ನವದೆಹಲಿ:ಕಳೆದ ತಿಂಗಳು ಆಗಸ್ಟ್ 30 ರಂದು ಗೃಹಬಳಕೆಯ ಗ್ಯಾಸ್ ಸಿಲಿಂಡರ್‌ ಬೆಲೆಯನ್ನು 200 ರೂ.ನಷ್ಟು ಕಡಿಮೆ ಮಾಡಲಾಗಿದೆ. ಇದಾದ ಬಳಿಕ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆಯೂ ಇಳಿಕೆಯಾಗಿದೆ. ದೇಶಾದ್ಯಂತ ಅವುಗಳ ಬೆಲೆ 150 ರೂ. ಕಡಿತವಾಗಿದೆ. ಎರಡು ತಿಂಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್‌ಗಳ ಬೆಲೆ 250 ರೂ. ಇಳಿಕೆಯಾಗಿದೆ. ಈ ಕಡಿತದ ನಂತರ, ರೆಸ್ಟೋರೆಂಟ್, ಹೊಟೇಲ್ ಮಾಲೀಕರು ಬಹಳಷ್ಟು ಪ್ರಯೋಜನ ಪಡೆಯಲಿದ್ದಾರೆ. ಹಾಗಾದರೆ ದೇಶದ ಮೆಟ್ರೋಪಾಲಿಟನ್ ನಗರಗಳಲ್ಲಿ ವಾಣಿಜ್ಯ ಗ್ಯಾಸ್ ಸಿಲಿಂಡರ್‌ನ ಬೆಲೆ ಎಷ್ಟಿದೆ?.
ಮಹಾನಗರಗಳಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ*ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1522.50 ರೂ. ಆಗಸ್ಟ್‌ನಲ್ಲಿ ಇದರ ಬೆಲೆ 1,680 ರೂ.*ಬೆಂಗಳೂರಿನಲ್ಲಿ 19 ಕೆಜಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆ 1,768 ರೂ.*ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 1,636 ರೂ. ಕಳೆದ ತಿಂಗಳು ಇದರ ಬೆಲೆ 1,680 ರೂ.*ಮುಂಬೈನಲ್ಲಿ ಕಳೆದ ತಿಂಗಳು 1,640.50 ಇದ್ದ ವಾಣಿಜ್ಯ ಸಿಲಿಂಡರ್ ಬೆಲೆ 1,482 ರೂ.ಗೆ ಕಡಿಮೆಯಾಗಿದೆ.*ಚೆನ್ನೈನಲ್ಲಿ ವಾಣಿಜ್ಯ ಸಿಲಿಂಡರ್‌ನ ಬೆಲೆ 1,695 ರೂ. ಆಗಿದ್ದರೆ, ಆಗಸ್ಟ್‌ನಲ್ಲಿ ಅದರ ಬೆಲೆ 1,852.50 ರೂ.
ಮಹಾನಗರಗಳಲ್ಲಿ ದೇಶೀಯ ಸಿಲಿಂಡರ್ ಬೆಲೆಆಗಸ್ಟ್ 30 ರಂದು ಗೃಹಬಳಕೆಯ ಸಿಲಿಂಡರ್‌ನ ಬೆಲೆಯನ್ನು 200 ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಈ ಕಡಿತದ ನಂತರ, ದೇಶದ ಪ್ರತಿಯೊಂದು ರಾಜ್ಯದಲ್ಲೂ ಅವುಗಳ ಬೆಲೆಗಳನ್ನು ಬದಲಾಯಿಸಲಾಗಿದೆ. ಉಜ್ವಲ ಯೋಜನೆಯಡಿ 10 ಕೋಟಿಗೂ ಹೆಚ್ಚು ಜನರು ಪ್ರಯೋಜನ ಪಡೆಯುತ್ತಿದ್ದಾರೆ. ಉಜ್ವಲ ಯೋಜನೆಯಡಿ ಜನರು 200 ರೂ.ಗಳ ಸಹಾಯಧನ ಪಡೆಯುತ್ತಿದ್ದಾರೆ.
*ದೇಶೀಯ ಸಿಲಿಂಡರ್ ದೆಹಲಿಯಲ್ಲಿ ರೂ.903ಕ್ಕೆ ಲಭ್ಯ.*ಕೋಲ್ಕತ್ತಾದಲ್ಲಿ ಎಲ್‌ಪಿಜಿ ಸಿಲಿಂಡರ್ ರೂ.929ಕ್ಕೆ ಲಭ್ಯ.*ಮುಂಬೈನಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ 902.50 ರೂ.*ಎಲ್‌ಪಿಜಿ ಸಿಲಿಂಡರ್ ಚೆನ್ನೈನಲ್ಲಿ 918.50 ರೂ.ಗೆ ಲಭ್ಯ.
ಇಂದು ಚಿನ್ನ, ಬೆಳ್ಳಿ ಬೆಲೆಯಲ್ಲಿ ಕೊಂಚ ಇಳಿಕೆ;ಹೀಗಿದೆ ಇಂದಿನ ದರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 1 =
Remember me
