ದೆಹಲಿ:ನೈಋತ್ಯ ಭಾಗದ 173 ಜಾನುವಾರುಗಳಲ್ಲಿ ಲಂಪಿ ವೈರಸ್ ಕಾಣಿಸಿಕೊಂಡಿದ್ದು, ಇದುವರೆಗೆ ಯಾವುದೇ ಸಾವಿನ ಪ್ರಕರಣ ದಾಖಲಾಗಿಲ್ಲ ಎಂದು ದೆಹಲಿ ಸರ್ಕಾರ ತಿಳಿಸಿದೆ. ಹತ್ತು ದಿನಗಳ ಹಿಂದೆ ಮೊದಲ ಪ್ರಕರಣ ಬೆಳಕಿಗೆ ಬಂದಿದೆ. ಸುರಕ್ಷತೆಯ ದೃಷ್ಟಿಯಿಂದ ಉತ್ತರಕಾಶಿಯ 5 ಕಿ.ಮೀ ಸುತ್ತಲ ಪ್ರದೇಶದ ಜಾನುವಾರುಗಳಿಗೆ ಲಸಿಕೆ (Ring Vaccination) ನೀಡಲು ಸರ್ಕಾರ ಮುಂದಾಗಿದೆ.
ಗೊಯ್ಲಾ ಡೇರಿ ಪ್ರದೇಶದಲ್ಲಿ ಲಂಪಿ ವೈರಸ್​ಗೆ 45 ಜಾನುವಾರುಗಳು ತುತ್ತಾಗಿವೆ. ಹಾಗೆಯೇ ರೆವ್ಲಾ ಖಾನ್​ಪುರದಲ್ಲಿ 40, ಗುಮ್ಹನ್​ ಹೆರದಲ್ಲಿ 21 ಹಾಗೂ ನಝಾಫ್‌ಗಡದ 16 ಜಾನುವಾರುಗಳಲ್ಲಿ ಲಂಪಿ ವೈರಸ್​ ಕಾಣಿಸಿಕೊಂಡಿದೆ.
ಲಂಪಿ ವೈರಸ್‌ನ ಲಕ್ಷಣವಾಗಿ ಜಾನುವಾರುಗಳಲ್ಲಿ ಜ್ವರ, ವಿಪರೀತ ಹಸಿವು, ಕಡಿಮೆ ಹಾಲು ನೀಡುವುದು ಹಾಗೂ ಕಣ್ಣಿನಲ್ಲಿ ನೀರು ತುಂಬಿಕೊಳ್ಳುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಸೋಂಕಿಗೆ ತುತ್ತಾಗಿರುವ ಜಾನುವಾರುಗಳನ್ನು ಐಸೊಲೇಷನ್ ಮಾಡಲಾಗಿದೆ ಎಂದು ಪರಿಸರ, ಅರಣ್ಯ ಮತ್ತು ವನ್ಯಜೀವಿ ಅಭಿವೃದ್ಧಿ ಸಚಿವ ಗೋಪಾಲ ರೈ ತಿಳಿಸಿದ್ದಾರೆ.
ಮುಂಜಾಗ್ರತೆಯ ದೃಷ್ಟಿಯಿಂದ ದೆಹಲಿ ಸರ್ಕಾರ ಎರಡು ಪಶುವೈದ್ಯ ಸಂಚಾರಿ ಕೇಂದ್ರಗಳನ್ನು ತೆರೆದಿದ್ದು, ಇಲ್ಲಿವರೆಗೆ 11 ವಿವಿಧ ಮಾದರಿಗಳನ್ನು ಸಂಗ್ರಹಿಸಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು 4 ತಂಡಗಳನ್ನು ನಿಯೋಜನೆ ಮಾಡಿದೆ.
ಸ್ಥಳೀಯ ಆಡಳಿತ ಕಂಟ್ರೋಲ್ ರೂಂ ತೆರೆದಿದ್ದು, 8287848586 ಹೆಲ್ಪ್​ಲೈನ್ ಸಂಖ್ಯೆಗೆ ಕರೆಮಾಡಿ ಲಂಪಿ ವೈರಸ್​ ಬಗ್ಗೆ ಮಾಹಿತಿ ಪಡೆದುಕೊಳ್ಳಬಹುದು. ರೆವ್ಲಾ ಕಾನ್ಪುರದ ಗೋ ಸದನದಲ್ಲಿ ಐಸೊಲೇಷನ್​ ವಾರ್ಡ್ ತೆರೆಯಲಾಗಿದೆ ಎಂದು ಮಾಹಿತಿ ನೀಡಿದರು.
ಐಸೊಲೇಷನ್​ ವಾರ್ಡಿನಲ್ಲಿ 4500 ದನಗಳಿಗೆ ಸ್ಥಳಾವಕಾಶವಿದ್ದು, ನಗರದಲ್ಲಿರುವ 40 ಬೀಡಾಡಿ ದನಗಳನ್ನೂ ಐಸೊಲೇಷನ್​ ವಾರ್ಡಿಗೆ ಕಳುಹಿಸಲಾಗಿದೆ. ಜಾನುವಾರುಗಳಿಗೆ ಆರೋಗ್ಯಯುತ ವಾತಾವರಣ ಕಲ್ಪಿಸಲಾಗಿದ್ದು, ಸೊಳ್ಳೆಪರದೆಯನ್ನು ಅಳವಡಿಸಲಾಗಿದೆ.
ವೈರಸ್​ ಪ್ರಕರಣ ಬೆಳಕಿಗೆ ಬಂದೊಡನೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದೇವೆ. ಹೀಗಾಗಿ ಉಳಿದ ರಾಜ್ಯಗಳಿಗೆ ಲಂಪಿ ವೈರಸ್​ ಹರಡುವ ಸಾಧ್ಯತೆ ಕಡಿಮೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ವೈರಸ್​ ಕಾಣಿಸಿಕೊಂಡ ತಕ್ಷಣ ಸಾವು ಬರುವುದಿಲ್ಲ. ಶೇ.2ರಷ್ಟು ಜಾನುವಾರುಗಳು ಸಾಯುವ ಸಂಭವ ಇರುತ್ತದೆ. ರಾಜಸ್ಥಾನ ಹಾಗೂ ಗುಜರಾತಿನಲ್ಲಿ ಹೆಚ್ಚಿನ ಜಾನುವಾರುಗಳು ಸಾವಿಗೆ ತುತ್ತಾಗಿವೆ. ಜಾನುವಾರುಗಳ ಆರೋಗ್ಯ ಹದಗೆಟ್ಟಿರುವುದು ಇದಕ್ಕೆ ಕಾರಣ. ಸರಿಯಾದ ಕ್ರಮದೊಂದಿಗೆ ಜಾನುವಾರುಗಳನ್ನು ಐಸೊಲೇಷನ್ ಮಾಡುವುದರಿಂದ ಸಾವಿನ ಪ್ರಮಾಣ ತಗ್ಗಿಸಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದ್ವೆಯಾದ 3 ತಿಂಗಳ ಬಳಿಕ ಗೊತ್ತಾಯ್ತು ಆ ವಿಷ್ಯ!; ಭಯದಿಂದ ಆತ್ಮಹತ್ಯೆಗೆ ಯತ್ನಿಸಿದ 52 ವರ್ಷದ ವರ..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 20 =
Remember me
