ಬೆಂಗಳೂರು:ಮೂರು ದಿನದ ಹಿಂದಷ್ಟೇ 25 ರೂ. ಏರಿಕೆ ಕಂಡಿದ್ದ ಎಲ್ಲ ರೀತಿಯ ಎಲ್ಪಿಜಿ ಸಿಲಿಂಡರ್ ಬೆಲೆ ಸೋಮವಾರ ಮತ್ತೆ 25 ರೂ. ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 14.2 ಎಲ್ಪಿಜಿ ಸಿಲಿಂಡರ್ ಬೆಲೆ 822 ರೂ. ತಲುಪಿದೆ. ಈ ಹಿಂದೆ 797 ರೂ.ಇತ್ತು. ಅಲ್ಲದೆ, 19 ಕೆಜಿಯ ವಾಣಿಜ್ಯ ಬಳಕೆಯ ಸಿಲಿಂಡರ್ ಮೇಲೆ 96 ರೂ. ಏರಿಕೆಯಾಗಿದೆ. ಇದರೊಂದಿಗೆ 1,666 ರೂ.ಆಗಿದೆ. ಫೆಬ್ರವರಿಯಲ್ಲಿ ಮೂರು ಬಾರಿ ಸಿಲಿಂಡರ್ ದರ ಏರಿಕೆಯಾಗಿತ್ತು. ಫೆ. 4ರಂದು 25 ರೂ. ಫೆ. 15ರಂದು 50 ರೂ ಹಾಗೂ ಫೆ.25ರಂದು 25 ರೂ. ಏರಿಸಲಾಗಿತ್ತು. ಅಲ್ಲದೆ, ಡಿಸೆಂಬರ್​ನಲ್ಲಿ ಎರಡು ಬಾರಿ ತಲಾ 50 ರೂ. ಹೆಚ್ಚಿಸಲಾಗಿತ್ತು. 3 ತಿಂಗಳಲ್ಲಿ ಒಟ್ಟಾರೆ 200 ರೂ. ಹೆಚ್ಚಿಸಲಾಗಿದೆ. ವಾಣಿಜ್ಯ ಬಳಕೆಯ ಸಿಲಿಂಡರ್ ದರ ಕೂಡ 5 ಬಾರಿ ಹೆಚ್ಚಿಸಲಾಗಿದೆ.
1.78 ಕೋಟಿ ಗ್ರಾಹಕರು:ರಾಜ್ಯದಲ್ಲಿ ಇಂಡಿಯನ್ ಆಯಿಲ್ ಕಾಪೋರೇಷನ್ ಲಿ. (ಐಒಸಿಎಲ್)62.27 ಲಕ್ಷ, ಹಿಂದೂಸ್ತಾನ್ ಪೆಟ್ರೋಲಿಯಂ ಕಾಪೋರೇಷನ್ ಲಿ.(ಎಚ್​ಪಿಸಿಎಲ್) 48.83 ಲಕ್ಷ ಹಾಗೂ ಭಾರತ್ ಪೆಟ್ರೋಲಿಯಂ ಕಾಫೋರೇಷನ್ ಲಿ.( ಬಿಪಿಸಿಎಲ್)35.59 ಲಕ್ಷ ಸೇರಿ ಒಟ್ಟಾರೆ 1.46,07900 ಗ್ರಾಹಕರು ಎಲ್ಪಿಜಿ ಸಂಪರ್ಕ ಹೊಂದಿದ್ದಾರೆ. ಅಲ್ಲದೆ, ಪ್ರಧಾನ ಮಂತ್ರಿ ಉಜ್ವಲಾ ಯೋಜನೆಯಡಿ ಐಒಸಿಎಲ್​ನ 13,93,748, ಬಿಪಿಸಿಎಲ್​ನ 7,40,897, ಹಾಗೂ ಎಚ್​ಪಿಸಿಎಲ್​ನ 10,11,042 ಸೇರಿ ಒಟ್ಟು 31,45,687 ಗ್ರಾಹಕರಿದ್ದಾರೆ.
ರಾಹುಲ್ ಟೀಕೆ:ಅಡುಗೆ ಅನಿಲ ಬೆಲೆ ಏರಿಕೆ ಟೀಕಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಜನರು ಮೋದಿ ಸರ್ಕಾರದ ಹುಸಿ ಭರವಸೆಗಳನ್ನು ತಿಂದು ಬದುಕುವುದಲ್ಲದೆ ಬೇರೆ ದಾರಿಯಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ‘ಕೆಲಸಗಳನ್ನು ಮುಗಿಸಿ, ಅಡುಗೆ ಸ್ಟವ್​ಗಳನ್ನು ಬೀದಿಗೆಸೆೆಯಿರಿ ಹಾಗೂ ಜುಮ್ಲಾಗಳನ್ನು (ಹುಸಿ ಭರವಸೆ) ತಿನ್ನಿರಿ’ ಎನ್ನುವುದೇ ಮೋದಿ ಸರ್ಕಾರ ಜನರ ಮುಂದಿಟ್ಟಿರುವ ಆಯ್ಕೆಗಳು ಎಂದು ಅವರು ಟ್ವೀಟ್ ಮಾಡಿದ್ದಾರೆ.
ತೈಲ ಬೆಲೆ ಏರಿಕೆಗೆ ಕಡಿವಾಣ ಹಾಕಲು ಬಹಳ ಕಡೆ ನೈಸರ್ಗಿಕ ಅನಿಲ ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ನಗರ ಪ್ರದೇಶಗಳಲ್ಲಿ ನೈಸರ್ಗಿಕ ಅನಿಲ ಉಳಿದ ಕಡೆಗಳಿಗಿಂತ ಕಡಿಮೆ ಇದೆ. ಆ ದಿಕ್ಕಿನತ್ತ ನಮ್ಮ ಪ್ರಯತ್ನ ನಡೆದಿದೆ. ಇಷ್ಟರಲ್ಲೆ ತೈಲ ಉತ್ಪಾದಕರ ಮೇಲೆ ಒತ್ತಡ ಹಾಕುತ್ತೇವೆ. ತೈಲ ಉತ್ಪಾದನೆ ಜಾಸ್ತಿ ಮಾಡಿಸುತ್ತೇವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಒಟ್ಟಿಗೆ ಸೇರಿ ಟ್ಯಾಕ್ಸ್ ಕಡಿಮೆ ಮಾಡುವ ಬಗ್ಗೆಯೂ ಚಿಂತನೆ ನಡೆದಿದೆ. ಸ್ವಲ್ಪ ದಿನಗಳಲ್ಲಿ ಎಲ್ಲದಕ್ಕೂ ಪರಿಹಾರ ಸಿಗುತ್ತದೆ.
|ಪ್ರಲ್ಹಾದ ಜೋಶಿಕೇಂದ್ರ ಸಚಿವ
ಗಂಡ ಮನೆಯಲ್ಲಿ ಇಲ್ಲವೆಂದು ಪ್ರಿಯತಮನನ್ನು ಕರೆಸಿಕೊಂಡ ಹೆಂಡತಿ! ಅಮೇಲಾಗಿದ್ದು ಏನು ಗೊತ್ತಾ?

ಮದ್ವೆಗೆ ಮನೆಯವ್ರು ಒಪ್ಲಿಲ್ಲ ಅಂತ ಪ್ರಿಯಕರ ನೇಣು ಹಾಕಿಕೊಂಡ; ಪ್ರೇಮಿ ಸತ್ತಿದ್ದಕ್ಕೆ ಊಟ ಬಿಟ್ಟ ಪ್ರೇಯಸಿ ಬೆಂಕಿ ಹಾಕಿಕೊಂಡು ಸತ್ತಳು..!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 − five =
Remember me
