ಹೈದರಾಬಾದ್​:ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ನಿಜಾಮಾಬಾದ್​ ಜಿಲ್ಲೆಯ ನಂದಿಪೇಟ್​ ವಲಯದ ಖುದವಂದಪುರ್​ನಲ್ಲಿ ನಡೆದಿದೆ.
ಖುದವಂದಪುರ್​ ಮೂಲದ ಸುಕನ್ಯಾ (21) ಮತ್ತು ಅಯಿಲಾಪುರದ ಪ್ರೇಮ್​ ಕುಮಾರ್​ (22) ಮೃತ ಪ್ರೇಮಿಗಳು. ಇಬ್ಬರು ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ನಿಜಾಮಾಬಾದ್​ನ ಗಿರಿರಾಜ್​ ಕಾಲೇಜಿನಲ್ಲಿ ಪದವಿ ಪೂರ್ಣಗೊಳಿಸಿದರು.
ಇದನ್ನೂ ಓದಿರಿ:ಹೊಲಕ್ಕೆ ಹೋದ ಯುವತಿಯ ಮೇಲೆ ಗ್ಯಾಂಗ್​ ರೇಪ್​! ಗುಪ್ತಾಂಗಕ್ಕೆ ಬಾಟೆಲ್​ ತುಂಬಿದ ಪಾಪಿಗಳು!
ಕೆಲ ದಿನಗಳಿಂದ ಸುಕನ್ಯಾಗೆ ಮದುವೆಗೆ ಮಾಡಲು ಪಾಲಕರು ವರನ ಹುಡುಕಾಟದಲ್ಲಿದ್ದರು. ಈ ವಿಚಾರ ಸುಕನ್ಯಾಗೆ ತಿಳಿದು ಭಾನುವಾರ ರಾತ್ರಿ ತನ್ನ ಬಾಯ್​ಫ್ರೆಂಡ್​ ಪ್ರೇಮ್​ ಕುಮಾರ್​ಗೆ ವಾಟ್ಸ್​ಆ್ಯಪ್​​ ಮಾಡಿ ಮಾಹಿತಿ ನೀಡಿದ್ದಳು. ಅಲ್ಲದೆ, ಇಬ್ಬರು ಆದಷ್ಟು ಬೇಗ ಮದುವೆ ಆಗೋಣ ಎಂದಿದ್ದಳು. ಆದರೆ, ಕೆಲವು ವರ್ಷ ಸುಮ್ಮನಿರು ಆಮೇಲೆ ಮದುವೆಯಾಗೋಣ ಎಂದು ಪ್ರೇಮ್​ಕುಮಾರ್​ ಹೇಳಿದ್ದ.
ಇದರ ಬೆನ್ನಲ್ಲೇ ಸುಕನ್ಯಾ ತನ್ನ ಕೋಣೆಯಲ್ಲಿ ಚಾಕುವಿನಿಂದ ಹರಿದುಕೊಂಡು ಸೋಮವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಕೋಣೆಯಲ್ಲಿ ಬರುತ್ತಿದ್ದ ನರಳುವ ಶಬ್ದ ಕೇಳಿದ ಪಾಲಕರು ಓಡಿ ಹೋಗಿ ನೋಡುವಷ್ಟರಲ್ಲಿ ಸುಕನ್ಯಾ ಕೊನೆಯುಸಿರೆಳೆದಿದ್ದಳು. ಇತ್ತ ಪ್ರೇಯಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬ ಸುದ್ದಿ ತಿಳಿಯುತ್ತಲೇ ಪ್ರೇಮ್​ ಕುಮಾರ್​ ಗ್ರಾಮದ ಹೊರವಲಯದಲ್ಲಿ ಮರವೊಂದಕ್ಕೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾನೆ.
ಇದನ್ನೂ ಓದಿರಿ:ಬೆಣ್ಣೆಹೊಳೆ ಫಾಲ್ಸ್​ ಬಳಿ ಪ್ರೇಮಿಗಳಿಬ್ಬರ ಶವ ಸಿಕ್ಕ ಮರುದಿನವೇ ಪ್ರಿಯಕರನ ತಂದೆ ಸಾವು! ಮನಕಲಕುತ್ತೆ ಸಾವಿನ ಕಾರಣ
ಇದೀಗ ಇಬ್ಬರು ಕುಟುಂಬದವರು ಸಹ ದೂರು ದಾಖಲಿಸಿದ್ದು, ಈ ಬಗ್ಗೆ ಮಾತನಾಡಿರುವ ಎಸ್​ಐ ಶೋಭನ್​ಬಾಬು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮಾಡಲಾಗುವುದು ಎಂದಿದ್ದಾರೆ. ಸುಕನ್ಯಾ ಪಾಲಕರಿಗೆ ಒಟ್ಟು ಮೂವರು ಹೆಣ್ಣುಮಕ್ಕಳು. ಮನೆಯಲ್ಲಿ ನಡೆದಿದ್ದ ಗಲಾಟೆ ವಿಚಾರಕ್ಕೆ ಹಿಂದೊಮ್ಮೆ ಆಕೆ ಆತ್ಮಹತ್ಯೆ ಪ್ರಯತ್ನ ಮಾಡಿದ್ದಳು. ಇದೀಗ ಮಗಳನ್ನು ಕಳೆದುಕೊಂಡ ಕುಟುಂಬ ದುಃಖದ ಕಡಲಲ್ಲಿ ಮುಳುಗಿದೆ. ಪ್ರೇಮ್​ ಕುಮಾರ್​ ಮನೆಯಲ್ಲೂ ಇದೇ ಪರಿಸ್ಥಿತಿ ಇದೆ.(ಏಜೆನ್ಸೀಸ್​)
‘ಥೂ.. ಅವಳು ಗಂಡೋ ಹೆಣ್ಣೋ? ಅವಳ ವಾಯ್ಸ್​ ನಾಯಿ ವಾಯ್ಸ್​ ತರ ಇದೆ’ ಎಂದಿದ್ದ ನೆರೆ ಮನೆಯ ಮಹಿಳೆಗೆ ತಕ್ಕ ಪಾಠ ಕಲಿಸಿದ ಮಹಿಳೆ

ಪ್ರೀತಿಸಿದ ಯುವತಿ ಗಿಡಕ್ಕೆ ನೀರು ಹಾಕುತ್ತಿದ್ದರೆ, ಬಿಲ್ಡಿಂಗ್ ಹಾರಿ ಬಂದ ಯುವಕ ಹೀಗಾ ಮಾಡೋದು?!

ಹಣೆ ಮೇಲೆ ಒಂದೇ ಕಣ್ಣು ಎರಡು ಕಣ್ಣಿನ ಪಾಪೆ: ವಿಚಿತ್ರ ಮೇಕೆ ಮರಿ ದೇವರ ಅವತಾರವಂತೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 19 =
Remember me
