

ನವದೆಹಲಿ:ಲಾ ಸ್ಕೂಲ್ ಅಡ್ಮಿಷನ್ ಟೆಸ್ಟ್​ (ಎಲ್​ಎಸ್​ಎಟಿ-ಇಂಡಿಯಾ) ಪರೀಕ್ಷೆಯನ್ನು ಒಂದು ತಿಂಗಳು ಮುಂದೂಡಲಾಗಿದ್ದು, ಜುಲೈ 19 ರಿಂದ ಪರೀಕ್ಷೆ ನಡೆಯಲಿದೆ ಎಂದು ಲಾ ಸ್ಕೂಲ್ ಅಡ್ಮಿಷನ್ ಕೌನ್ಸಿಲ್ (ಎಲ್​ಎಸ್​​ಎಸಿ) ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.ಸಿಬಿಎಸ್​ಇಯ ಉಳಿದ ಪರೀಕ್ಷೆ ಜುಲೈ 1 ರಿಂದ 15 ರ ವರೆಗೆ ನಡೆಯಲಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸ್ಥಳಾವಕಾಶ ಕಲ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡಳಿ ತಿಳಿಸಿದೆ.
ಇದನ್ನೂ ಓದಿ:ಕರೊನಾ ನಿಗ್ರಹಕ್ಕೆ ‘ಮಾನವ’ ಬಲಿ; ದೇವಿಯ ಇಷ್ಟಾರ್ಥ ಪೂರೈಸಿದೆ ಎಂದ ಅರ್ಚಕ
ಸದ್ಯ ಎಲ್​​ಎಸ್​ಎಟಿ -ಇಂಡಿಯಾ ಪರೀಕ್ಷೆಯನ್ನು ಜುಲೈ 19 ರಿಂದ ನಡೆಸಲು ನಿರ್ಧರಿಸಲಾಗಿದೆ. ಅಭ್ಯರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಬುದ್ಧಿಮತ್ತೆ ಆಧಾರಿತ ಆನ್​ಲೈನ್ ಪರೀಕ್ಷೆ ವ್ಯವಸ್ಥೆ ಮಾಡಲಾಗಿದೆ.ಈ ಪರೀಕ್ಷೆ ಮೂರು ಅವಧಿಗಳಲ್ಲಿ ನಾಲ್ಕು ದಿನಗಳವರೆಗೆ ನಡೆಯಲಿದ್ದು, ಜುಲೈ 19 ರಿಂದ ಆರಂಭಗೊಳ್ಳಲಿದೆ. ಅಭ್ಯರ್ಥಿಗಳಿಗೆ ಒಂದು ಅವಧಿಯನ್ನು ನೀಡಲಾಗುತ್ತದೆ. ಪರೀಕ್ಷೆ ಸಂದರ್ಭದಲ್ಲಿ ತಾಂತ್ರಿಕ ದೋಷಗಳು ಕಂಡುಬಂದಲ್ಲಿ ಮುಖ್ಯ ಪರೀಕ್ಷೆಯ ಅವಧಿ ಮುಗಿದ 2-3 ದಿನಗಳ ನಂತರ ಮರು ಪರೀಕ್ಷೆಗೆ ಅವಕಾಶವಿರುತ್ತದೆ ಎಂದು ಮಂಡಳಿ ತಿಳಿಸಿದೆ. ಪರೀಕ್ಷೆಗೆ ಹಾಜರಾಗಲಿಚ್ಛಿಸುವ ಅಭ್ಯರ್ಥಿಗಳು ಜುಲೈ 5 ರೊಳಗಾಗಿ www.discoverlaw.in ನಲ್ಲಿ ಅರ್ಜಿ ಸಲ್ಲಿಸಬಹುದು.
ಮಿಡತೆ ದಾಳಿ ತಡೆಗೆ ಡ್ರೋನ್ ಬಳಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − six =
Remember me
