ನವದೆಹಲಿ:ನಗರ ಪ್ರದೇಶಗಳಲ್ಲಿ ಅಸಂಘಟಿತ ವಲಯದ ಕಾರ್ವಿುಕರು ಮತ್ತು ವಲಸೆ ಕಾರ್ವಿುಕರು, ವಿದ್ಯಾರ್ಥಿಗಳಿಗೆ ಕೈಗೆಟಕುವ ದರದಲ್ಲಿ ಬಾಡಿಗೆ ಮನೆ ಒದಗಿಸುವ ಮಹತ್ವಾಕಾಂಕ್ಷೆಯ ಯೋಜನೆಯೊಂದನ್ನು ಕೇಂದ್ರ ಸರ್ಕಾರ ರೂಪಿಸುತ್ತಿದೆ. ನಗರಗಳಲ್ಲಿನ ಬಾಡಿಗೆ ಮನೆಗಳ ಸಂಕೀರ್ಣದಲ್ಲಿ ಒಂದು ಸಾವಿರ ರೂಪಾಯಿಯಿಂದ ಮೂರು ಸಾವಿರ ರೂಪಾಯಿ ವರೆಗಿನ ಅಗ್ಗದ ದರದ ಮನೆಗಳಲ್ಲಿ ವಾಸ ಮಾಡುವ ಅವಕಾಶ ಇವರಿಗೆ ಲಭ್ಯವಾಗಲಿದೆ. ಈ ಯೋಜನೆಗೆ ಆರಂಭಿಕವಾಗಿ 700 ಕೋಟಿ ರೂಪಾಯಿ ಅಗತ್ಯವಾಗಬಹುದು ಎಂದು ವಸತಿ ಸಚಿವಾಲಯ ಅಂದಾಜು ಮಾಡಿದೆ.
ಬಳಸದ ಮನೆಗಳು:ಜವಾಹರಲಾಲ್ ನೆಹರೂ ರಾಷ್ಟ್ರೀಯ ನಗರ ಪುನರುತ್ಥಾನ ಯೋಜನೆ (ಜೆ-ನಮ್ರ್) ಮತ್ತು ರಾಜೀವ್ ಆವಾಸ್ ಯೋಜನೆ (ಆರ್​ಎವೈ) ಅಡಿ ನಿರ್ವಣವಾಗಿ ಬಳಸದೇ ಇರುವ ಸುಮಾರು ಒಂದು ಲಕ್ಷ ಮನೆಗಳನ್ನು ಅಗ್ಗದ ದರದಲ್ಲಿ ಬಾಡಿಗೆಗೆ ಒದಗಿಸಲು ಬಳಸಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದೆ. ಈ ಎರಡೂ ಯೋಜನೆಗಳು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಯೋಜನೆಗಳಾಗಿವೆ.
ಕೇಂದ್ರ ನಗರ ವ್ಯವಹಾರಗಳು ಮತ್ತು ವಸತಿ ಸಚಿವಾಲಯ ಬಾಡಿಗೆ ಮನೆ ಯೋಜನೆ ನೀತಿಯನ್ನು ರೂಪಿಸಿ ಕೇಂದ್ರ ಸಚಿವ ಸಂಪುಟದ ಅನುಮೋದನೆ ಪಡೆಯುವ ಪ್ರಕ್ರಿಯೆಗೆ ಚಾಲನೆ ನೀಡಿದೆ ಎಂದು ಮೂಲಗಳು ತಿಳಿಸಿವೆ. ವಿವಿಧ ವಿಭಾಗಗಳಲ್ಲಿ ಈ ಯೋಜನೆಯ ಲಾಭ ಪಡೆಯಲು ಅರ್ಹತಾ ಮಾನದಂಡವನ್ನು ಅಂತಿಮಗೊಳಿಸುವ ಪ್ರಕ್ರಿಯೆ ಇನ್ನೂ ಪೂರ್ತಿಗೊಂಡಿಲ್ಲ.
ಲಾಕ್​ಡೌನ್ ಪರಿಣಾಮ:ಕರೊನಾ ಲಾಕ್​ಡೌನ್ ಸೃಷ್ಟಿಸಿದ ವಲಸೆ ಕಾರ್ವಿುಕರ ಬಿಕ್ಕಟ್ಟು ಕಡಿಮೆ ದರದಲ್ಲಿ ಬಾಡಿಗೆ ಮನೆ ಒದಗಿಸುವ ಯೋಜನೆಯ ಚಿಂತನೆೆಯನ್ನು ಹುಟ್ಟು ಹಾಕಿದೆ. ಲಾಕ್​ಡೌನ್ ನಂತರ ಸೃಷ್ಟಿಯಾದ ವಲಸೆ ಕಾರ್ವಿುಕರ ಬಿಕ್ಕಟ್ಟನ್ನು ಮುಂಗಾಣುವಲ್ಲಿ ಹಾಗೂ ಅದನ್ನು ನಿರ್ವಹಿಸುವಲ್ಲಿ ಸರ್ಕಾರ ತೀವ್ರವಾಗಿ ವಿಫಲವಾಗಿದೆ ಎಂದು ವ್ಯಾಪಕ ಟೀಕೆ ವ್ಯಕ್ತವಾಗಿದೆ. ಆನಂತರ ಸರ್ಕಾರ ಎಚ್ಚೆತ್ತು ವಲಸೆ ಕಾರ್ವಿುಕರು ಸ್ವಂತ ಊರುಗಳಿಗೆ ಮರಳಲು ಬಸ್ ಹಾಗೂ ರೈಲು ವ್ಯವಸ್ಥೆ ಮಾಡಿತು. ಅವರಿಗೆ ಉಚಿತ ಪಡಿತರ ನೀಡುವುದಾಗಿ ಪ್ರಕಟಿಸಿತು. ಇದರಿಂದ ತೃಪ್ತವಾಗದ ಪ್ರತಿಪಕ್ಷಗಳು, ವಲಸೆ ಕಾರ್ವಿುಕರ ಖಾತೆಗಳಿಗೆ ಹಣ ವರ್ಗಾಯಿಸುವುದು ಹಾಗೂ ಅವರಿಗೆ ಉದ್ಯೋಗ ಒದಗಿಸುವುದು ಸೇರಿದಂತೆ ಇನ್ನಷ್ಟು ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿವೆ.
1 ಕೋಟಿ ಕಾರ್ವಿುಕರು?:ದೇಶದಲ್ಲಿ ಒಟ್ಟು ಎಷ್ಟು ವಲಸೆ ಕಾರ್ವಿುಕರಿದ್ದಾರೆ ಎನ್ನುವ ಮಾಹಿತಿ ಸರ್ಕಾರದ ಯಾವುದೇ ಇಲಾಖೆಗಳ ಬಳಿ ಇಲ್ಲ. ಆದರೆ ಮಾರ್ಚ್ 25ರಂದು ಕರೊನಾ ಲಾಕ್​ಡೌನ್ ಜಾರಿಯಾದಾಗಿನಿಂದ ಸುಮಾರು ಒಂದು ಕೋಟಿ ವಲಸೆ ಕಾರ್ವಿುಕರು ಶ್ರಮಿಕ್ ವಿಶೇಷ ರೈಲುಗಳು, ಬಸ್​ಗಳ ಮೂಲಕ ಹಾಗೂ ನಡೆದುಕೊಂಡು ತಮ್ಮ ಸ್ವಂತ ಊರುಗಳಿಗೆ ಮರಳಿದ್ದಾರೆ ಎಂದು ಸುಪ್ರೀಂ ಕೋರ್ಟ್​ಗೆ ಕೇಂದ್ರ ಸರ್ಕಾರ ತಿಳಿಸಿದೆ.
ರಾಷ್ಟ್ರೀಯ ಭದ್ರತಾ ಮಂಡಳಿ ನೀಡಿದೆ ಎಚ್ಚರಿಕೆ …! ಈ ಚೀನಿ ಆ್ಯಪ್​ಗಳಿದ್ದರೆ ಅಪಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × two =
Remember me
