ಹೈದರಾಬಾದ್​:ಕಳೆದ ಮಂಗಳವಾರ ನಡೆದಿದ್ದ ಭೀಕರ ಅಪಘಾತದ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ತೆಲಂಗಾಣದಲ್ಲಿ ಚೋಟು ಉಪ್ಪಲ್​ ಸಿಗ್ನಲ್ ​ಬಳಿ ನಿಂತಿದ್ದ ವಾಹನಗಳಿಗೆ ಹಿಂಬದಿಯಿಂದ ಬ್ರೆಕ್ ಫೇಲ್​ ಆಗಿ ಬಂದ ಕಾರೊಂದು ಗುದ್ದಿದ ಪರಿಣಾಮ ಭೀಕರ ಅಪಘಾತ ಸಂಭವಿಸಿತ್ತು.
ಅಪಘಾತದ ವೇಳೆ ಬೈಕ್​ನಿಂದ ಪೆಟ್ರೋಲ್​ ಹೊರಬಿದ್ದ ಕಾರಣ ನಡುರಸ್ತೆಯಲ್ಲೇ ಬೈಕ್​ ಹೊತ್ತಿ ಉರಿದಿತ್ತು. ​ಸುಮಾರು ನಾಲ್ಕು ಬೈಕ್​​ಗಳಿಗೆ ಕಾರು ಡಿಕ್ಕಿ ಹೊಡೆದಿತ್ತು. ಇದರ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅಪಘಾತದಲ್ಲಿ ಇಬ್ಬರ ದಾರುಣ ಸಾವಿಗೀಡಾಗಿದ್ದರು.
ಇದನ್ನೂ ಓದಿ:ರಿಪಬ್ಲಿಕ್ ಟಿವಿ ಅರ್ನಬ್​ಗೆ ಇನ್ನೊಂದು ಸಂಕಷ್ಟ- ಸುಶಾಂತ್​ ಸಿಂಗ್​ ಸ್ನೇಹಿತನಿಂದ ₹200 ಕೋಟಿ ಮಾನನಷ್ಟ ನೋಟಿಸ್​!
ಮೃತ ಇಬ್ಬರು ಸಹ ಪ್ರೇಮಿಗಳು ಎಂಬುದೇ ಮನಕಲಕುವ ಸಂಗತಿ. ಚೋಟು ಉಪ್ಪಲ್ ಸಮೀಪದ ಟ್ಯಾಂಕ್​ ಬಂದ್​ ಗ್ರಾಮದ ದೇವಸ್ಥಾನದಲ್ಲಿ ಮದುವೆ ಮಾಡಿಕೊಳ್ಳಲು ಪ್ರೇಮಿಗಳು ತೆರಳುತ್ತಿದ್ದರು. ದುರಾದೃಷ್ಟವಶಾತ್​ ಜವರಾಯನ ಅಟ್ಟಹಾಸದಿಂದಾಗಿ ಯುವತಿ ಸ್ಥಳದಲ್ಲೇ ಮೃತಪಟ್ಟರೆ, ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾಗಿದ್ದಾನೆ. ಅವರು ತೆರಳುತ್ತಿದ್ದ ಸ್ಕೂಟಿಯೂ ಸಹ ಬೆಂಕಿ ಕೆನ್ನಾಲಿಗೆಗೆ ಸುಟ್ಟು ಭಸ್ಮವಾಗಿದೆ.
ಅಪಘಾತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.(ಏಜೆನ್ಸೀಸ್​)
https://www.facebook.com/982407188453946/videos/2782026692011989
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × 4 =
Remember me
