ಲೂಧಿಯಾನ:ಗಂಡ-ಹೆಂಡತಿ ಅಂದಮೇಲೆ ಅಲ್ಲಿ ಜಗಳ ಮಾಮೂಲಿ. ಆದರೆ, ಒಬ್ಬರನ್ನೊಬ್ಬರು ಸರಿಯಾಗಿ ಅರ್ಥ ಮಾಡಿಕೊಂಡು, ಪರಸ್ಪರ ಗೌರವಿಸುತ್ತಾ, ಸರಿ-ತಪ್ಪುಗಳನ್ನು ಸ್ವೀಕರಿಸುವ ಮನೋಭಾವ ಬೆಳಸಿಕೊಂಡು, ಅಹಂ ಭಾವನೆಯನ್ನು ಬದಿಗಿಟ್ಟು ಒಟ್ಟಿಗೆ ಹೆಜ್ಜೆ ಹಾಕಿದರೆ ವೈವಾಹಿಕ ಜೀವನ ಹಾಲು ಜೇನಿನಂತೆ ಇರುತ್ತದೆ. ಆದರೆ, ಇದನ್ನು ಮರೆಯುವ ಕೆಲವರು ದಾಂಪತ್ಯ ಜೀವನವೆಂಬ ಪರಿಶುದ್ಧ ಕನ್ನಡಿಯನ್ನು ಡಿವೋರ್ಸ್​ನಿಂದ ಹೊಡೆದು ಬಿಡುತ್ತಾರೆ. ಆದರೆ, ತಪ್ಪನ್ನು ತಿದ್ದಿ ಹೇಳುವವರಿದ್ದರೆ ಒಂದು ಸಂಸಾರವನ್ನೇ ಉಳಿಸಬಹುದು ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.
ಅನೇಕ ದಂಪತಿ ತಮ್ಮ ಕೌಟುಂಬಿಕ ಕಲಹವನ್ನು ಇತ್ಯರ್ಥ ಪಡೆಸಿಕೊಳ್ಳಲು ಪೊಲೀಸ್​ ಠಾಣೆಗೆ ಬರುತ್ತಾರೆ. ಅಂಥವರಿಗೆ ಪೊಲೀಸರು ವಿಶೇಷ ಸಮಾಲೋಚನೆ ನೀಡಿ, ಮನಸ್ತಾಪಗಳನ್ನು ತೊಡೆದುಹಾಕಿ ಮತ್ತೆ ಒಟ್ಟಾಗಿ ಹೆಜ್ಜೆ ಹಾಕಲು ದಾರಿ ಮಾಡಿಕೊಡುತ್ತಾರೆ. ಅದರಂತೆ ಪ್ರೇಮಿಗಳ ದಿನದಂದು ಪಂಜಾಬ್​ನ ಲೂಧಿಯಾನ ಪೊಲೀಸ್​ ಠಾಣೆಗೆ ಅನೇಕ ದಂಪತಿ ಡಿವೋರ್ಸ್​ ವಿಚಾರವಾಗಿ ಆಗಮಿಸಿದ್ದರು.
ಠಾಣೆಗೆ ಆಗಮಿಸಿದ ಅನೇಕ ದಂಪತಿಗಳಿಗೆ ಆಪ್ತ ಸಮಾಲೋಚನೆ ನೀಡಲಾಯಿತು. ಈ ವೇಳೆ 20 ದಂಪತಿ ತಮ್ಮ ಮನಸ್ಸನ್ನು ಬದಲಿಸಿಕೊಂಡು ಒಟ್ಟಿಗೆ ಜೀವನ ನಡೆಸಲು ನಿರ್ಧರಿಸಿದರು. ಅಂದು ಪ್ರೇಮಿಗಳ ದಿನವಾದ್ದರಿಂದ ಪೊಲೀಸ್​​ ಠಾಣೆ ವತಿಯಿಂದಲೇ 20 ದಂಪತಿಗೂ ಉಚಿತವಾಗಿ ಸಿನಿಮಾ ಟಿಕೆಟ್​ ನೀಡಲಾಯಿತು.
ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸಿ, ಅವರಿಗೆ ಸಿನಿಮಾ ಟಿಕೆಟ್​ ನೀಡಿದ ಲೂಧಿಯಾನ ಪೊಲೀಸರ ಕಲ್ಪನೆಯನ್ನು ಸ್ಥಳೀಯ ಜನರು ಮೆಚ್ಚಿಕೊಂಡಿದ್ದಾರೆ. ಪೊಲೀಸರು ಇದೇ ರೀತಿ ಜನಸ್ನೇಹಿ ಆಗಬೇಕೆಂದು ಅಭಿಪ್ರಾಯಪಟ್ಟಿದ್ದಾರೆ.(ಏಜೆನ್ಸೀಸ್​)
ಟ್ರಾಫಿಕ್​ ಜಾಮ್​: ವಿಶ್ವದಲ್ಲೇ ಸಿಲಿಕಾನ್​ ಸಿಟಿ ಬೆಂಗಳೂರಿಗೆ 2ನೇ ಸ್ಥಾನ! ಲಂಡನ್​ ಮೊದಲು​

ಎಲಾನ್​ ಮಸ್ಕ್ ನಾಯಿ ಫ್ಲೋಕಿ ಟ್ವಿಟರ್ ಸಿಇಒ! ಪರೋಕ್ಷವಾಗಿ ಪರಾಗ್​ಗೆ ಟಾಂಗ್​

ಸ್ನೇಹಿತೆಯ ಪತಿಯನ್ನೇ ಬಲೆಗೆ ಬೀಳಿಸಿಕೊಂಡ್ರಾ? ವಿವಾದದ ಬಗ್ಗೆ ಹನ್ಸಿಕಾ ಕೊಟ್ಟ ಸ್ಪಷ್ಟನೆ ಹೀಗಿದೆ ನೋಡಿ….

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − two =
Remember me
