ನವದೆಹಲಿ:ಇವಳಿಗೆ ಅದಾಗಲೇ ಮದುವೆಯಾಗಿತ್ತು, ಅದಾಗ್ಯೂ ಇನ್ನೊಬ್ಬನ ಜತೆ ಪ್ರೇಮಾಂಕುರವಾಗಿತ್ತು. ಆದರೆ ಆ ಪ್ರಿಯತಮನಿಗೆ ಇನ್ನೊಬ್ಬಳ ಜತೆ ಮದುವೆ ನಿಶ್ಚಯವಾಗಿದ್ದಕ್ಕೆ ಈಕೆ ಆತನನ್ನು ಮನೆಗೇ ಕರೆಸಿ ಆ್ಯಸಿಡ್ ಎರಚಿದ್ದಾಳೆ. ಇದೀಗ ಶೇ. 80 ಸುಟ್ಟ ಗಾಯಗಳಾಗಿರುವ ಯುವಕ ತೀವ್ರ ಯಾತನೆ ಅನುಭವಿಸುತ್ತಿದ್ದಾನೆ.
ಸಂತ್ರಸ್ತ ಹಾಗೂ ಆರೋಪಿ ಇಬ್ಬರೂ ಕೆಲ ವರ್ಷಗಳ ಹಿಂದೆ ಒಂದೇ ಕಡೆ ಕೆಲಸ ಮಾಡುತ್ತಿದ್ದು, ಆಗ ಇವರಿಬ್ಬರ ಮಧ್ಯೆ ಪ್ರೀತಿ ಉಂಟಾಗಿತ್ತು. ನಂತರ ಇಬ್ಬರೂ ಸಂಸ್ಥೆ ಬದಲಿಸಿದ್ದರು. ಸಂತ್ರಸ್ತ 28 ವರ್ಷದ ದೇವೇಂದ್ರ ಕುಮಾರ್ ಆಸ್ಪತ್ರೆಯೊಂದರಲ್ಲಿ ಲ್ಯಾಬ್ ಅಸಿಸ್ಟೆಂಟ್ ಆಗಿದ್ದು, ಆರೋಪಿ ಸೋನಂ ಪಾಂಡೆ ನರ್ಸ್ ಆಗಿದ್ದಾಳೆ. ಉತ್ತರಪ್ರದೇಶದ ಆಗ್ರಾದಲ್ಲಿ ಗುರುವಾರ ಈ ಘಟನೆ ನಡೆದಿದೆ. ದೇವೇಂದ್ರ ಕುಮಾರ್ ಮದುವೆ ಏ. 28ರಂದು ನಡೆಸುವುದು ಎಂದು ನಿಗದಿ ಆಗಿತ್ತು. ಸೋನಂ ಪಾಂಡೆಗೆ ಈಗಾಗಲೇ ಮದುವೆಯಾಗಿದ್ದರೂ ಈಕೆಯ ಪತಿ ಹಾಗೂ ಪುತ್ರಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ:ನೀವು ಸಿಎಂ ಆಗೋದಾದ್ರೆ ಜೆಡಿಎಸ್‌ ಶಾಸಕರೆಲ್ಲ ಜೈ ಅಂತೀವಿ: ಶಾಸಕ ಎಚ್‌.ಡಿ. ರೇವಣ್ಣ ಕೊಟ್ರು ಆಫರ್‌
ದೇವೇಂದ್ರ ಕುಮಾರ್​ಗೆ ಮದುವೆ ನಿಶ್ಚಯವಾಗಿದ್ದನ್ನು ತಿಳಿದ ಸೋನಂ, ತನ್ನ ಮನೆಯಲ್ಲಿ ಫ್ಯಾನ್​ ಹಾಳಾಗಿದೆ, ಸರಿ ಮಾಡಲು ಸಹಾಯ ಮಾಡು ಬಾ ಎಂದು ಕರೆಸಿಕೊಂಡಿದ್ದಳು. ದೇವೇಂದ್ರ ಕುಮಾರ್ ಮದುವೆಯಾಗಲಿರುವ ವಿಷಯ ಈ ಸಂದರ್ಭದಲ್ಲಿ ಸೋನಂ ಪ್ರಸ್ತಾಪಿಸಿದ್ದಳು. ಆಗ ಇಬ್ಬರ ಮಧ್ಯೆ ವಾಗ್ವಾದ ಉಂಟಾಗಿದ್ದು, ಸಿಟ್ಟಾದ ಸೋನಂ ಆತನ ಮೇಲೆ ಆ್ಯಸಿಡ್ ಎರಚಿದ್ದಾಳೆ. ನೋವಲ್ಲೇ ಚೀರಿಕೊಂಡು ಹೊರ ಬಂದ ದೇವೇಂದ್ರ ಕುಮಾರ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. (ಏಜೆನ್ಸೀಸ್)
ಇದನ್ನೂ ಓದಿ:ರೊಚ್ಚಿಗೆದ್ದು ಪೊಲೀಸರನ್ನೇ ಥಳಿಸಿದ ಸಾರ್ವಜನಿಕರು; ಅಡ್ಡಗಟ್ಟಿದ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ಬಿದ್ದ ಬೈಕ್ ಸವಾರ ಸಾವು
ಧರ್ಮಸ್ಥಳದ ಧರ್ಮಾಧಿಕಾರಿಯವರ ಸರಳತೆಗೆ ಮಾರುಹೋದ ಬೈಕರ್; ನಗುನಗುತ್ತಲೇ ಮಾತಾಡಿ ತಿಂಡಿಯನ್ನೂ ಕೊಟ್ಟ ವೀರೇಂದ್ರ ಹೆಗ್ಗಡೆ

ಬಿಗ್​ಬಾಸ್​ ಬೆಡಗಿ ಚೈತ್ರಾ ಕೊಟ್ಟೂರು ಮದ್ವೆಯಾದ ಮೊದಲ ರಾತ್ರಿಯೇ ಗಲಾಟೆ; ನಂಗೆ ಅವಳು ಬೇಡ ಅಂತ ಗಂಡ, ಅವನೇ ಬೇಕು ಎಂದು ಚೈತ್ರಾ ಪಟ್ಟು!

ನಾನು ನೀವು ಹೋಗಿ ಅವರ ಬಟ್ಟೆ ಬಿಚ್ಚಿದ್ವಾ? ಆ ಯಪ್ಪ ಎದುರಿಗೆ ಸಿಕ್ಕಾಗ ಏನು ಹೇಳಬೇಕೋ ಹೇಳುತ್ತೇನೆ: ಸಿಡಿ ಕೇಸ್​ ಬಗ್ಗೆ ಡಿ.ಕೆ. ಸುರೇಶ್ ಸಿಡಿಮಿಡಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:9 − one =
Remember me
