ಕೋಲ್ಹಾಪುರ :ಮಹಾರಾಷ್ಟ್ರದಲ್ಲಿ ಪ್ರೇಮಿಯೊಬ್ಬರು ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು ವಿಭಿನ್ನವಾದ ‘ಮಾರ್ಗ’ ಅನುಸರಿಸಿದ್ದಾರೆ. ಅದೆಂದರೆ, ರಾತ್ರಿಯೊಂದರಲ್ಲಿ ಸುಮಾರು ಎರಡೂವರೆ ಕಿಲೋಮೀಟರ್ ಉದ್ದ ರಸ್ತೆಯ ಮೇಲೆ ಐ ಲವ್​ ಯು, ಐ ಮಿಸ್ ಯು ಎಂದು ಬರೆಯುತ್ತಾ ಹೋಗಿರುವುದು! ಈ ಬಗೆಗಿನ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಇತ್ತೀಚೆಗೆ ಕೋಲ್ಹಾಪುರ ಜಿಲ್ಲೆಯ ಧರಣಗುಟ್ಟಿ ಹಳ್ಳಿಯ ನಿವಾಸಿಗಳು ಬೆಳಗ್ಗೆ ಎದ್ದಾಗ ಈ ಅಜ್ಞಾತ ಪ್ರೇಮಿಯ ಬಹಿರಂಗ ಪ್ರೇಮ ನಿವೇದನೆ ರಸ್ತೆ ಮೇಲೆ ಕಾಣಿಸಿದೆ. ರಾಜ್ಯದ ಜೈಸಿಂಗ್​ಪುರದಿಂದ ಧರಣಗುಟ್ಟಿಗೆ ಹೋಗುವ ಟಾರ್ ರಸ್ತೆಯ ಮೇಲೆ ಬಿಳಿಯ ಬಣ್ಣದ ಆಯಿಲ್ ಪೇಂಟ್ ಬಳಸಿ, ‘ಐ ಲವ್ ಯು’, ‘ಐ ಮಿಸ್ ಯು’ ಎಂದು ಬರೆಯಲಾಗಿದೆ. ರಸ್ತೆಯಲ್ಲಿ ಸ್ವಲ್ಪ ಸ್ವಲ್ಪ ಅಂತರ ಬಿಟ್ಟು ಆಂಗ್ಲಭಾಷೆಯಲ್ಲಿ ಸಂದೇಶ ಬರೆದಿರುವ ಈ ಪ್ರೇಮಿ, ಒಂದೆಡೆಯಂತೂ “ಐ ಮಿಸ್ ಯು. ಜಿಂದಗಿ ಕೆ ಸಾಥ್, ಜಿಂದಗಿ ಕೆ ಬಾದ್ ಭೀ” ಎಂದು ಹಿಂದಿಯನ್ನೂ ಬಳಸಿ ಕಾವ್ಯಮಯವಾಗಿ ಬರೆದಿದ್ದಾರೆ.
ಇದನ್ನೂ ಓದಿ:“ರಾಜ್ಯದಲ್ಲಿ ಲವ್​ ಜಿಹಾದ್, ಲ್ಯಾಂಡ್ ಜಿಹಾದ್ ವಿರುದ್ಧ ಕಾನೂನು ತರುತ್ತೇವೆ”
ಈವರೆಗೂ ಗುರುತು ಸಿಕ್ಕಿಲ್ಲದ ಈ ಪ್ರೇಮಿಯ ಭಾವೋದ್ವೇಗದ ಕೃತ್ಯದಿಂದ ಈಗ ಧರಣಗುಟ್ಟಿ ಗ್ರಾಮ ಪಂಚಾಯಿತಿ ನೌಕರರಿಗೆ ಹೊಸತೊಂದು ಕೆಲಸ ಬಿದ್ದಿದೆ. ಅದೆಂದರೆ, ತಾವೂ ಬಿಳಿಯ ಪೇಂಟ್ ಹಿಡಿದು ಈ ಪ್ರೇಮ ಸಂದೇಶಗಳನ್ನು ಮರೆ ಮಾಡುವುದು!(ಏಜೆನ್ಸೀಸ್)
‘ನನ್ನ ವಾಲೆಂಟೈನ್ – ಪ್ರತಿದಿನ, ಎಂದೆಂದಿಗೂ’ ಎಂದು ಸನ್​ಸೆಟ್​ ಫೋಟೋ ಹಾಕಿದ ಅನುಷ್ಕಾ

ಉಚಿತ ಅಯೋಧ್ಯಾ ಪ್ರವಾಸದ ಆಶ್ವಾಸನೆ ಕೊಟ್ಟ ಅಭ್ಯರ್ಥಿಗೆ ನೋಟೀಸ್ !

ಮಾಸ್ಕ್ ಹಾಕಿಲ್ಲ ಎಂದು ದಂಡ ಕೇಳಿದ ಮಾರ್ಷಲ್​ಗೆ, ಹಿಗ್ಗಾ ಮುಗ್ಗಾ ಹೊಡೆದ ಮಹಿಳೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
