ಆತನೊಂದಿಗೆ ಲಾಡ್ಜ್​ಗೆ ತೆರಳಿದ್ದಳು. ಈ ವೇಳೆ ಆಕೆಯನ್ನು ಕೊಂದಿದ್ದಾನೆ ಎಂದು ಪೊಲೀಸ್​ ಮೂಲಗಳು ತಿಳಿಸಿವೆ.(ಏಜೆನ್ಸೀಸ್​)
ಬಸ್ಸಿನಲ್ಲಿ ಮಹಿಳೆಯರಿಬ್ಬರ ಮಧ್ಯೆ ಕುಳಿತು ಕಾಮಚೇಷ್ಟೆ: ವಿಡಿಯೋ ಹರಿಬಿಟ್ಟು ಘಟನೆ ವಿವರಿಸಿದ ನಟಿ

ಸಿದ್ದರಾಮಯ್ಯ ಪ್ರಮಾಣ ವಚನ ಸಮಾರಂಭದಂದು ಸಿಇಟಿ ವಿದ್ಯಾರ್ಥಿಗಳಿಗೆ ಟ್ರಾಫಿಕ್ ಕಿರಿಕಿರಿ!

ಪುತ್ತೂರಿನಲ್ಲಿ ಪೊಲೀಸ್​​ ದೌರ್ಜನ್ಯ ಪ್ರಕರಣ | ಇದು ನೂರಕ್ಕೆ ನೂರು ಕಾಂಗ್ರೆಸ್​ನ ಕಿತಾಪತಿ; ಕಲ್ಲಡ್ಕ ಪ್ರಭಾಕರ ಭಟ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 2 =
Remember me
