ಲಖನೌ:ಪ್ರಚಾರದ ಹುಚ್ಚಿಗೆ ಬಿದ್ದು ರೀಲ್ಸ್​ ಮಾಡುವುದು, ಅದಕ್ಕಾಗಿ ಪ್ರಾಣ ಪಣಕ್ಕಿಡುವುದು, ಇನ್ನೊಬ್ಬರ ಪ್ರಾಣ, ಆಸ್ತಿಗೆ ಹಾನಿಯುಂಟು ಮಾಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಎನ್ನುವಂತಾಗಿದೆ. ಹೀಗೆ ರೀಲ್​ ಮಾಡುವವರ ಹಿಂದೆ ಕಾನೂನು ಹಿಂಬಾಲಿಸುತ್ತದೆ ಎಂಬ ಅರಿವು ಅಂತಹವರಿಗೆ ಇರುವುದಿಲ್ಲ.
ಇದೀಗ ಯುವಕನೊಬ್ಬ ಬೈಕ್​ನಲ್ಲಿ ಅಪಾಯಕಾರಿ ಸ್ಟಂಟ್​ಗಳನ್ನು ಪ್ರದರ್ಶಿಸಿ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಉತ್ತರಪ್ರದೇಶದ ಲಖನೌನಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
वीडियो में दिख रहे व्यक्ति को थाना सुशांत गोल्फ सिटी पुलिस द्वारा हिरासत में लेकर आवश्यक वैधानिक कार्यवाही की जा रही है।pic.twitter.com/8N3YM7BikI
ಇದನ್ನೂ ಓದಿ:ಬಹುಕೋಟಿ ಹಣ ಅಕ್ರಮ ವರ್ಗಾವಣೆ; ಪ್ರತಿಷ್ಠಿತ ಶಿಪ್​ಯಾರ್ಡ್​ ಕಂಪನಿ ಮೇಲೆ ED ದಾಳಿ
ವೈರಲ್​ ಆಗಿರುವ ವಿಡಿಯೋದಲ್ಲಿ ರಾಯಲ್​ ಎನ್​ಫೀಲ್ಡ್​ ಬುಲೆಟ್​ ಬೈಕ್​ ಓಡಿಸುತ್ತಿರುವ ಯುವಕ ಕೈಯಲ್ಲಿ ಗನ್​ ಹಿಡಿದು ಅಪಾಯಕಾರಿ ಸ್ಟಂಟ್​ಗಳನ್ನು ಮಾಡುತ್ತಿರುವುದನ್ನು ನೋಡಬಹುದಾಗಿದೆ. ಇದಲ್ಲದೆ ಕೈಯಲ್ಲಿ ಗನ್​ ಹಿಡಿದು ಗಾಇಡ ಓಡಿಸುವ ವೇಳೆ ಪೋಸ್​ ನೀಡಿದ್ದು, ಗಾಡಿಯ ನಂಬರ್​ ಪ್ಲೇಟ್​ ಬದಲಿಗೆ ಮಹಾಕಾಲ್​ ಎಂಬ ಬೋರ್ಡ್​ಅನ್ನು ನೇತು ಹಾಕಿರುವುದನ್ನು ಕಾಣಬಹುದಾಗಿದೆ.
ಇತ್ತ ವಿಡಿಯೋ ವೈರಲ್​ ಆದ ಬೆನ್ನಲ್ಲೇ ಕ್ರಮ ಕೈಗೊಂಡಿರುವ ಪೊಲೀಸರು ಅಪಾಯಕಾರಿ ಸ್ಟಂಟ್​ ಪ್ರದರ್ಶಿಸಿದ ಯುವಕ ಹಾಗೂ ಬೈಕ್​ಅನ್ನು ವಶಕ್ಕೆ ಪಡೆದಿದ್ದಾರೆ. ಈ ರೀತಿಯ ವರ್ತನೆಗಳನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ಯುವಕ ಹಾಗೂ ಸ್ಟಂಟ್​ ಮಾಡಲು ಬಳಸಿದ್ದ ಬೈಕ್​ಅನ್ನು ವಶಕ್ಕೆ ಪಡೆಯಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
