ವಿಜಯವಾಡ:ಮನೆಯಲ್ಲಿ ಮದುವೆಗೆ ಒಪ್ಪುವುದಿಲ್ಲ ಎಂಬ ಭಯದಿಂದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ನಾಗರ್​ ಕರ್ನೂಲ್​ ಜಿಲ್ಲೆಯ ಬಾಲ್ಮೂರ್​ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಮೃತ ಪ್ರೇಮಿಗಳನ್ನು ಬಾಲ್ಮೂರ್​ ವಲಯದ ಬಿಲ್ಲಕಲ್ಲು ಗ್ರಾಮದ ಅಖಿಲಾ (19) ಮತ್ತು ಅದೇ ವಲಯದ ಚೆಂಚುಗುಡೆಮ್​ ಗ್ರಾಮದ ನಿಮ್ಮಲಾ ಅನಿಲ್​ (20) ಎಂದು ಗುರುತಿಸಲಾಗಿದೆ. ಇಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು.
ಮಗಳ ಪ್ರೀತಿಯ ವಿಚಾರ ತಿಳಿದ ಅಖಿಲಾ ಪಾಲಕರು ಆಕೆಯನ್ನು ಬೈದು ಮದುವೆಗೆ ನಿರಾಕರಿಸಿದ್ದರು. ಬಳಿಕ ಅಖಿಲಾ ತನ್ನ ಬಾಯ್​ಫ್ರೆಂಡ್​ ಅನಿಲ್​ಗೆ ವಿಚಾರ ಮುಟ್ಟಿಸಿದ್ದಳು. ಅನಿಲ್​ ಭಾನುವಾರ ರಾತ್ರಿ ಬಿಲ್ಲಕಲ್ಲುಗೆ ಆಗಮಿಸಿ, ಅಖಲಾಳನ್ನು ಕರೆದೊಯ್ದಿದ್ದ.
ಇದನ್ನೂ ಓದಿ:ಜಡ್ಜ್, ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಪ್ರಕರಣ: ಪತ್ರದ ಹಿಂದೆ ಕೌಟುಂಬಿಕ ಕಲಹ ದ್ವೇಷ, ಇಬ್ಬರ ಬಂಧನ!
ಬಳಿಕ ಸೋಮವಾರ ಬೆಳಗ್ಗೆ 4.40ರ ಸುಮಾರಿಗೆ ಅನಿಲ್​ ತನ್ನ ಸ್ನೇಹಿತನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ತಿಳಿಸಿದ್ದ. ಬಳಿಕ ಸ್ನೇಹಿತ, ಇತರರ ಜತೆಗೂಡಿ ಅರಣ್ಯ ಪ್ರದೇಶವನ್ನು ಹುಡುಕಾಡಿದ್ದಾರೆ. ಆದರೆ, ಪ್ರೇಮಿಗಳು ಪತ್ತೆಯಾಗಲಿಲ್ಲ. ಸೋಮವಾರ ಬೆಳಗ್ಗೆ ದನಗಾಹಿಗಳ ಕಣ್ಣಿಗೆ ಪ್ರೇಮಿಗಳ ಶವ ಪತ್ತೆಯಾಗಿದೆ.
ಬಿಲ್ಲಕಲ್ಲುದ ರಷ್ಯನ್​ ಪಾಂಡ್​ ಫಾರೆಸ್ಟ್​ ಡಿಪಾರ್ಟ್​ಮೆಂಟ್​ ಬೇಸ್​ ಕ್ಯಾಮ್​ ಹಿಂಭಾಗದ ಮರವೊಂದರಲ್ಲಿ ಪ್ರೇಮಿಗಳಿಬ್ಬರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಬಳಿಕ ದನಗಾಹಿಗಳು ಪೊಲೀಸರಿಗೆ ಮಾಹಿತಿ ನೀಡಿದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.(ಏಜೆನ್ಸೀಸ್​)
ಮನೆಗೆ ನುಗ್ಗಿ ವಿದ್ಯಾರ್ಥಿನಿ ಕೊಲೆ: ಯುವತಿ ಫೋನ್​ನಲ್ಲಿತ್ತು ಪ್ರಿಯಕರನ ಕುರಿತು ಸ್ಫೋಟಕ ಮಾಹಿತಿ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − eight =
Remember me
