ಲಖನೌ:ಉತ್ತರ ಪ್ರದೇಶದ ರಾಜಧಾನಿ ಲಖನೌನಲ್ಲಿ ಆತಂಕಕಾರಿ ಘಟನೆಯೊಂದು ವರದಿಯಾಗಿದೆ. ಶಾಲಾ ಬಾಲಕಿಗೆ ಪೊಲೀಸ್​ ಕಾನ್ಸ್​ಟೆಬಲ್​ ಓರ್ವ ರಸ್ತೆಯಲ್ಲೇ ಕಿರುಕುಳ ನೀಡಿರುವ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಶಾಲಾ ವಿದ್ಯಾರ್ಥಿನಿ ಸೈಕಲ್​ ಸವಾರಿಯೊಂದಿಗೆ ಶಾಲೆಗೆ ತೆರಳುವಾಗ ಪೊಲೀಸ್​ ಕಾನ್ಸ್​ಟೆಬಲ್​ ಆಕೆಯನ್ನು ಸ್ಕೂಟರ್​ನಲ್ಲಿ ಹಿಂಬಾಲಿಸುತ್ತಿರುವುದು ವಿಡಿಯೋದಲ್ಲಿದೆ. ಇದನ್ನು ದಾರಿಹೋಕರು ರೆಕಾರ್ಡ್​ ಮಾಡಿದ್ದಾರೆ. ಪೊಲೀಸ್​ ಸಮವಸ್ತ್ರದಲ್ಲೇ ಕಾನ್ಸ್​ಟೆಬಲ್​ ಈ ಕೃತ್ಯ ಎಸಗಿದ್ದಾನೆ. ಬಾಲಕಿಯನ್ನು ಚುಡಾಯಿಸುವುದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದಾಗ ಆಕೆ ನನ್ನ ಸ್ನೇಹಿತನ ಮಗಳು ಎಂದು ಸಬೂಬು ಹೇಳಿದ್ದಾರೆ.
ಇದನ್ನೂ ಓದಿ:ಜಲಸುರಂಗ, ಅಚ್ಚರಿ ತರಂಗ: ಹೂಗ್ಲಿ ನದಿಯಡಿ ದೇಶದ ಮೊದಲ ಮೆಟ್ರೋ ಮಾರ್ಗ
ಈ ಘಟನೆ ಕಳೆದ ಮಂಗಳವಾರ ನಡೆದಿದ್ದು, ಬುಧವಾರ ವಿಡಿಯೋ ಜಾಲತಾಣದಲ್ಲಿ ಕಾಣಿಸಿಕೊಂಡ ಬಳಿಕ ಘಟನೆ ಬೆಳಕಿಗೆ ಬಂದಿದೆ. ವಿಡಿಯೋ ಆಧಾರದ ಮೇಲೆ ಕಾಂಟ್​ ಪೊಲೀಸ್​ ಠಾಣೆಯಲ್ಲಿ ಆರೋಪಿ ಪೊಲೀಸ್​ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಬಂಧನವೂ ಆಗಿದೆ. ಬಂಧಿತ ಕಾನ್ಸ್​ಟೆಬಲ್​ ಹೆಸರು ಶಹದತ್​ ಅಲಿ. ವಿಡಿಯೋದಲ್ಲಿ ಸ್ಕೂಟರ್​ ಮೇಲೆ ನಂಬರ್​ ಪ್ಲೇಟ್​ ಇಲ್ಲದಿರುವುದು ಕೂಡ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಕಳೆದ ಕೆಲವು ದಿನಗಳಿಂದ ಪೊಲೀಸ್​, ಶಾಲಾ ವಿದ್ಯಾರ್ಥಿನಿಯ ಹಿಂದೆ ಬಿದ್ದು, ಕಿರುಕುಳ ನೀಡುತ್ತಿರುವುದು ತಿಳಿದುಬಂದಿದೆ. ಆರೋಪಿಯನ್ನು ಮೋಹನ್​ಲಾಲ್​ಗಂಜ್​ ಪೊಲೀಸ್​ ಠಾಣೆಗೆ ಪೋಸ್ಟಿಂಗ್​ ಮಾಡಲಾಗಿತ್ತು. ಶಾಲಾ ಬಾಲಕಿಯ ಮೊಬೈಲ್ ನಂಬರ್​ಗಾಗಿ ಕಾನ್ಸ್​ಟೆಬಲ್​ ದುಂಬಾಲು ಬಿದಿದ್ದ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಇದನ್ನೂ ಓದಿ:ಖಾಸಗಿ ಸುದ್ದಿ ವಾಹಿನಿಯ ಮಹಿಳಾ ಜರ್ನಲಿಸ್ಟ್​ ಸೇರಿ ಮೂವರಿಗೆ 14 ದಿನಗಳ ನ್ಯಾಯಾಂಗ ಬಂಧನ
UP constable 'Shahadat Khan' was arrested and FIR was lodged under molestation and#pocsoact
The he constable was continuously following and harrasing school girls.
The constable is posted in UP-112 helpline in#Lucknow. He isSuspended.He is Slim 😡pic.twitter.com/2tGj98eRbV
— Boiled Anda 🥚🇮🇳 (@AmitLeliSlayer)May 3, 2023

ಸದ್ಯ ವಿಡಿಯೋ ವೈರಲ್​ ಆಗುತ್ತಿದ್ದು, ಈ ಆಘಾತಕಾರಿ ಘಟನೆಯು ಮತ್ತೊಮ್ಮೆ ಭಾರತದಲ್ಲಿ ಶಾಲಾ ಬಾಲಕಿಯರ ಸುರಕ್ಷತೆಯ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ. ನಾಗರಿಕರನ್ನು ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಇಂತಹ ಕೃತ್ಯ ಎಸಗಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ.(ಏಜೆನ್ಸೀಸ್​)
ಒಂದೇ ಜಿಲ್ಲೆಯಲ್ಲಿ 3 ವರ್ಷವಿದ್ದ ಪೊಲೀಸರ ವರ್ಗ; ಚುನಾವಣಾ ಕರ್ತವ್ಯ ನಿಯೋಜನೆಗೆ ಮಾರ್ಗಸೂಚಿ

ನಕ್ಕರೆ ಕಣ್ಣೀರೂ ಆನಂದಬಾಷ್ಪ!; ನಗುವಿನಿಂದ ಅಂದ-ಆನಂದ-ಆಹ್ಲಾದ

ಯಾರ್ಯಾರಿಗೆ ಒಲಿಯಲಿದೆ ಸಿಂಹಾಸನ?: ದೇವೇಗೌಡರ ಕೋಟೆ ಭೇದಿಸಲು ಕೈ-ಕಮಲ ಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
