ನಾಗ್ಪುರ:ಮನೆಯಲ್ಲಿ ಪ್ರೀತಿಗೆ ವಿರೋಧ ವ್ಯಕ್ತವಾದ ಬೆನ್ನಲ್ಲೆ ಪ್ರೇಮಿಗಳಿಬ್ಬರು ಪ್ರಾಣ ತ್ಯಾಗ ಮಾಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ಇದನ್ನೂ ಓದಿ:ಒಂದು ಬಿಸ್ಕಿಟ್​ನಿಂದಾಗಿ ಗ್ರಾಹಕನಿಗೆ ಒಂದು ಲಕ್ಷ ರೂ. ನೀಡಿದ ಕಂಪನಿ..
ಗೌರವ್ (18) ಮತ್ತು ತನ್ವಿ (17 ವರ್ಷ, ಹೆಸರು ಬದಲಾಯಿಸಲಾಗಿದೆ) ಮೃತ ದುರ್ದೈವಿಗಳಾಗಿದ್ದು, ಇಲ್ಲಿನ ಪಾರ್ಶಿವಾಣಿ ಪೊಲೀಸ್ ಠಾಣೆ ವ್ಯಾಪ್ತಿಯ ಪೆಂಧಾರಿ ಎಂಬಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯಿಂದ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಗೌರವ್ ಈಗಷ್ಟೇ 12ನೇ ತರಗತಿ ಪಾಸಾಗಿದ್ದು, ತನ್ವಿ 12ನೇ ತರಗತಿಯಲ್ಲಿ ಓದುತ್ತಿದ್ದಳು.ಗೌರವ್ ಮತ್ತು ತನ್ವಿ ಒಂದು ವರ್ಷದಿಂದ ಪ್ರೀತಿಸುತ್ತಿದ್ದು, ಸೋಮವಾರ ರಾತ್ರಿ ಇಬ್ಬರೂ ತಡರಾತ್ರಿವರೆಗೂ ವ್ಯಾಟ್ಸ್​​ಆ್ಯಪ್​ನಲ್ಲಿ ಚಾಟ್ ಮಾಡಿದ್ದಾರೆ. ಇದೇ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಇಬ್ಬರೂ ಕೂಡಿಕೊಂಡು ಗೌರವ್​ನ ಮನೆ ಬಳಿಯಿರುವ ನಿರ್ಜನ ಮನೆಗೆ ಹೋಗಿ ಅಲ್ಲಿಯೇ ಹಗ್ಗ ಬಿಗಿದು ಇಬ್ಬರೂ ನೇಣು ಬಿಗಿದುಕೊಂಡಿದ್ದಾರೆ.
ಇದನ್ನೂ ಓದಿ:VIDEO| ಮಗನ ಮೃತದೇಹವನ್ನು ತಳ್ಳುಗಾಡಿಯಲ್ಲಿರಿಸಿ ಅಂತ್ಯಸಂಸ್ಕಾರಕ್ಕೆ ಹಣವಿಲ್ಲದೇ ಪರದಾಡಿದ ತಾಯಿ..ಮಂಗಳವಾರ ಬೆಳಗ್ಗೆ ನಾಗರಿಕರೊಬ್ಬರು ಮನೆಯ ಬಾಗಿಲು ತೆರೆದಿರುವುದನ್ನು ಕಂಡು, ಒಳಗೆ ಹೋದಾಗ ಇಬ್ಬರು ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಈ ವೇಳೆ ಪರಶಿವಾಣಿ ಪೊಲೀಸರು ಹಠಾತ್ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರೀತಿಗೆ ವಿರೋಧ ವ್ಯಕ್ತವಾದ ಕಾರಣ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 9 =
Remember me
