ನವದೆಹಲಿ:ಇತ್ತೀಚೆಗೆ ವಿದೇಶಿ ಸುದ್ದಿವಾಹಿನಿಯಲ್ಲಿ ಸಂದರ್ಶಕಿಗೆ ಖಡಕ್​ ಉತ್ತರ ಕೊಟ್ಟು ಕೇಂದ್ರ ಮಂತ್ರಿ ಹರ್​ದೀಪ್​ಸಿಂಗ್​ ಪುರಿ ದೇಶಾದ್ಯಂತ ಜನರ ಮನಸ್ಸನ್ನು ಗೆದ್ದಿದ್ದರು. ಈಗ ಅವರು ಎಲ್​ಪಿಜಿ ಸಿಲಿಂಡರ್​ ಮೇಲೆ ಕ್ಯೂಆರ್​ ಕೋಡ್​ ಅಂಟಿಸಿ ಅನೇಕ ಸಮಸ್ಯೆಗಳಿಗೆ ಪರಿಹಾರ ನೀಡಲಿದ್ದಾರೆ.
ಕಳ್ಳತನವನ್ನು ನಿಯಂತ್ರಿಸಿ ಟ್ರ್ಯಾಕಿಂಗ್ ನಡೆಸಲು ಎಲ್​ಪಿಜಿ ಸಿಲಿಂಡರ್‌ಗಳು ಶೀಘ್ರದಲ್ಲೇ ಕ್ಯೂಆರ್​ ಕೋಡ್‌ಗಳೊಂದಿಗೆ ಬರಲಿವೆ. ಈ ಮಾಹಿತಿಯನ್ನು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಇಂದು (ಬುಧವಾರ) ಪ್ರಕಟಿಸಿದ್ದಾರೆ.
ಮೊಬೈಲ್​ನಿಂದ ಸುಲಭವಾಗಿ ಸ್ಕ್ಯಾನ್​ ಮಾಡಬಹುದಾದ ಕ್ಯೂಆರ್​ ಕೋಡ್‌ಅನ್ನು ಸುಮಾರು 20,000 LPG ಸಿಲಿಂಡರ್‌ಗಳಿಗೆ ಮೊದಲ ಕಂತಿನಲ್ಲಿ ಎಂಬೆಡ್ ಮಾಡಲಾಗುತ್ತದೆ. ಇದರಿಂದ ಯಾವ ಸಿಲಿಂಡರ್​ ಎಲ್ಲಿದೆ ಎನ್ನುವ ಮಾಹಿತಿ ತಕ್ಷಣ ಸಿಗುತ್ತದೆ.
‘ಸದ್ಯಕ್ಕೆ ಕ್ಯೂಆರ್​ ಕೋಡ್ಅನ್ನು ಸಿಲಿಂಡರ್‌ಗಳ ಮೇಲೆ ಅಂಟಿಸಲಾಗುತ್ತದೆ. ಮುಂದೆ ಉತ್ಪಾದನೆ ಆಗಲಿರುವ ಹೊಸ ಸಿಲಿಂಡರ್‌ಗಳ ಮೇಲೆ ಕ್ಯೂಆರ್​ ಕೋಡ್​ ವೆಲ್ಡ್ ಮಾಡಲಾಗುತ್ತದೆ. ಈ ವ್ಯವಸ್ಥೆ ಸಕ್ರಿಯಗೊಂಡಾಗ ಗ್ಯಾಸ್ ಸಿಲಿಂಡರ್‌ಗಳ ಕಳ್ಳತನ, ಟ್ರ್ಯಾಕಿಂಗ್, ಟ್ರೇಸಿಂಗ್ ಮತ್ತು ದಾಸ್ತಾನು ನಿರ್ವಹಣೆಯಂತಹ ಅನೇಕ ಸಮಸ್ಯೆಗಳನ್ನು ಸುಲಭಾವಾಗಿ ಪರಿಹರಿಸಬಹುದು’ ಎಂದು ಹರ್​ದೀಪ್​ ಸಿಂಗ್​ ಪುರಿ ಟ್ವೀಟ್​ ಮಾಡಿದ್ದಾರೆ.
ವರದಿಗಳ ಪ್ರಕಾರ ಮುಂದಿನ ಮೂರು ತಿಂಗಳಲ್ಲಿ ಎಲ್ಲಾ 14.2 ಕೆಜಿಯ ಎಲ್‌ಪಿಜಿ ಸಿಲಿಂಡರ್‌ಗಳು ಕ್ಯೂಆರ್ ಕೋಡ್‌ನೊಂದಿಗೆ ನಿಮ್ಮ ಮನೆಯಂಗಳಕ್ಕೆ ಬಂದು ಇಲಿಯಲಿವೆ. ಇನ್ನು ಹಳೆಯ ಎಲ್‌ಪಿಜಿ ಸಿಲಿಂಡರ್‌ಗಳಿಗೆ ವಿಶೇಷ ಸ್ಟಿಕ್ಕರ್ ಅನ್ನು ಸೇರಿಸಲಾಗುವುದು.(ಏಜೆನ್ಸೀಸ್​)
Fueling Traceability!A remarkable innovation – this QR Code will be pasted on existing cylinders & welded on new ones – when activated it has the potential to resolve several existing issues of pilferage, tracking & tracing & better inventory management of gas cylinders.pic.twitter.com/7y4Ymsk39K
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
