ಬರೇಲಿ:ತನ್ನ ಅಪ್ರಾಪ್ತ ವಯಸ್ಸಿನ ಗರ್ಲ್​ಫ್ರೆಂಡ್​ ಜತೆ ಚಕ್ಕಂದ ಆಡುತ್ತಿದ್ದದ್ದನ್ನು ಕಂಡ ಎಂಬ ಕಾರಣಕ್ಕಾಗಿ ಆಕೆಯ ಬಾಯ್​ಫ್ರೆಂಡ್​, 6 ವರ್ಷದ ಬಾಲಕನನ್ನು ಕತ್ತುಹಿಸುಕಿ ಕೊಂದಿದ್ದಾನೆ. ಅಪ್ರಾಪ್ರೆಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಕ್ಕಾಗಿ ಆ 21 ವರ್ಷದ ಯುವಕನ ವಿರುದ್ಧ ಈಗ ಅತ್ಯಾಚಾರದ ಪ್ರಕರಣವೂ ದಾಖಲಾಗಿದೆ.
ಉತ್ತರ ಪ್ರದೇಶದ ಬರೇಲಿ ಜಿಲ್ಲೆಯ ಈದ್​ಜಾಗೀರ್​ ಎಂಬ ಗ್ರಾಮದಲ್ಲಿ ದಿನಗೂಲಿಗಳಾಗಿರುವ ದಂಪತಿಯ ಪುತ್ರ ಮೃತಪಟ್ಟವನು. ಪಾಲಕರು ಕೆಲಸಕ್ಕೆ ಹೋದ ಸಮಯದಲ್ಲಿ ಈ ದಂಪತಿಯ ಪುತ್ರಿ ಸಹೋದರನೊಂದಿಗೆ ಇರುತ್ತಿದ್ದಳು. ಕೆಲದಿನಗಳ ಹಿಂದೆ ಈಕೆ 21 ವರ್ಷದ ಯುವಕನನ್ನು ಲವ್​ ಮಾಡಲಾರಂಭಿಸಿದ್ದಳು. ಈಕೆಯ ಪಾಲಕರು ಇಲ್ಲದ ಸಮಯದಲ್ಲಿ ಆತ ಇವರ ಮನೆಗೆ ಬಂದು ಹೋಗುತ್ತಿದ್ದ.
ಅದೊಂದು ದಿನ ತಮ್ಮನನ್ನು ಆಟವಾಡಲು ಹೊರಗೆ ಕಳುಹಿಸಿದ ಬಾಲಕಿ ತನ್ನ ಪ್ರೇಮಿಯನ್ನು ಕರೆಯಿಸಿಕೊಂಡು ಚಕ್ಕಂದ ಆಡತೊಡಗಿದ್ದಳು. ಅದೇ ಸಮಯಕ್ಕೆ ಬಾಲಕ ನೀರು ಕುಡಿಯಲೆಂದು ಮನೆಗೆ ಬಂದಿದ್ದ. ಆಗ ತನ್ನ ಅಕ್ಕ ಮತ್ತು ಯುವಕ ಚಕ್ಕಂದ ಆಡುತ್ತಿರುವುದನ್ನು ಕಂಡಿದ್ದ.
ಇದನ್ನೂ ಓದಿ:ವಿಮಾನಗಳೆರಡು ಮುಖಾಮುಖಿ ಡಿಕ್ಕಿಯಾಗಿ ಶಾಸಕ ಸೇರಿದಂತೆ ಏಳು ಮಂದಿ ದುರ್ಮರಣ
ಈ ವಿಷಯವನ್ನು ಆತ ಪಾಲಕರಿಗೆ ತಿಳಿಸಿ ಬಿಡುತ್ತಾನೆ ಎಂದು ಬಾಲಕಿ ಭೀತಳಾಗಿದ್ದಳು. ಇದೇ ಭೀತಿಯಲ್ಲಿದ್ದ ಯುವಕ ಬಾಲಕನನ್ನು ಹಿಡಿದು ಆತನ ಕತ್ತುಹಿಸುಕಿ ಸಾಯಿಸಿ ಹೊರಟು ಹೋಗಿದ್ದ. ಸಂಜೆ ಮನೆಗೆ ಮರಳಿದ ಪಾಲಕರಿಗೆ ಬಾಲಕ ಮೇಲಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿರುವುದಾಗಿ ಬಾಲಕಿ ತಿಳಿಸಿದ್ದಳು. ತಕ್ಷಣವೇ ಬಾಲಕನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆತ ಸತ್ತಿರುವುದಾಗಿ ವೈದ್ಯರು ತಿಳಿಸಿದ್ದರು.
ಬಾಲಕಿಯ ಮಾತು ನಂಬಿದ ಪಾಲಕರು ಮತ್ತು ನೆರೆಹೊರೆಯವರು ಅಂತ್ಯಸಂಸ್ಕಾರ ನೆರವೇರಿಸಿ ಸುಮ್ಮನಾಗಿದ್ದರು. ಆದರೆ ಗುಟ್ಟನ್ನು ಮನಸ್ಸಿನಲ್ಲೇ ಇಟ್ಟುಕೊಂಡು ಕೊರಗಲಾರಂಭಿಸಿದ್ದ ಬಾಲಕಿ ಖಿನ್ನತೆಗೆ ಒಳಗಾಗಿದ್ದಳು. ಅದೊಂದು ದಿನ ತನ್ನ ಪಾಲಕರಿಗೆ ನಡೆದ ಸಂಗತಿಯನ್ನು ಹೇಳಿ, ತನ್ನ ಪ್ರೇಮಿಯೇ ಬಾಲಕನನ್ನು ಹತ್ಯೆ ಮಾಡಿದ್ದಾಗಿ ತಿಳಿಸಿದ್ದಳು.
ಅದರಂತೆ ಆಕೆಯ ಪಾಲಕರು ಯುವಕನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಜತೆಗೆ ಪೊಲೀಸರು ಬಾಲಕಿಯೊಂದಿಗೆ ದೈಹಿಕ ಸಂಪರ್ಕ ಹೊಂದಿದ್ದಕ್ಕಾಗಿ ಆತನ ವಿರುದ್ಧ ಅತ್ಯಾಚಾರದ ದೂರನ್ನೂ ದಾಖಲಿಸಿಕೊಂಡಿದ್ದಾರೆ. ಇದೀಗ ಬಾಲಕಿಯನ್ನು ವಶಕ್ಕೆ ಪಡೆದಿರುವ ಪೊಲೀಸರು, ತಲೆಮರೆಸಿಕೊಂಡಿರುವ ಯುವಕನಿಗಾಗಿ ಶೋಧಿಸುತ್ತಿದ್ದಾರೆ.
ಲಾಕ್​ಡೌನ್​ನಿಂದ ಕೆಲಸ ಕಳೆದುಕೊಂಡವನಿಗೆ ಹೊಡೆಯಿತು ಲಾಟರಿ, ಸಿಕ್ಕಿತು 31 ಕೋಟಿ ರೂಪಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 1 =
Remember me
