ನವದೆಹಲಿ:ಮ್ಯೂನಿಚ್​ನಿಂದ ಬ್ಯಾಂಕಾಕ್​ಗೆ ಹೊರಟಿದ್ದ ಲುಫ್ತಾನ್ಸಾ ವಿಮಾನವನ್ನು ಕಳೆದ ಬುಧವಾರ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಲ್ಯಾಂಡಿಂಗ್​ ಮಾಡಲಾಗಿದೆ. ವಿಮಾನದಲ್ಲಿದ್ದ ಜರ್ಮನಿ ಯುವಕ ಮತ್ತು ಆತನ ಥಾಯ್​ ಪತ್ನಿ ನಡುವಿನ ಜಗಳವೇ ಇದಕ್ಕೆ ಕಾರಣ ಎನ್ನಲಾಗಿದೆ.
ವಿಮಾನ ಮ್ಯೂನಿಚ್​ನಿಂದ ಹೊರಟ ಸ್ವಲ್ಪ ಹೊತ್ತಿನಲ್ಲೇ ಈ ದಂಪತಿ ಮಧ್ಯೆ ಜಗಳ ಶುರುವಾಯಿತು. ಪತ್ನಿಯು ಪೈಲಟ್​ ಬಳಿ ಹೋಗಿ, ಪತಿ ತನ್ನೊಂದಿಗೆ ಕೆಟ್ಟದಾಗಿ ವರ್ತಿಸಿ ಬೆದರಿಕೆ ಹಾಕುತ್ತಿದ್ದಾನೆ ಎಂದು ದೂರಿದಳು. ನಂತರ ದಂಪತಿ ಜಗಳ ತಾರಕಕ್ಕೇರಿತು. ಅವರಿಬ್ಬರ ಅನುಚಿತ ವರ್ತನೆ ಬಗ್ಗೆ ಪೈಲಟ್​ಗಳು, ಏರ್​ ಟ್ರಾಫಿಕ್​ ಕಂಟ್ರೋಲ್​ಗೆ ಮಾಹಿತಿ ನೀಡಿದರು. ಪಾಕಿಸ್ತಾನದ ಹತ್ತಿರದ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್​ ಮಾಡಲು ಅನುಮತಿ ಕೋರಲಾಯಿತು. ಪಾಕ್​ ಈ ಮನವಿಯನ್ನು ತಿರಸ್ಕರಿಸಿದ ನಂತರ ದೆಹಲಿಯಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್​ ಮಾಡಿ, ಪ್ರಕರಣವನ್ನು ಭದ್ರತಾ ಸಿಬ್ಬಂದಿಗೆ ಒಪ್ಪಿಸಲಾಯಿತು. ಅಧಿಕಾರಿಗಳು ಜರ್ಮನ್​ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ವಿಷಯ ತಿಳಿಸಿದ್ದಾರೆ. ನಂತರ ಆ ವ್ಯಕ್ತಿ ಕ್ಷಮೆ ಯಾಚಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆ ವ್ಯಕ್ತಿ ವಿಮಾನದಲ್ಲಿ ಆಹಾರ ಎಸೆದು, ಲೈಟರ್​ ಬಳಸಿ ಹೊದಿಕೆ ಸುಡಲು ಪ್ರಯತ್ನಿಸಿದ್ದಾನೆ. ಸಿಬ್ಬಂದಿ ನೀಡಿದ ಸೂಚನೆಗಳನ್ನು ಪಾಲಿಸಿಲ್ಲ, ಹಾಗಾಗಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಲಾಗಿದೆ ಎಂದು ಸೆಂಟ್ರಲ್​ ಇಂಡಸ್ಟ್ರಿಯಲ್​ ಸೆಕ್ಯುರಿಟಿ ಫೋರ್ಸ್​ (ಸಿಐಎಸ್​ಎಫ್​) ಸಿಬ್ಬಂದಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 2 =
Remember me
