ಚಂಡೀಗಢ:ಪಂಜಾಬ್​ನ ಲೂಧಿಯಾನ ಜಿಲ್ಲಾ ಕೋರ್ಟ್ ಸಂಕೀರ್ಣದಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣಕ್ಕೆ ಮಾಜಿ ಪೊಲೀಸ್ ಸಿಬ್ಬಂದಿ ಕಾರಣ ಎಂಬುದು ಖಚಿತಪಟ್ಟಿದೆ.
ಶೌಚಗೃಹದಲ್ಲಿ ಸುಧಾರಿತ ಸ್ಪೋಟಕ ಸಾಧನವನ್ನು (ಐಇಡಿ) ಜೋಡಣೆ ಮಾಡುವಾಗ ಅದು ಸ್ಪೋಟಿಸಿ ಆರೋಪಿ ಸಾವನ್ನಪ್ಪಿದ್ದಾನೆ ಎಂದು ಪಂಜಾಬ್ ಪೊಲೀಸ್ ಇಲಾಖೆ ತಿಳಿಸಿದೆ. ಮುಖ್ಯ ಕಾನ್​ಸ್ಟೆಬಲ್ ಆಗಿದ್ದ ಗಗನದೀಪ್ ಸಿಂಗ್ ಡ್ರಗ್ಸ್ ಪ್ರಕರಣದ ಸಂಬಂಧ 2019ರಲ್ಲಿ ಬಂಧಿತನಾಗಿ, ವಜಾಗೊಂಡಿದ್ದ. ಈತ ಕಳೆದ ಸೆಪ್ಟೆಂಬರ್​ನಲ್ಲಿ ಜಾಮೀನಿನ ಮೇಲೆ ಹೊರಬಂದಿದ್ದ. ಪ್ರಕರಣದ ವಿಚಾರಣೆಗೆ ಅವನು ಕೋರ್ಟ್​ಗೆ ಅಲೆದಾಡುತ್ತಿದ್ದ. ಜಡ್ಜ್ ಮತ್ತು ವಕೀಲರನ್ನು ಹೆದರಿಸಲು ಬಯಸಿದ್ದ. ಸ್ಪೋಟಕ ಸಾಧನ ಇರಿಸಲು ಹೋಗಿ ಅದನ್ನು ಜೋಡಿಸುವ ವೇಳೆ ಸ್ಪೋಟಗೊಂಡು ತಾನೇ ಸತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ದೇಶ ವಿರೋಧಿ ನಂಟು?:ಆರೋಪಿ ಗಗನದೀಪ್ ಡ್ರಗ್ಸ್ ಕೇಸ್​ನಲ್ಲಿ ಭಾಗಿಯಾಗಿದ್ದ. ಈ ಪ್ರಕರಣದಲ್ಲಿ ಜೈಲು ಸೇರಿದ ಮೇಲೆ ಖಲಿಸ್ತಾನ್ ಉಗ್ರರು ಇಲ್ಲವೆ ಪಾಕ್ ಭಯೋತ್ಪಾದಕರೊಂದಿಗೆ ಸಂಬಂಧ ಹೊಂದಿರುವವರ ಸಖ್ಯ ಅಥವಾ ಐಎಸ್​ಐ ಜತೆಗಿನ ನಂಟು ಹೊಂದಿರುವ ಸಾಧ್ಯತೆ ಇದೆ. ಹೀಗಾಗಿ ಪ್ರಕರಣವನ್ನು ಬಹುಆಯಾಮದಲ್ಲಿ ತನಿಖೆ ನಡೆಸಲಾಗುತ್ತಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 14 =
Remember me
