ಲಖನೌ:ರಸ್ತೆಗಳ ಮೇಲೆ ಹದಿಹರಯದವರ ಹುಚ್ಚಾಟಗಳು ಇತ್ತೀಚೆಗೆ ಹೆಚ್ಚಾಗುತ್ತಿದ್ದು, ಇದು ಅವರ ಪ್ರಾಣಕ್ಕಷ್ಟೇ ಕುತ್ತು ತರುತ್ತಿಲ್ಲ. ಎದುರಿನಿಂದ ಬರುವವರು, ಅಕ್ಕಪಕ್ಕದಲ್ಲಿ ಚಲಿಸುವವರಿಗೂ ಜೀವ ಹಾರಿಹೋಗುವಂತಾಗುತ್ತಿದೆ. ಇಂತಹ ಘಟನೆಗಳಿಗೆ ಸಂಬಂಧಿಸಿದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ. ಇತ್ತೀಚಿಗೆ ಇದೇ ರೀತಿಯ ವಿಡಿಯೋವೊಂದು ಸದ್ದು ಮಾಡುತ್ತಿದೆ. ಕಾರಿನಲ್ಲಿ ಹೋಗುತ್ತಿದ್ದ ಪ್ರೇಮಿಗಳು ಇದ್ದಕ್ಕಿದ್ದಂತೆ ಟಾಪ್​ ಮೇಲೆ ಕಾಣಿಸಿಕೊಂಡು ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬನ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಪ್ರೇಮಿಗಳ ವರ್ತನೆಗೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ:ರಿಲಯನ್ಸ್ ಇಂಡಸ್ಟ್ರೀಸ್​ನಲ್ಲಿ 42 ಸಾವಿರ ಉದ್ಯೋಗಳು ಔಟ್​! ಅಂಬಾನಿ ಕಂಪೆನಿಯಲ್ಲಿ ಏನಾಗ್ತಿದೆ? ವಿವರ ಇಲ್ಲಿದೆ..
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವೀಡಿಯೋ ಪ್ರಕಾರ ಘಟನೆ ಉತ್ತರ ಪ್ರದೇಶದ ಲಕ್ನೋದಲ್ಲಿ ನಡೆದಿದೆ. ಪ್ರೇಮಿಗಳು ರಾತ್ರಿ ಕಾರಿನಲ್ಲಿ ಹೋಗುತ್ತಿದ್ದರು. ಆದರೆ ಇದ್ದಕ್ಕಿದ್ದಂತೆ ನಡುರಸ್ತೆಯಲ್ಲೇ ಕಾರಿನ ಛಾವಣಿಯಿಂದ ಎದ್ದು ನಿಂತು ಒಬ್ಬರನ್ನೊಬ್ಬರು ತಬ್ಬಿಕೊಂಡು ಚುಂಬಿಸುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾರೆ.
लखनऊ:-तहज़ीब ओ अदब का शहर इन दिनों गोमतीनगर जैसे इलाकों में हो रहा बदनाम,हुड़दंगियों के बाद प्रेमी जोड़े की अश्लीलता आई सामने,1090 चौराहे से मुख्यमंत्री चौराहे तक बेखौफ करते रहे अश्लील हरकतें, पुलिस रहीं नदारद,UP 78 GB 0130 नंबर गाड़ी की रूफ पर हो रहीं आशिक़ी@lkopolicepic.twitter.com/TUnURn53SO
— Anujjournalist9889 (@anujjournalist1)August 6, 2024

ಇಬ್ಬರೂ ಬಹಳ ಹೊತ್ತು ಮೈಮರೆತು ಕಿಸ್ಸಿಂಗ್​ನಲ್ಲಿ ತೊಡಗಿದ್ದು, ಇವರ ಕಾರ್​ ಹಿಂದೆ ಬರುತ್ತಿದ್ದ ವಾಹನ ಸವಾರರೆಲ್ಲರೂ ಗಾಬರಿಯಾದರು. ಕೆಲವರು ಈ ಘಟನೆಯನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.
ಈ ವಿಡಿಯೋ ವೀಕ್ಷಿಸಿದ ನೆಟ್ಟಿಗರು ವಿಭಿನ್ನ ರೀತಿಯಲ್ಲಿ ಪ್ರತಿಕ್ರಿಯಿಸುತ್ತಿದ್ದಾರೆ. ‘ಈ ಪ್ರೇಮಿಗಳಿಗೆ ಕಾರಿನ ರೂಫ್ ಹಾಕಿರುವಂತಿದೆ’ ಎಂದು ಕೆಲವರು ಹೇಳಿದರೆ, ‘ಇಂತಹ ದೃಶ್ಯಗಳ ವಿಡಿಯೊ ತೆಗೆಯುವುದು ತಪ್ಪು’ ಎಂದು ಮತ್ತೆ ಕೆಲವರು ವಿವಿಧ ರೀತಿಯ ಎಮೋಜಿಗಳನ್ನು ಹಾಕಿ ಕಮೆಂಟ್ ಮಾಡಿದ್ದಾರೆ. ಇವರಿಗೆ ನಾಚಿಕೆಯಾಗಬೇಕು, ಪೊಲೀಸರು ಒಳಗೆ ಹಾಕಬೇಕು ಎಂದು ಇನ್ನೂ ಕೆಲವರು ಕಾಮೆಂಟ್​ ಮಾಡಿದ್ದಾರೆ. ಈ ವೀಡಿಯೊ ಪ್ರಸ್ತುತ 1600 ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇಬ್ ಭಟ್ಟಾಚಾರ್ಯ ಇನ್ನಿಲ್ಲ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:two × two =
Remember me
