ಜಲೌನ್:ಪರಸ್ಪರ ಪ್ರೀತಿಯಲ್ಲಿದ್ದ ಪ್ರೇಮಿಗಳು ತಾವಿಬ್ಬರು ಈ ಜೀವನದಲ್ಲಿ ಒಂದಾಗಲೂ ಸಾಧ್ಯವಿಲ್ಲ ಎಂದು ತಿಳಿದು, ತಮ್ಮ ಕೈಗಳನ್ನು ಕಟ್ಟಿಕೊಂಡು ವೇಗವಾಗಿ ಚಲಿಸುತ್ತಿದ್ದ ರೈಲಿನ ಮುಂದೆ ಜಿಗಿದು ಪ್ರಾಣಬಿಟ್ಟ ಘಟನೆ ಉತ್ತರ ಪ್ರದೇಶದ ಜಲೌನ್‌ನಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಹರೀನಹಳ್ಳಿ ಕೆರೆಗೆ ಶಾಸಕ ಜಿ.ಡಿ.ಹರೀಶ್‌ಗೌಡ ಬಾಗಿನ ಅರ್ಪಣೆ
ಮೃತ ಯುವಕ ತನ್ನ ಕುಟುಂಬದ ಯುವತಿಯನ್ನೇ ಪ್ರೀತಿಸುತ್ತಿದ್ದ ಎಂದು ಹೇಳಲಾಗಿದ್ದು, ಶನಿವಾರ (ಜೂನ್ 29) ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ತಮ್ಮ ಜೀವವನ್ನು ಕೊನೆಗೊಳಿಸಿದ್ದಾರೆ. ಪರಸ್ಪರ ಪ್ರೀತಿಸಿದ್ದ ತಮ್ಮನ್ನು ಮನೆಯವರು ಒಪ್ಪದ ಕಾರಣಕ್ಕೆ ಬೇಸತ್ತು, ಇಬ್ಬರು ಸಾವಿನಲ್ಲಿ ಒಂದಾಗುವ ನಿರ್ಧಾರ ಕೈಗೊಂಡು, ದುರಂತ ಅಂತ್ಯ ಕಂಡಿದ್ದಾರೆ.
हम उम्र भतीजी को भगाकर चाचा लाया घर.. परिजनों ने फटकार लगाई तो प्रेमी – प्रेमिका ने गमछे से हाथ बाँध ट्रेन के आगे कूदकर जान दे दी.. आपस में लिपटी हुई मिली कपल क़ी लाश
UP के जालौन जिले के कालपी कोतवाली क्षेत्र के बरदौली गांव निवासी प्रेमी युगल मनीष कुमार (23) व शहर कोतवाली…pic.twitter.com/dEiiiCqMr2
— TRUE STORY (@TrueStoryUP)June 30, 2024

ವರದಿಗಳ ಪ್ರಕಾರ, ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಬಾರ್ಡೋಲಿ ಗ್ರಾಮದ ಕಲ್ಪಿ ಕೊಟ್ವಾಲಿ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ನಗರದ ಸುಶೀಲ್ ನಗರದ ಮನೀಶ್ ಕುಮಾರ್ (23) ಮತ್ತು ದೀಕ್ಷಾ ಗೌತಮ್ (20) ರೈಲಿನ ಮುಂದೆ ಹಾರಿ ಪ್ರಾಣಬಿಟ್ಟ ಪ್ರೇಮಿಗಳು. ಸಂಬಂಧದಲ್ಲಿ ಯುವತಿಗೆ ಆತ ಚಿಕ್ಕಪ್ಪ ಎಂದು ಹೇಳಲಾಗಿದ್ದು, ಇಬ್ಬರ ಪ್ರೀತಿಯನ್ನು ಕುಟುಂಬಸ್ಥರು ದಿಕ್ಕರಿಸಿದರು ಎಂಬ ಕಾರಣಕ್ಕೆ ಈ ದುರ್ಘಟನೆ ನಡೆದಿದೆ ಎಂದು ಹೇಳಲಾಗಿದೆ,(ಏಜೆನ್ಸೀಸ್).
ನೆಲದ ಮೇಲೆ ನೀವು ಕಣ್ಣೀರಿಟ್ಟಾಗ… ಟೀಮ್ ಇಂಡಿಯಾ ಕ್ಯಾಪ್ಟನ್​ಗೆ ಸಲಾಂ ಎಂದ ಪಾಕ್ ಮಾಜಿ ಕ್ರಿಕೆಟಿಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − seventeen =
Remember me
